ಬೆಂಗಳೂರು ಆಗ್ನೇಯ ಭಾಗದಲ್ಲಿ ಎರಡು ದಿನ ಮದ್ಯ ಮಾರಾಟ ಬಂದ್

Written By:
Subscribe to Oneindia Kannada

ಬೆಂಗಳೂರು, ಫೆ 2: ಬೆಂಗಳೂರು ಆಗ್ನೇಯ ಭಾಗದ ವ್ಯಾಪ್ತಿಯಲ್ಲಿ ಶುಕ್ರವಾರ (ಫೆ 3) ನಾಲ್ಕು ಗಂಟೆಯಿಂದ, ಶನಿವಾರ ಸಂಜೆ ಐದು ಗಂಟೆಯವರಿಗೆ ಮದ್ಯ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ರಥಸಪ್ತಮಿ ಪ್ರಯುಕ್ತ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಆಗ್ನೇಯ ಭಾಗದ ಆಡುಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಊರಹಬ್ಬ ಮತ್ತು ಪಲ್ಲಕ್ಕಿ ಉತ್ಸವದಲ್ಲಿ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ. (ರಥಸಪ್ತಮಿ, ಸಪ್ತಕುದುರೆಗಳ ರಥವೇರುವ ಸೂರ್ಯನಿಗೆ ನಮಸ್ಕಾರ)

ಈ ಸಂದರ್ಭದಲ್ಲಿ ಹಬ್ಬ ಮತ್ತು ಉತ್ಸವದ ಆಚರಣೆಗೆ ಯಾವುದೇ ಅಡಚಣೆ ಬರದೇ ಇರಲು ಮತ್ತು ಕಾನೂನು, ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮದ್ಯ ಮಾರಾಟ ನಿಷೇಧ ಜಾರಿಯಾಗಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ratha Sapthami: Two days liquor ban in Adugodi Police limit in Bengaluru

ಆಡುಗೋಡಿ ಠಾಣಾ ವ್ಯಾಪ್ತಿಯ ಎಲ್ಲಾ ರೀತಿಯ ಮದ್ಯದ ಅಂಗಡಿಗಳಲ್ಲದೇ, ಕೋರಮಂಗಲ ಠಾಣೆಯ ಕೆಲವೊಂದು ಮದ್ಯದ ಅಂಗಡಿಗಳನ್ನೂ ಎರಡು ದಿನ ಮುಚ್ಚಲು ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ ಕಲಂ 144ರ ಉಪಕಲಂ (1) ಮತ್ತು (3) ರನ್ವಯ ಈ ಆದೇಶ ಹೊರಡಿಸಲಾಗಿದೆ ಎಂದು ಆಯುಕ್ತರ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ratha Sapthami: Two days liquor ban in Adugodi Police limit in South East of Bengaluru from Feb 3 to Feb 4, Press release from Bengaluru Police Commissioner Praveen Sood.
Please Wait while comments are loading...