ಮಹಿಳಾ ಪೇದೆ ಮೇಲೆ ಕಸ್ಟಮ್ಸ್ ಅಧಿಕಾರಿಯಿಂದ ಅತ್ಯಾಚಾರ!

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 13: ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಮಹಿಳಾ ಪೊಲೀಸ್ ಪೇದೆಯೊಬ್ಬರ ಮೇಲೆ ವಿಮಾನ ನಿಲ್ದಾಣದ ಕಸ್ಟಮ್ಸ್ ಇನ್ಸ್ ಪೆಕ್ಟರ್‍ ರೊಬ್ಬರು ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನನ್ನ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ನಾನು ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಮಹಿಳಾ ಪೊಲೀಸ್ ಪೇದೆ ದುಃಖ ತೋಡಿಕೊಂಡಿದಾರೆ.

ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ 9 ದಿನಗಳಿವೆ. ಆದರೆ ಪೊಲೀಸರು ಆರೋಪಿಯನ್ನ ಬಂಧಿಸಿಲ್ಲ. ಕನಿಷ್ಟ ಪಕ್ಷ ಪೊಲೀಸರು ಆತನನ್ನು ಕರೆದು ವಿಚಾರಣೆ ಕೂಡ ನಡೆಸಿಲ್ಲ ಎಂದು ಮಹಿಳಾ ಪೊಲೀಸ್ ಪೇದೆ ಹೇಳಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್) ದ ಕಸ್ಟಮ್ ಇನ್ಸ್ ಪೆಕ್ಟರ್ ಹೇಮರಾಜ್ ಗುರ್ಜರ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು 29 ವರ್ಷದ ಮಹಿಳಾ ಸಿಐಎಸ್‍ಎಫ್ ಪೇದೆ ಆರೋಪಿಸಿದ್ದಾರೆ.

Molestation case booked against KIAL Customs Inspector by CISF woman constable

ಘಟನೆ ವಿವರ: ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಪೋಷಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಯಲಹಂಕ ಉಪನಗರದ ತನ್ನ ನಿವಾಸಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ.

ಮದುವೆಯಾಗಲು ನಿರಾಕರಿಸಿದ ಇನ್ಸ್ ಪೆಕ್ಟರ್ ಗೆ ಈಗಾಗಲೇ ಮದುವೆಯಾಗಿರುವ ಮಾಹಿತಿ ಸಿಕ್ಕಿದೆ. 2013 ರಲ್ಲೇ ಮದುವೆಯಾಗಿ ಎರಡು ಮಕ್ಕಳಿದ್ದು, ಹೆಂಡತಿ ಮಕ್ಕಳು ರಾಜಸ್ಥಾನದಲ್ಲಿ ವಾಸವಿರುವುದಾಗಿ ಆತನೇ ನನ್ನ ಬಳಿ ಹೇಳಿಕೊಂಡಿದ್ದಾನೆ ಎಂದು ಮಹಿಳಾ ಪೇದೆ ಹೇಳೀದ್ದಾರೆ.

ರಾಜಸ್ಥಾನದಿಂದ ಬಂದ ಹೇಮರಾಜ್ ತಂದೆ ಸೃಜನ್ ಸಿಂಗ್ ಹಾಗೂ ಸಹೋದರ ನಿಹಾಲ ಸಿಂಗ್ ಅವರು ಕೂಡಾ ಮಹಿಳಾ ಪೇದೆಗೆ ಬೆದರಿಕೆ ಹಾಕಿದ್ದಾರೆ. ಕೊನೆಗೆ ವಿಧಿ ಇಲ್ಲದೆ ಮಾರ್ಚ್ 5 ರಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಪೇದೆ ಪ್ರಕರಣ ದಾಖಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 29 year old CISF woman constable alleged that Customs Inspector Hemanth Gurjar has molested and raped her. A case has been booked in Bagaluru police station.
Please Wait while comments are loading...