ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಪ ರಮ್ಯಾಗೆ ಏನು ತಿಳಿದಿಲ್ಲ, ಅವಳನ್ನು ದೂಷಿಸಬೇಡಿ: ಅಂಬರೀಶ್

By Mahesh
|
Google Oneindia Kannada News

ಬೆಂಗಳೂರು, ಜೂನ್ 21: ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಹು ನಿರೀಕ್ಷಿತ ಸುದ್ದಿಗೋಷ್ಠಿ ಮಂಗಳವಾರ ಬೆಳಗ್ಗೆ ಜೆಪಿ ನಗರದ ಅವರ ನಿವಾಸದಲ್ಲಿ ನಡೆಯಿತು. ಸುದ್ದಿಗೋಷ್ಠಿಯುದ್ದಕ್ಕೂ ಸಿಎಂ ಸಿದ್ದರಾಮಯ್ಯ ಅವರನ್ನು ಬೈದ ಅಂಬರೀಶ್ ಅವರು ಮಾಜಿ ಸಂಸದೆ ರಮ್ಯಾಗೆ ಕ್ಲೀನ್ ಚಿಟ್ ನೀಡಿದ್ದು ವಿಶೇಷವಾಗಿತ್ತು.[ಅಂಬರೀಶ್ ಅವನತಿಗೆ ಕಾರಣವಾದ ಹೆಂಗಸಿನ ಬಗ್ಗೆ ಜಗ್ಗೇಶ್ ಟ್ವೀಟ್]

'ಸಚಿವ ಸ್ಥಾನದಿಂದ ನನ್ನನ್ನು ಕೈಬಿಟ್ಟಿದ್ದರಿಂದ ನನ್ನ ಇಮೇಜ್ ಗೆ ಧಕ್ಕೆ ಆಗಿರುವುದು ನಿಜ. ಸೌಜನ್ಯಕ್ಕಾದ್ರೂ ನನ್ನ ಕರೆದು ಮಾತಾಡಿಸ್ಬೇಕಲ್ವ. ನಾನೇನು ಕಾಲಿನ ಚಪ್ಪಲಿನಾ ಬೇಕಾದ ಹಾಕಿಕೊಂಡು ಬೇಡ ಅಂದಾಗ ಬಿಡೋಕೆ? ಸ್ವಲ್ಪನೂ ಡಿಗ್ನಿಟಿ ಇಲ್ಲಾ ಅದಕ್ಕೆ ನಾನು ರಾಜೀನಾಮೆ ನೀಡಿದೆ' ಎಂದು ಅಂಬರೀಶ್ ಹೇಳಿದರು. [ಪೂರ್ಣ ವಿವರ ಇಲ್ಲಿ ಓದಿ]

ರಮ್ಯಾಗೆ ಕ್ಲೀನ್ ಚಿಟ್: ರಮ್ಯಾ ಅವರಿಗೆ ಇನ್ನೂ ರಾಜಕೀಯ ತಿಳಿದಿಲ್ಲ. ನನ್ನ ಹಾಗೆ ಚಿತ್ರರಂಗದಿಂದ ಬಂದಿದ್ದು, ಅವರ ಪರ ನಾನು ಪ್ರಚಾರ ಮಾಡಿದ್ದೆ. ರಮ್ಯಾ ಅವರನ್ನು ಈ ವಿಷಯದಲ್ಲಿ ತರಬೇಡಿ ಎಂದು ಅಂಬರೀಶ್ ಅವರು ರಮ್ಯಾಗೆ ಕ್ಲೀನ್ ಚಿಟ್ ನೀಡಿದರು. ಈ ಮೂಲಕ ಅಂಬರೀಶ್ ಅವರ ರಾಜಕೀಯ ಅವನತಿಗೆ ರಮ್ಯಾ ಅವರೇ ಕಾರಣ ಎಂದು ಸುದ್ದಿ ಹಬ್ಬಿಸುತ್ತಿದ್ದ ದುಷ್ಕರ್ಮಿಗಳಿಗೆ ಭಾರಿ ಪೆಟ್ಟು ಬಿದ್ದಿದೆ.[ಆಕೆಯೊಬ್ಬಳನ್ನೇ ಗುರಿಯಾಗಿಸುವುದು ಕುತರ್ಕ!]

Ramya is not behind the conspiracy in sacking me : MH Ambareesh

ಇತ್ತೀಚೆಗೆ ಬಿಜೆಪಿ ನಾಯಕ ಕಮ್ ನಟ ಜಗ್ಗೇಶ್ ಅವರು ಅಂಬರೀಶ್ ಅವರ ಪರ ಟ್ವೀಟ್ ಮಾಡಿ, 2015ರಲ್ಲೇ ನಾನು ನಿಮಗೆ ಎಚ್ಚರಿಸಿದ್ದೆ. ಆ ಹೆಂಗಸಿನ ಬಗ್ಗೆ ಹುಷಾರಾಗಿರಬೇಕಿತ್ತು ಎಂದಿದ್ದರು. ಜೊತೆಗೆ ಟ್ವೀಟೊಂದಿಗೆ ಉತ್ತರಿಸುತ್ತಾ ಆಕೆಯನ್ನು ಬ್ಲ್ಯಾಕ್ ಮಾಂಬಾ ಎಂದು ವಿಷಕಾರಿ ಹಾವಿಗೆ ಹೋಲಿಸಿದ್ದರು. ಜಗ್ಗೇಶ್ ಅವರು ಯಾರ ಬಗ್ಗೆ ಹೇಳುತ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು,[ಜನಮತ : ರಮ್ಯಾ ಮತ್ತೆ ರಾಜಕೀಯಕ್ಕೆ ಬರುವುದೇ ಬೇಡ!]

ಇದಾದ ಬಳಿಕ ಮಂಡ್ಯದಲ್ಲಿ ಜಿಲ್ಲಾ ಮಹಿಳಾ ಕಾರ್ಯಕರ್ತೆಯರು ನೇರವಾಗಿ ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಹರಿಹಾಯ್ದು, ಪ್ರತಿಭಟನೆ ನಡೆಸಿದ್ದರು. ಇದರಿಂದ ಅಂಬರೀಶ್ ಅವರ ರಾಜಕೀಯ ಅವನತಿ ಹಿಂದೆ ರಮ್ಯಾ ಅವರ ಕೈವಾಡ ಇದೆ ಎಂಬ ಶಂಕೆ ಹಾಗೂ ಗಾಳಿಸುದ್ದಿ ಹಬ್ಬಿತ್ತು.[ರಮ್ಯಾ ಸೋಲಿಗೆ ಯಾರು ಕಾರಣ ಗೊತ್ತೆ?]

ಹೀಗಾಗಿ ಇದಕ್ಕೆಲ್ಲ ಅಂಬರೀಶ್ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದು, ರಮ್ಯಾ ಅವರನ್ನು ಈ ವಿಷಯದಲ್ಲಿ ಎಳೆದು ತರಬೇಡಿ, ಆಕೆಗೆ ಈ ಬಗ್ಗೆ ಏನು ತಿಳಿದಿಲ್ಲ. ನನ್ನ ರಾಜೀನಾಮೆ ಷಡ್ಯಂತ್ರದ ಹಿಂದೆ ರಮ್ಯಾ ಕೈವಾಡ ಇಲ್ಲ ಎಂದಿದ್ದಾರೆ.['ಅಂಬರೀಷ್- ಮೀರ್ ಸಾದಿಕ್, ಹೆಣ್ಣು ವಿರೋಧಿ']

English summary
Former MP from Ramya is not behind the conspiracy in sacking me says former Housing minister MH Ambareesh. Ambareesh lambasted CM Siddaramaiah and said he firm on resigning from his post and no regrets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X