ರಂಗಶಂಕರದಲ್ಲಿ ದ.ರಾ ಬೇಂದ್ರೆ ನೆನಪಲ್ಲಿ 'ರಂಗ ಯುಗಾದಿ'

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 02: ಕಳೆದ ಹತ್ತು ವರ್ಷಗಳಿಂದ ರಂಗಶಂಕರದಲ್ಲಿ 'ರಂಗಯುಗಾದಿ'ಯನ್ನು ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 03ರಂದು (ಭಾನುವಾರ) ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ನೆನಪಿನಲ್ಲಿ ರಂಗಯುಗಾದಿಯನ್ನು ಹಮ್ಮಿಕೊಳ್ಳಲಾಗಿದೆ.

ನಾಟಕ, ಕತೆ, ಕಾವ್ಯ, ವಾಚನ, ಸಂವಾದ, ಗೆಳೆಯರು, ಹರಟೆ, ಹಬ್ಬದ ಊಟ, ಸಾಹಿತ್ಯ, ಇತ್ಯಾದಿಗಳ ಸಂಭ್ರಮವನ್ನು ಕಂಡು ಆನಂದಿಸಬಹುದು. [ಗಂಗಾವತರಣ ಗೀತೆಗೆ 72ರ ಯೌವನ]

Kannada Poet Da. Ra. Bendre

ಯುಗಾದಿಯನ್ನು ವಿಭಿನ್ನ ರೀತಿಯಲ್ಲಿ, ರಂಗ ಸಂವೇದನೆಯೊಂದಿಗೆ ಆಚರಿಸುವುದು ರಂಗ ಶಂಕರ ಪಾಲಿಸಿಕೊಂಡು ಬಂದಿರುವ ಒಂದು ಸಂಪ್ರದಾಯ. ನಾಟಕಗಳಲ್ಲದೇ ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಕಾರಗಳನ್ನೂ ಒಳಗೊಂಡ ಒಂದು ಸಂಭ್ರಮವೇ ಈ ರಂಗ ಯುಗಾದಿ. ಬೆಂಗಳೂರಿನ ಜನತೆಯನ್ನು ಒಂದು ಹಬ್ಬದ ವಾತಾವರಣವನ್ನು ನಿರ್ಮಿಸಿ ಅದರ ಮೂಲಕ ರಂಗ ಸಂವೇದನೆಯನ್ನು ಹಂಚಿಕೊಳ್ಳುವುದು ರಂಗ ಯುಗಾದಿಯ ಹಿಂದಿನ ಉದ್ದೇಶ.

ಈ ಹಿಂದೆ ಚಂದ್ರಶೇಖರ ಕಂಬಾರ, ಪಿ ಲಂಕೇಶ, ಪೂರ್ಣಚಂದ್ರ ತೇಜಸ್ವಿಯರ ಹೆಸರಿನಲ್ಲಿ ರಂಗ ಯುಗಾದಿಯನ್ನು ಆಚರಿಸಿದ್ದಲ್ಲದೇ, ಜಾನಪದ ನಾಟಕ ಪ್ರಕಾರಗಳು, ಕಾಮೆಡಿ ನಾಟಕಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರ ನೆನಪಿನಲ್ಲಿ ಕೂಡಾ ರಂಗ ಯುಗಾದಿಯನ್ನು ಆಚರಿಸಲಾಗಿದೆ.

ರಂಗಶಂಕರ ವಿಳಾಸ
36/2, 8ನೇ ಅಡ್ಡರಸ್ತೆ
(ಜೆಪಿ ನಗರ ಅಂಚೆ ಕಚೇರಿ ಪಕ್ಕ)
2ನೇ ಹಂತ, ಜೆಪಿ ನಗರ,
ಬೆಂಗಳೂರು 560 078.

ವಿಳಾಸಕ್ಕೆ ಮಾರ್ಗಸೂಚಿ:
http://binged.it/1SJgAhV

ಇಡೀ ದಿನದ ಕಾರ್ಯಕ್ರಮಕ್ಕೆ ಟಿಕೆಟ್ ದರ : 150 ರು

ಧಾರವಾಡದ ತಿನಿಸುಗಳು , ಬೇಂದ್ರೆ ಕವನ ವಾಚನ, ಧ್ವನಿ ಮುದ್ರಣ, ಸಾಕ್ಷ್ಯಚಿತ್ರ ಪ್ರದರ್ಶನ ಎಲ್ಲವನ್ನು ಕಾಣಬಹುದು. ನಾಟಕಕಾರಾದ ಗಿರೀಶ್ ಕಾರ್ನಾಡ್, ಎಸ್ ಸುರೇಂದ್ರನಾಥ್, ಗೋಪಾಲ ವಾಜಪೇಯಿ, ಕವಿ ಜಯಂತ್ ಕಾಯ್ಕಿಣಿ, ಯೋಗರಾಜ ಭಟ್, ಪ್ರತಿಭಾ ನಂದಕುಮಾರ್, ಸಾಹಿತಿ ಜೋಗಿ, ಸಂಧ್ಯಾರಾಣಿ, ನಿರ್ದೇಶಕ ಟಿಎನ್ ಸೀತಾರಾಮ್, ಗಾಯಕಿ ಎಂಡಿ ಪಲ್ಲವಿ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ವಿವರಗಳನ್ನು ಸ್ಲೈಡ್ ಗಳಲ್ಲಿ ನೋಡಿ

ರಂಗಶಂಕರದಲ್ಲಿ ಬೇಂದ್ರೆ ನೆನಪಲ್ಲಿ 'ರಂಗ ಯುಗಾದಿ'

ರಂಗಶಂಕರದಲ್ಲಿ ಬೇಂದ್ರೆ ನೆನಪಲ್ಲಿ 'ರಂಗ ಯುಗಾದಿ'

-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ranga Ugadi Presented by Ranga Shankara, JP Nagar, Bengaluru In memory of Kannada Poet Da. Ra. Bendre. Ranga ugadi is a tradition at Ranga Shankara On April 03, 2016 special drama, poem recital, folk art performance will be staged. Well-known theatre directors, actors and troupes participate.
Please Wait while comments are loading...