ರಂಗಶಂಕರಕ್ಕೆ ಮತ್ತೆ ಬಂದ ಗುಮ್ಮ ಬಂದ ಗುಮ್ಮ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 29: ರಂಗ ಶಂಕರದ ಬಹು ಜನಪ್ರಿಯ ಮಕ್ಕಳ ನಾಟಕ 'ಗುಮ್ಮ ಬಂದ ಗುಮ್ಮ' ಆಗಸ್ಟ್ 30 ರಂದು ಮತ್ತೆ ಪ್ರದರ್ಶನಗೊಳ್ಳುತ್ತಿದೆ.

2006 ರಲ್ಲಿ ಮೊದಲ ಪ್ರಯೋಗ ಕಂಡದಿದ್ದು, ಇಂದಿಗೂ ಮಕ್ಕಳಿಗೆ ಮತ್ತು ಪೋಷಕರಿಗೆ ಅತೀ ಪ್ರಿಯವಾದ ನಾಟಕವಾಗಿದೆ.
ಅಂದಿನಿಂದ ಇಂದಿನ ವರೆಗೂ, ಬಹಳಷ್ಟು ಬಾರಿ ಮರು ನಿರ್ಮಿಸಲ್ಪಟ್ಟ ಈ ನಾಟಕ , ಈಗ,ಮತ್ತೆ ಸುರೇಂದ್ರನಾಥ್ ಎಸ್. ರವರ ನಿರ್ದೇಶನದಲ್ಲಿ ನಿಮ್ಮ ಮುಂದೆ ಕಾಣಲಿದೆ.

Ranga Shankara's Kannada play for children, "Gumma Banda Gumma

ಮೂಲ ಜರ್ಮನ್ ನಾಟಕ ಮ್ಯಾಕ್ಸ್ ಅಂಡ್ ಮಿಲಿ ಯ ಆಧಾರಿತ 'ಗುಮ್ಮ ಬಂದ ಗುಮ್ಮ', ಮಕ್ಕಳ ಮನಸ್ಥಿತಿಯನ್ನು ಬಿಂಬಿಸುತ್ತದೆ, ಮಕ್ಕಳು ಹೇಗೆ ಭಾಷೆ, ಬಣ್ಣ, ಮೇಲು ಕೀಳಿನ ಹಂಗಿಲ್ಲದೇ, ಮತ್ತೊಬ್ಬರೊಂದಿಗೆ ಬೆರೆಯುತ್ತಾರೆಂಬುದೇ ಈ ನಾಟಕದ ತಿರುಳು.

ನಾಟಕದ ವಿವರ
ನಾಟಕದ ಹೆಸರು: 'ಗುಮ್ಮ ಬಂದ ಗುಮ್ಮ'
ನಿರ್ದೇಶನ : ಸುರೇಂದ್ರನಾಥ್ ಎಸ್.
ಸ್ಥಳ : ರಂಗ ಶಂಕರ
ದಿನಾಂಕ ಮತ್ತು ಸಮಯ : ಆಗಸ್ಟ್ 30 , ಸಂಜೆ 7:30 ಕ್ಕೆ
ಟಿಕೆಟ್ ದರ : ರೂ. 100/-
ಆನ್ ಲೈನ್ ಬುಕ್ಕಿಂಗ್:www.bookmyshow.com

Ranga Shankara's Kannada play for children, "Gumma Banda Gumma

ಟಿಕೆಟ್‍ಗಳು ರಂಗ ಶಂಕರದಲ್ಲಿ ದೊರೆಯುತ್ತವೆ.

ದೂರವಾಣಿ: 080-26493982 / 26592777

ಬೆಂಗಳೂರಿನ ಸಾಂಸ್ಕೃತಿಕ ವಲಯದಲ್ಲಿ ತನ್ನದೇ ಛಾಪು ಮೂಡಿಸಿರುವ ರಂಗ ಶಂಕರ, ರಂಗ ಪ್ರಯೋಗಗಳಿಗೆ ಸ್ಥಳಾವಕಾಶ ಮಾಡಿಕೊಡುವುದಷ್ಟೇ ಅಲ್ಲದೇ, ತನ್ನದೇ ಆದ ಸ್ವತಂತ್ರ ಪ್ರಯೋಗಗಳು, ಕಾರ್ಯಾಗಾರಗಳು ಮತ್ತು ಉತ್ಸವಗಳನ್ನು ನಡೆಸುತ್ತಾ ಬಂದಿದೆ.

ಆಸ್ವಾದ, ಅಹ್ಲಾದದ ಉದ್ಗಾರವಾದ 'ಆಹಾ.!' ಎಂಬ ಹೆಸರಿನಲ್ಲಿ, ಮಕ್ಕಳಿಗಾಗಿ ರಂಗಭೂಮಿಯ ಚಟುವಟಿಕೆಗಳನ್ನು 9 ವರ್ಷಗಳ ಹಿಂದೆ ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ, ವರ್ಷಾವಧಿ ಮಕ್ಕಳಿಗಾಗಿ ಅಂತರಾಷ್ಟ್ರೀಯ ಮಕ್ಕಳ ನಾಟಕೋತ್ಸವ, ಬೇಸಿಗೆ ಶಿಬಿರ , ಮಕ್ಕಳ ನಾಟಕ ಪ್ರದರ್ಶನಗಳು ಮತ್ತು ಶಾಲಾ ಪ್ರದರ್ಶನಗಳು ಮುಂತಾದವು ಪ್ರಮುಖವಾದವು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ranga Shankara's Kannada play for children, "Gumma Banda Gumma" will be staged at Ranga Shankara on August 30th. It is the first production under AHA!, Ranga Shankara's sustained Theatre For Children programme supported by Britannia Industries Ltd
Please Wait while comments are loading...