ಸಾಹಿತಿ ಕೆವೈಎನ್ ರಂಗಗೀತೆಗಳನ್ನು ಹೊರ ತಂದ ಅವಿರತ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 25: ಕನ್ನಡ ರಂಗಭೂಮಿಯಲ್ಲಿ ಹಲವಾರು ಯಶಸ್ವಿ ನಾಟಕಗಳನ್ನು ರಚಿಸಿ ಜನಮನ್ನಣೆ, ಪ್ರಶಸ್ತಿಗಳನ್ನೂ ಗಳಿಸಿಕೊಂಡಿರುವ ಖ್ಯಾತ ನಾಟಕಕಾರ ಡಾ|| ಕೆ.ವೈ.ನಾರಾಯಣಸ್ವಾಮಿ, ಒಬ್ಬ ಸಹೃದಯಿ ಕವಿಯೂ ಹೌದು. ನಾಟಕಗಳಿಗಾಗಿ, ಅವರು ರಚಿಸಿರುವ ಎಲ್ಲಾ ಹಾಡುಗಳು ಕೇಳುಗರ ಮನಸೂರೆಗೊಂಡಿವೆ.

ಈ ಎಲ್ಲಾ ಹಾಡುಗಳನ್ನು ಒಟ್ಟುಗೂಡಿಸಿ, 'ಕೆ.ವೈ.ಎನ್. ರಂಗಗೀತೆಗಳು' ಎಂಬ ಚೆಂದದ ಪುಸ್ತಕ ಸಿದ್ದಗೊಂಡಿದೆ. ಜೊತೆಗೆ, ಅವರ ನಾಟಕಗಳಾದ *ಅನಭಿಜ್ಞ ಶಾಕುಂತಲ*, *ಪಂಪಭಾರತ* ಹಾಗೂ *ಚಕ್ರರತ್ನ* ನಾಟಕಗಳೂ ಸಹ ಪುಸ್ತಕವಾಗಿ ಬಿಡುಗಡೆಯಾಗಲಿವೆ.

Rangavalli : Writer KY Narayanaswamy books release Aviratha

ಈ ಪುಸ್ತಕದ ಬಿಡುಗಡೆ ಸಮಾರಂಭವನ್ನು 'ಅವಿರತ ಪ್ರತಿಷ್ಠಾನ'ವು ಆಯೋಜಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಬೇಕೆಂದು ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ಪುಸ್ತಕ ಬಿಡುಗಡೆಯ ಜೊತೆಗೆ, ರಾಮಚಂದ್ರ ಹಡಪದ್ ಹಾಗೂ ಅನನ್ಯ ಭಟ್ ಅವರ ರಂಗಗೀತೆಗಳ ಗಾಯನವೂ ಕಾರ್ಯಕ್ರಮವನ್ನು ಮೆರುಗುಗೊಳಿಸಲಿದೆ. ಹೊಸ ಪುಸ್ತಕ, ಹಾಡು, ಮಾತು ಹಾಗು ಒಂದು ಸೊಗಸಾದ ನೆನಪಿಗೆ ಎಲ್ಲರೂ ಜೊತೆಯಾಗಬಹುದು.

ದಿನಾಂಕ: 27 ನವೆಂಬರ್ 2016, ಭಾನುವಾರ

Rangavalli : Writer KY Narayanaswamy books release Aviratha

ಸ್ಥಳ
ಪ್ರಭಾತ್ ರಂಗಮಂದಿರ
ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ ಆವರಣ ಬಸವೇಶ್ವರ ನಗರ ೭೯
ಸಮಯ:
ಸಂಜೆ 4.30 ಗಂಟೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಸತೀಶ್ ಕೆ.ಟಿ. 98800 86300
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಅವಿರತ ಪ್ರತಿಷ್ಠಾನದ ಫೇಸ್ ಬುಕ್ ಪುಟ

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Aviratha Prathishtaana has orgnaised Rangavalli a unique book release of Writer KY Narayanaswamy and Musical program at KEA, Prabhat Rangamandira, Rajajinagar, Bengaluru on November 27, 2016.
Please Wait while comments are loading...