ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ಯಾಬಿನೆಟ್ ಸಭೆಗೆ ಸತತ ಗೈರು: ಮೌನ ಮುರಿದ ರಮೇಶ್ ಜಾರಕಿಹೊಳಿ

|
Google Oneindia Kannada News

Recommended Video

ಕ್ಯಾಬಿನೆಟ್ ಸಭೆಗೆ ಗೈರಾಗಿದ್ದಕ್ಕೆ ಕಾರಣ ಹೇಳಿದ ರಮೇಶ್ ಜಾರಕಿಹೊಳಿ | Oneindia Kannada

ಬೆಂಗಳೂರು, ಅಕ್ಟೋಬರ್ 30: ಸತತ ಮೂರು ಸಚಿವ ಸಂಪುಟ ಸಭೆಗೆ ಗೈರಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ಈ ಬಗ್ಗೆ ಮೌನ ಮುರಿದಿದ್ದು ಮುಂದಿನ ಸಚಿವ ಸಂಪುಟ ಸಭೆಗೆ ಹಾಜರಾಗುವುದಾಗಿ ಪ್ರಕಟಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಬಿಜೆಪಿಗೆ ಹೋಗುತ್ತೇನೆ ಎಂಬುದು ಸುಳ್ಳು, ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಅಸಮಾಧಾನ ಇದ್ದದ್ದು ನಿಜ ಈಗ ಅದೆಲ್ಲವೂ ದೂರವಾಗಿದೆ, ಹೀಗಾಗಿ ಬಿಜೆಪಿ ಹೋಗುತ್ತೇನೆ ಎನ್ನುವುದು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದರು.

ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ಸತೀಶ್ ಜಾರಕಿಹೊಳಿ ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ಸತೀಶ್ ಜಾರಕಿಹೊಳಿ

ಇನ್ನುಮುಂದೆ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲಿ ಸಕ್ರಿಯವಾಗಿರುತ್ತೇನೆ, ನಾನು ಈವರೆಗೂ ಸಚಿವ ಸಂಪುಟ ಸಭೆಗೆ ಹಾಜರಾಗದಿರುವುದು ನಿಜ ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಹಾಗೆಂದಾಕ್ಷಣ ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಅರ್ಥವಲ್ಲ. ಬರುವ ವಾರ ನಡೆಯಲಿರುವ ಸಚಿವ ಸಂಪುಟ ಸಭೆಗೆ ಹಾಜರಾಗುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯುತ್ತೇನೆ ಎಂದರು.

Ramesh Jarkiholi clarifies he will attend next cabinet meet

ರಾಹುಲ್ ಭೇಟಿ ಮಾಡದೆ ಸತೀಶ್ ಜಾರಕಿಹೊಳಿ ವಾಪಸ್ ಬಂದಿದ್ದೇಕೆ? ರಾಹುಲ್ ಭೇಟಿ ಮಾಡದೆ ಸತೀಶ್ ಜಾರಕಿಹೊಳಿ ವಾಪಸ್ ಬಂದಿದ್ದೇಕೆ?

ನಾನು ಈಗಾಗಲೇ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಂಡು ವಿಎಸ್ ಉಗ್ರಪ್ಪ ಅವರ ಪರ ಪ್ರಚಾರ ಮಾಡಿದ್ದೇನೆ, ಇಂದು ಸಂಜೆ ಜಮಖಂಡಿಗೆ ತೆರಳುತ್ತಿದ್ದು, ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ತನಕ ಜಮಖಂಡಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರ ಪರ ಪ್ರಚಾರ ನಡೆಸುತ್ತೇನೆ ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಹೇಳಿದರು.

ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್‌ನಿಂದ ಸಂಧಾನ ಸೂತ್ರ ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್‌ನಿಂದ ಸಂಧಾನ ಸೂತ್ರ

ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಸಿಟ್ಟು ಹಾಗೂ ಭಿನ್ನಾಭಿಪ್ರಾಯ ಕೇವಲ ವೈಯಕ್ತಿಕವಾದುದು. ಆ ಬಗ್ಗೆ ಪ್ರತಿಕ್ರಿಯೆ ನೀಡುವದಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿ ಇದೇ ವೇಳೆ ಸ್ಪಷ್ಟಪಡಿಸಿದರು.

English summary
Municipal Administration minister Ramesh Jarkiholi has clarified that he will never quit Congress party and will attend next cabinet meet as he was absent from last three meetings due to his personal reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X