ಬೆಂಗಳೂರು : ಅತ್ಯಾಚಾರ ಆರೋಪ, ವೈಸ್ ಚಾನ್ಸಲರ್ ಬಂಧನ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 06 : ಯುವತಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್‌ನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಬೆದರಿಕೆ ಹಾಕಿ ಸತತ ಎರಡು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಆನೇಕಲ್ ಸಮೀಪವಿರುವ ಅಲಾಯನ್ಸ್ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್ ಮಧುಕರ್ ಜಿ ಅಂಗೂರ್ ಅವರನ್ನು ಶುಕ್ರವಾರ ರಾತ್ರಿ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ವೈಸ್ ಚಾನ್ಸಲರ್ ಬಂಧಿಸಲಾಗಿದೆ. ['ಗ್ಯಾಂಗ್ ರೇಪ್‌, ಜೈಲುವಾಸ ನನ್ನ ಹೋರಾಟಕ್ಕೆ ಪ್ರೇರಣೆ']

madiwala

ಮಧುಕರ್ ಜಿ ಅಂಗೂರ್ ಅವರು ತಮ್ಮ ಸಂಬಂಧಿಯಾದ 32 ವರ್ಷದ ಯುವತಿ ಮೇಲೆ ಸತತ ಎರಡು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವತಿ ಈ ಕುರಿತು ಮನೆಯಲ್ಲಿ ಮಾಹಿತಿ ನೀಡಿದ್ದಳು. [ಮಹಿಳಾ ದೌರ್ಜನ್ಯ ವಿರುದ್ದ ದನಿಯಾದ ವಾಮಾ ಬಲ್ದೋಟ]

ಸಂತ್ರಸ್ತ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ. ವಿವಿಯಲ್ಲಿಯೇ ಯುವತಿ ಕೆಲಸ ಮಾಡುತ್ತಿದ್ದು, ಆಕೆಯನ್ನು ಬೆದರಿಸಿ ಮಧುಕರ್ ಅವರು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Madiwala police arrested Dr. Madhukar G. Angur Vice Chancellor of Alliance university, Anekal in rape case. Alliance University established in Karnataka year 2010.
Please Wait while comments are loading...