ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮುಂಬೈ ಕಿರುತೆರೆ ನಟಿ ಮೇಲೆ ಗ್ಯಾಂಗ್ ರೇಪ್

|
Google Oneindia Kannada News

ಬೆಂಗಳೂರು, ಮೇ. 16: ಸಿನಿಮಾದಲ್ಲಿ ಅವಕಾಶ ಕೇಳಿಕೊಂಡು ಬಂದ ಮುಂಬೈ ಮೂಲದ ಕಿರುತೆರೆ ನಟಿಯ ಮೇಲೆ ಕನ್ನಡ ನಿರ್ಮಾಪಕರೆಂದು ಹೇಳಿಕೊಂಡಿರುವ ಐವರು ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಹಿಳಾ ಆಯೋಗದಲ್ಲಿ ದೂರೊಂದು ದಾಖಲಾಗಿದೆ. ತಾವು ನಿರ್ಮಾಪಕರು ಎಂದು ಹೇಳಿಕೊಂಡಿದ್ದ ಇಬ್ಬರು ಕೋರಮಂಗಲದ ಖಾಸಗಿ ಹೊಟೆಲ್ ವೊಂದಕ್ಕೆ ಕರೆಸಿಕೊಂಡು ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾಳೆ.[ಅಶ್ಲೀಲ ವಿಡಿಯೋ ಹಂಚಿಕೆದಾರ ಪೊಲೀಸರ ಬಲೆಗೆ ]

rape

ನಾವು ನಿನ್ನ ಮೇಲೆ ಅತ್ಯಾಚಾರ ಮಾಡುತ್ತಿರುವ ವಿಡಿಯೋ ಮಾಡಿದ್ದೇವೆ. ಪೊಲೀಸರಿಗೆ ತಿಳಿಸಲು ಪ್ರಯತ್ನ ಮಾಡಿದರೆ ಅದನ್ನು ಅಂತರ್ಜಾಲಕ್ಕೆ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಕಳೆದ ಮಾರ್ಚ್ 25ರಂದು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಕಿರುತೆರೆ ನಟಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ದಾಖಲಿಸಿದ್ದಾರೆ.[ಬೆಂಗಳೂರು: ಹೈಸ್ಕೂಲ್ ವಿದ್ಯಾರ್ಥಿಗಳಿಂದ ಅತ್ಯಾಚಾರ]

ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು, ಆಗ್ನೇಯ ವಿಭಾಗ ಡಿಸಿಪಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ನಿರ್ಮಾಪಕರೆಂದು ಹೇಳಿಕೊಂಡಿದ್ದ ಉದ್ಯಮಿಗಳ ಹೆಸರನ್ನು ಪೊಲೀಸರು ಬಹಿರಂಗ ಮಾಡಿಲ್ಲ.

English summary
A Hindi television actress, who had come to Bengaluru hoping to make it big in the southern film industry, was allegedly raped by two Business men act like producers of Kannada Industry. The duo even recorded the incident and threatened to upload the video on the Internet if she complained to the police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X