ರಹಸ್ಯ ಮದುವೆ ಬಗ್ಗೆ ನಟಿ ರಮ್ಯಾ ಬಾರ್ನಾ ಬಾಯ್ಬಿಟ್ಟ ಸತ್ಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 14: ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರ ಸಹೋದರಿಯ ಪುತ್ರ ಫಹಾನ್ ಅವರನ್ನು ವರಿಸಿರುವುದಾಗಿ 'ಹನಿ ಹನಿ' ಖ್ಯಾತಿಯ ಕನ್ನಡ ನಟಿ ರಮ್ಯಾ ಬಾರ್ನಾ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ವಾಹಿನಿಯೊಂದರ ಬಳಿ ಮಾತನಾಡಿದ ಅವರು, ಮನೆಯಲ್ಲಿ ತಮ್ಮ ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣದಿಂದಲೇ ವಿವಾಹದ ವಿಚಾರವನ್ನು ತಾವು ಗುಟ್ಟಾಗಿಟ್ಟುಕೊಂಡಿದ್ದಾಗಿ ಹೇಳಿದರು.

ಶಾಸಕ ಜಮೀರ್ ಸಂಬಂಧಿ ಫಹಾದ್, ನಟಿ ರಮ್ಯಾ ಮದುವೆ

ಅಮ್ಮನ ಆರೋಗ್ಯ ಸರಿಹೋದ ನಂತರ ತಾವೇ ಖುದ್ದಾಗಿ ಈ ವಿಚಾರ ತಿಳಿಸಬೇಕೆಂದುಕೊಂಡಿದ್ದು, ಆದರೆ, ಅಷ್ಟರಲ್ಲೇ ಈ ಸುದ್ದಿ ಮಾಧ್ಯಮಗಳಲ್ಲಿ ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದರು.

ಅಲ್ಲದೆ, ತಾವು ಹಾಗೂ ಫಹಾನ್ ಪರಸ್ಪರ ಪ್ರೇಮಿಸುತ್ತಿದ್ದು, ಮೇ 29ರಂದು ಶಿವಾಜಿ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ಆಗಿದ್ದಾಗಿ ಅವರು ಮಾಹಿತಿ ನೀಡಿದರು.

ಹಾಗಾದರೆ, ರಮ್ಯಾ ಬಾರ್ನಾ ಅವರ ಹಿನ್ನೆಲೆಯೇನು, ಅವರು ಮದುವೆಯಾಗಿರುವ ಫಹಾನ್ ಅವರ ಹಿನ್ನೆಲೆಯೇನು, ಈ ಬಗ್ಗೆ ಶಾಸಕ ಜಮೀರ್ ಅಹ್ಮದ್ ಏನಂದ್ರು, ಅಂತಿಮವಾಗಿ ವಾಹಿನಿಗಳಲ್ಲಿ ರಮ್ಯಾ ಮಾಡಿದ ಮನವಿಯೇನು ಎಂಬಿತ್ಯಾದಿ ವಿಚಾರಗಳು ಇಲ್ಲಿವೆ.

ನೀನ್ಯಾರೆ ಚಿತ್ರದ ಮೂಲಕ ನಟಿಯಾದವರು

ನೀನ್ಯಾರೆ ಚಿತ್ರದ ಮೂಲಕ ನಟಿಯಾದವರು

ರಮ್ಯಾ ಬಾರ್ನಾ ಮೂಲತಃ ಕೊಡಗಿನವರು. ಆದರೆ, ಓದಿ ಬೆಳೆದದ್ದು ಬೆಂಗಳೂರು ಹಾಗೂ ಮುಂಬೈನಲ್ಲಿ. ಟ್ರಾವೆಲ್ ಆ್ಯಂಡ್ ಟೂರಿಸಂನಲ್ಲಿ ಸ್ನಾತಕ ಪದವಿ ಪಡೆದ ನಂತರ ಅವರು ಚಿತ್ರರಂಗದ ಕಡೆಗೆ ವಾಲಿದರು. 2008ರಲ್ಲಿ ಅವರು ಅವರು ಅಭಿನಯಿಸಿದ ಮೊದಲ ಚಿತ್ರ 'ನೀನ್ಯಾರೇ' ಬಿಡುಗಡೆಗೊಂಡಿತ್ತು. ಕನ್ನಡ ಮಾತ್ರವಲ್ಲದೆ, ತುಳು ಚಿತ್ರರಂದಲ್ಲೂ ಕೆಲವಾರು ಉತ್ತಮ ಪಾತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ತಮಿಳು, ತೆಲುಗು ಚಿತ್ರರಂಗಗಳಿಗೂ ಹೋಗಿ ಬಂದಿದ್ದಾರೆ.

ರಾಜಕೀಯದಲ್ಲೂ ಕೈ ಹಾಕಿದ್ದ ಫಹಾದ್

ರಾಜಕೀಯದಲ್ಲೂ ಕೈ ಹಾಕಿದ್ದ ಫಹಾದ್

ರಮ್ಯಾ ಮದುವೆಯಾಗಿರುವ ಯುವಕನ ಪೂರ್ತಿ ಹೆಸರು ಫಹಾದ್ ಅಲಿ ಖಾನ್. ಅವರು ಈ ಮೊದಲೇ ತಿಳಿಸಿದಂತೆ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರ ಸಹೋದರಿಯ ಗಂಡನ ತಮ್ಮನ ಮಗ. ವೃತ್ತಿಯಿಂದ ಉದ್ಯಮಿಯಾಗಿರುವ ಫಹಾದ್, ಈ ಹಿಂದೆ ರಾಜಕೀಯಕ್ಕೂ ಪ್ರವೇಶಲು ಯತ್ನಿಸಿದ್ದರು. 2010ರ ಬಿಬಿಎಂಪಿ ಚುನಾವಣೆಯಲ್ಲಿ ಅವರು ಜಯಮಹಲ್ ವಾರ್ಡ್ ನಿಂದ ಸ್ಪರ್ಧಿಸಿದ್ದರು.

ದೂರದ ಸಂಬಂಧಿ ಎಂದ ಜಮೀರ್

ದೂರದ ಸಂಬಂಧಿ ಎಂದ ಜಮೀರ್

ಈ ಮದುವೆಯ ಬಗ್ಗೆ ಪ್ರತಿಕ್ರಿಯಿಸುವಂತೆ ತಮ್ಮನ್ನು ಸಂಪರ್ಕಿಸಿದ ವಾಹಿನಿಯೊಂದಕ್ಕೆ ಉತ್ತರಿಸಿರುವ ಶಾಸಕ ಜಮೀರ್ ಅಹ್ಮದ್, ''ಫಹಾದ್ ಅವರ ಕುಟುಂಬ ತಮಗೆ ದೂರದ ಸಂಬಂಧಿಗಳು. ಫಹಾದ್ ನನ್ನ ಸಹೋದರಿಯ ಭಾವನ ತಮ್ಮನ ಮಗ. ದೂರದ ಸಂಬಂಧವಾಗಿರುವುದರಿಂದ ನನಗೆ ವೈಯಕ್ತಿಕವಾಗಿ ಫಹಾದ್ ಪರಿಚಯವಿಲ್ಲ. ಅವರ ಮದುವೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ಸಂಬಂಧಿಕರಲ್ಲಿ ವಿಚಾರಿಸಿ, ಆನಂತರ ಮಾಧ್ಯಮಗಳಿಗೆ ಉತ್ತರ ನೀಡುತ್ತೇನೆ'' ಎಂದು ಹೇಳಿದ್ದಾರೆ.

Ramya blames Modi by saying "South Indians are ignored"
ವಿಷಯ ವೈಭವೀಕರಿಸದಂತೆ ಕೋರಿಕೆ

ವಿಷಯ ವೈಭವೀಕರಿಸದಂತೆ ಕೋರಿಕೆ

ಇನ್ನು, ವಾಹಿನಿಯೊಂದರ ಬಳಿ ಮಾತನಾಡುವಾಗ, ತಮ್ಮ ಮದುವೆಯ ಬಗೆಗಿನ ವಿವರಗಳನ್ನು ನೀಡಿದ ನಂತರ, ರಮ್ಯಾ ಬಾರ್ನಾ ಅವರು ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ತಾವು ಇಷ್ಟಪಟ್ಟ ಹುಡುಗನ್ನು ತಾವು ಮದುವೆಯಾಗಿದ್ದು, ಈ ವಿಚಾರವನ್ನು ಹೆಚ್ಚು ವೈಭವೀಕರಿಸುವ ಅಗತ್ಯವಿಲ್ಲ. ವಾಹಿನಿಗಳು ಇದನ್ನು ವೈಭವೀಕರಿಸಿದರೆ, ನನ್ನ ವೈಯಕ್ತಿಕ ಜೀವನದಲ್ಲಿ ಕಿರಿಕಿರಿ ಮಾಡಬಹುದು'' ಎಂದು ಅವರು ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actress Ramya Barna disclosed everything to a TV Channel regarding her marriage on Friday (July 14, 2017) evening. While speaking to media on phone, she confirmed that she married Fahad, (a relative of JDS MLA Zameer Ahmed) on May 29, 2017. And at the same time she requested the media, not to make sensitive her marriage issue.
Please Wait while comments are loading...