​ರಂಗ ಶಂಕರದಲ್ಲಿ 'ಬೀದಿಯೊಳಗೊಂದು ಮನೆಯ ಮಾಡಿ'

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 16: "ಮೈ ಹೂಂ ಯೂಸುಫ್ ಔರ್ ಯೇ ಹೈ ಮೇರಾ ಭಾಯಿ " ಹಾಗೂ ಗಿರೀಶ್ ಕಾರ್ನಾಡರ ನಾಟಕ "ಬೆಂದಕಾಳು ಆನ್ ಟೋಸ್ಟ್ " ನಾಟಕವನ್ನು ಆಧರಿಸಿದ ಮರಾಠಿ ನಾಟಕ "ಉಣೇ ಪುರೇ ಶಹರ್ ಏಕ್ " ನಾಟಕಗಳ ನಿರ್ದೇಶಕ ಮೋಹಿತ್ ಟಾಕಲ್ಕರ್ ಅವರ ನಿರ್ದೇಶನದ ಕನ್ನಡ ನಾಟಕ "ಬೀದಿಯೊಳಗೊಂದು ಮನೆಯ ಮಾಡಿ ." ಶನಿವಾರದಂದು ರಂಗ ಶಂಕರದಲ್ಲಿ ನೋಡಿ ಆನಂದಿಸಿ

ಅನಂತ ಚತುರ್ದಶಿಯ ದಿನ ಇಡೀ ಪುಣೆ ಒಂದು ಸಂಭ್ರಮದಲ್ಲಿ ಮುಳುಗಿಬಿಡುತ್ತದೆ. ಗಣೇಶ ವಿಸರ್ಜನೆಯ ಮೆರವಣಿಗೆ . ಸುಮಾರು ಮೂವತ್ತು ಮೂವತ್ತೆರಡು ಗಂಟೆಗಳ ನಿರಂತರ ಮೆರವಣಿಗೆ ಇದು .

Rangashanakara presents Beediyolagondu Maneya Madi Play

ಪುಣೆಯ ಲಕ್ಷ್ಮಿ ರಸ್ತೆ ಈ ಮೆರವಣಿಗೆಯ ಮುಖ್ಯ ಭಾಗ . ಈ ರಸ್ತೆಯ ಎರಡೂ ಬದಿಯಲ್ಲಿನ ಮನೆಗಳ ಬಾಲ್ಕನಿಗಳಿಗೆ ಅಂದು ವಿಪರೀತ ಬೇಡಿಕೆ . ಅಲ್ಲಿನ ಫುಟ್ ಪಾತುಗಳಂತೂ ಕಾಲಿಡಲು ಜಾಗವಿಲ್ಲದೇ ಕಿಕ್ಕಿರಿದಿರುತ್ತವೆ . ಆ ಮೆರವಣಿಗೆ ನೋಡದ ಭಕ್ತ ಭಕ್ತನೇ ಅಲ್ಲ ಅನ್ನುವಷ್ಟರ ಮಟ್ಟಿಗಿನ ಪರಿಸ್ಥಿತಿ ಉಂಟಾಗಿರುತ್ತದೆ .

ನಮ್ಮ ನಾಯಕ ಈ ವರ್ಷ ತನ್ನ ಮನೆಯ ಬಾಲ್ಕನಿಯ ಬಾಗಿಲನ್ನು ಮುಚ್ಚಿ ಮೆರವಣಿಗೆ ನೋಡಬಾರದು ಎಂದು ತೀರ್ಮಾನಿಸಿದ್ದಾನೆ . ಅಲ್ಲೇ ಶುರುವಾಗುವುದು ಸಾಂಸಾರಿಕ ರಾಜಕೀಯ , ಧಾರ್ಮಿಕ ರಾಜಕೀಯ . ಒಳ -ಹೊರಗಿನ ಒತ್ತಡಗಳು , ವಾದಕ್ಕೂ -ಜಗಳಕ್ಕೂ ತಯಾರಾದ ಬಂಧುಗಳು , ನೆರೆ -ಹೊರೆಯವರು . ಮುಚ್ಚಿದ ಬಾಗಿಲ ಸುತ್ತ ನಾಟಕ ಬಿಚ್ಚಿಕೊಳ್ಳುತ್ತದೆ .

Rangashanakara presents Beediyolagondu Maneya Madi Play

ಮರಾಠಿ ಮೂಲ ಢೋಲ್ ತಾಷೆ : ರಚನೆ : ಚಂ ಪ್ರ ದೇಶಪಾಂಡೆ
ಕನ್ನಡಕ್ಕೆ : ಶ್ರೀಪತಿ ಮಂಜನಬೈಲ್, ಸುರೇಂದ್ರನಾಥ್
ನಿರ್ದೇಶನ : ಮೋಹಿತ್ ಟಾಕಲ್ಕರ್
ಡಿಸೆಂಬರ್ 17 | ಮಧ್ಯಾಹ್ನ 3:30 ಮತ್ತು ಸಂಜೆ 7:30
ರಂಗ ಶಂಕರ | ಟಿಕೆಟ್ ದರ 150/- ,
ಟಿಕೆಟ್‌ಗಳು ರಂಗ ಶಂಕರದಲ್ಲಿ ದೊರೆಯುತ್ತವೆ. paytm ಮತ್ತು debit/credit card ಸ್ವೀಕರಿಸಲಾಗುವುದು
ಆನ್‌ಲೈನ್ ಟಿಕೆಟ್‌ಗಳು : www.bookmyshow.com

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Beediyolagondu Maneya Maadi' in a satirical and a humorous vein comments on the degenerating nature of religious festivals. The play also successfully evokes the mores of a middle-class, Kannada household as everybody await the final outcome of the battle of ideologies.
Please Wait while comments are loading...