ಡಿ.12 ರಂದು ಮಂಗಳೂರಿನ ಪರಂಗಿ ಪೇಟೆಯಿಂದ ಮಾಣಿವರೆಗೆ ಸಾಮರಸ್ಯದ ನಡಿಗೆ

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 29 : ಮಂಗಳೂರಿನ ಪರಂಗಿ ಪೇಟೆಯಿಂದ ಮಾಣಿಯ ವರೆಗೆ ಡಿಸೆಂಬರ್ 12 ರಂದು ಸಾಮರಸ್ಯದ ನಡಿಗೆ ಆಯೋಜಿಸಲಾಗಿದೆ ಎಂದು ಸಚಿವ ರಮಾನಾಥ್ ರೈ ಹೇಳಿದರು.

ರಮಾನಾಥ ರೈ ವಿರುದ್ದ ಎಸಿಬಿ, ಲೋಕಾಯುಕ್ತಕ್ಕೆ ದೂರು : ಹರಿಕೃಷ್ಣ ಬಂಟ್ವಾಳ್

ವಿಕಾಸ ಸೌಧದಲ್ಲಿ ಬುಧವಾರ (29) ರಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹತ್ಯೆ ಮಾಡಿರೋ ಪಕ್ಷಗಳು, ಸಂಘಟನೆಗಳು ಹೊರತುಪಡಿಸಿ ಬೇರೆ ಎಲ್ಲರು ನಡಿಗೆಯಲ್ಲಿ ಭಾಗವಹಿಸಲಿದ್ದಾರೆ. ಕಳೆದ ಬಾರಿ ನಿಷೇಧಾಜ್ಞೆ ಮತ್ತಿತರ ಸೆಕ್ಷನ್ ಗಳು ಇದ್ದ ಕಾರಣ ನಡಿಗೆ ಮಾಡಿರಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಡ ಮತೀಯಶಕ್ತಿಗಳ ಕೇಂದ್ರ ಆಗುತ್ತಿದೆ ಎನ್ನುವ ನೋವಿದೆ ಎಂದರು.

Ramanath Rai Will lead Walk for Communal Harmony in Mangaluru again

ಸಚಿವ ರಮಾನಾಥ್ ರೈ ಅವರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಯೂನಿಸೆಫ್ ಸಹಯೋಗದಲ್ಲಿ ಸಂವಾದದಲ್ಲಿ ರಾಜ್ಯದ 13 ಜಿಲ್ಲೆಯಗಳ ಕಾಡಂಚಿನ ಗ್ರಾಮಗಳ ಮಕ್ಕಳು ಪಾಲ್ಗೊಂಡಿದ್ದರು. ಪಾರಂಪರಿಕವಾಗಿ ಕಾಡಿನ ಅಂಚಿನಲ್ಲಿ ವಾಸವಿರುವ ಗಿರಿಜನರು, ಸಿದ್ದಿ, ಕಾಡುಕುರುಬರ ಹಾಗೂ ಜೇನು ಕುರುಬರಿಗೆ ಭೂಮಿಯ ಹಕ್ಕು ಪತ್ರ ನೀಡಲು ತೀರ್ಮಾನಿಸಿದ್ದೇವೆ. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಆಯಾ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಹೆಚ್ಚು ಗಮನ ನೀಡುವಂತೆ ಸೂಚಿಸಿದರು.

ನನ್ನ ವಿರುದ್ಧದ ಭೂ ಕಬಳಿಕೆ ಆರೋಪ ಸುಳ್ಳು : ರಮಾನಾಥ ರೈ

ದಕ್ಷಿಣ ಕನ್ನಡ ಜಿಲ್ಲೆ ಇಂದು ಮತೀಯ ಸೂಕ್ಷ್ಮ ಜಿಲ್ಲೆಯಾಗಿ ರೂಪಾಂತರವಾಗಿದೆ. ಅಪ್ರಾಮಾಣಿಕ ರಾಜಕಾರಣಿಗಳು, ಅಧಿಕಾರಿಗಳಿಗೆ ಕಾಯ್ದೆಗಳನ್ನು ಕಂಡರೆ ಆಗುವುದಿಲ್ಲ, ಇದೇ ಕಾರಣಕ್ಕೆ ಅರಣ್ಯ ಹಕ್ಕು ಕಾಯ್ದೆ ಕೆಲವರಿಗೆ ಕಂಟಕವಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dakshin Kannada district in charge Minister Ramanath Rai told that the peace rally will be held in Mangaluru on dec.12. The Minister announced the rally in the month of october only but it was not been permitted.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ