ಮಾಧ್ಯಮಗಳ ಕೈಯಿಂದ ಮೀನಿನಂತೆ ಜಾರುವ ರಾಮಲಿಂಗಾ ರೆಡ್ಡಿ

Posted By:
Subscribe to Oneindia Kannada
   ಮಾಧ್ಯಮದವರ ಕೈಗೆ ಸಿಕ್ಕಿ ಬಿದ್ದ ರಾಮಲಿಂಗಾ ರೆಡ್ಡಿ | Oneindia Kannada

   ಬೆಂಗಳೂರು, ಡಿಸೆಂಬರ್ 01 : ಮೈಸೂರು ರಸ್ತೆಯ ಸಿಎಆರ್ ಹೆಡ್ ಕ್ವಾಟರ್ಸ್ ನಲ್ಲಿ ನಡೆದ ಪೊಲೀಸ್ ವಸತಿ ಗೃಹಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು.

   ಸಚಿವರ ಜೊತೆಗೆ ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್, ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಮಳೆಯ ನಡುವೆ ಕೂಡ ನಡೆದ ಕಾರ್ಯಕ್ರಮದಲ್ಲಿ 192 ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಯಿತು.

   ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಹರಿಹಾಯ್ದ ರಾಮಲಿಂಗಾರೆಡ್ಡಿ

   ಗೃಹಸಚಿವ ರಾಮಲಿಂಗಾ ರೆಡ್ಡಿ ಅವರು ಮಾಧ್ಯಮದವರ ಕೈಗೆ ಸಿಗುವುದು ಅಪರೂಪ ಆದರೆ ಸಿಕ್ಕಾಗ ಮಾತ್ರ ಮೀನು ಕೈಯಿಂದ ಜಾರುವಂತೆ ಜಾರಿಕೊಂಡು ಬಿಡುತ್ತಾರೆ. ಇಂದು (ಡಿಸೆಂಬರ್01) ಕೂಡ ಅದೇ ಆಗಿದೆ.

   'ಗೌರಿ ಲಂಕೇಶ್ ಹಂತಕರ ಸುಳಿವು ಪತ್ತೆ, ಶೀಘ್ರದಲ್ಲಿಯೇ ಬಂಧನ'

   ಮೈಸೂರು ರಸ್ತೆಯ ಸಿಎಆರ್ ಹೆಡ್ ಕ್ವಾಟ್ರಸ್ ನಲ್ಲಿ ನಡೆದ ಪೊಲೀಸ್ ವಸತಿಗೃಹ ಶಂಕುಸ್ಥಾಪನೆಗೆ ಆಗಮಿಸಿದ್ದ ಗೃಹಸಚಿವರು ಮಾಧ್ಯಮದವರ ಕೈಗೆ ದೊರಕಿದರು. ಆದರೆ ಮಾಧ್ಯಮದವರ ಪ್ರಶ್ನೆಗಳಿಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿ ಸರಸರನೆ ಹೊರಟುಬಿಟ್ಟರು.

   ಮಾಧ್ಯಮದವರ ಮತ್ತು ರಾಮಲಿಂಗಾರೆಡ್ಡಿ ನಡುವಿನ ಸಂಭಾಷಣೆ ತಿಳಿಯಲು ಮುಂದೆ ಓದಿ....

   ನಮ್ಮವರೇ ಕಳ್ಳತನ ಮಾಡಿದ್ದಾರೆ

   ನಮ್ಮವರೇ ಕಳ್ಳತನ ಮಾಡಿದ್ದಾರೆ

   ಎಸಿಪಿ ಮರಿಯಪ್ಪ ಎಂಬುವರು ಸಿಸಿಬಿ ಖಜಾನೆಯಿಂದಲೇ 3 ಕೋಟಿ ದೋಚಿದ್ದ ಬ್ಲಾಕ್ ಆ್ಯಂಡ್ ವೈಟ್ ದಂಧೆ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ' ಪ್ರಕರಣ ನನ್ನ ಗಮನಕ್ಕೂ ಬಂದಿದೆ ಕಮಿಷನರ್ ಸುನೀಲ್ ಕುಮಾರ್ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ, ಕೆಲವು ಅಧಿಕಾರಿಗಳ ಹೆಸರು ಸಹ ಕೇಳಿ ಬಂದಿದೆ, ನಮ್ಮವರೇ (ಪೊಲೀಸರೇ) ಕಳ್ಳತನ ಮಾಡಿದ್ದಾರೆ, ಸರ್ಕಾರಕ್ಕೆ ಕೊಡಬೇಕಿದ್ದ ಜಪ್ತಿ ಹಣವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ, ಬಗ್ಗೆ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಲಾಗುವುದು ಎಂದರು.

   ಬೆಂಗಳೂರು ಪೊಲೀಸರು ಚೆನ್ನಾಗಿ ಕೆಲಸ ಮಾಡಿದ್ದಾರೆ

   ಬೆಂಗಳೂರು ಪೊಲೀಸರು ಚೆನ್ನಾಗಿ ಕೆಲಸ ಮಾಡಿದ್ದಾರೆ

   ಅಪರಾಧ ಪ್ರಕರಣಗಳ ಅಂಕಿಅಂಶದಲ್ಲಿ ಬೆಂಗಳೂರು 2 ನೇ ಸ್ಥಾನದಲ್ಲಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಗೃಹಸಚಿವರು ನೀಡಿದ ಉತ್ತರ ವಿಶಿಷ್ಟವಾಗಿತ್ತು ' ನೀವು ಈ ಪ್ರಶ್ನೆ ಕೇಳ್ತಿರ ಅಂತಾ ಮೊದಲೇ ಪ್ರಿಪೇರ್ ಆಗಿ ಬಂದಿದ್ದೆ' ಎಂದು ಜಾಣತನ ಪ್ರದರ್ಶಿಸಿದ ಸಚಿವರು '2015 ರಿಂದ 2016 ಕ್ಕೆ ಹೋಲಿಸಿದರೆ ಕಡಿಮೆ ಅಪರಾಧ ಪ್ರಕರಣ ದಾಖಲಾಗಿದೆ, ಆದ್ರೆ ಇದ್ರಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳೆ 10 ಸಾವಿರ ಇದೆ, ಅಪರಾಧ ಪ್ರಕರಣ ಅಲ್ಲ ಎಂದು ವಿವರ ನೀಡಿದರು. ' ಐಟಿ ಬಿಟಿ ಸಿಟಿಯಲ್ಲಿ ಸೈಬರ್ ಕ್ರೈಂ ಕಾಮನ್ ಆಗಿದೆ, ಆದ್ರೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಜಾಸ್ತಿ ಆಗಿದೆ ಅಂದ್ರೆ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆ ಹೀಗಾಗಿ ನೀವು ನಮ್ಮನ್ನು ಅಪ್ರಿಶಿಯೇಟ್ ಮಾಡ್ಬೇಕು' ಎಂದು ನಕ್ಕರು ರಾಮಲಿಂಗಾರೆಡ್ಡಿ.

   ಆದಷ್ಟು ಬೇಗ ಹಂತಕರು ಸಿಗ್ತಾರೆ

   ಆದಷ್ಟು ಬೇಗ ಹಂತಕರು ಸಿಗ್ತಾರೆ

   ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣದ ಬಗ್ಗೆಯೂ ಸಚಿವರಿಗೆ ಪ್ರಶ್ನೆ ಕೇಳಲಾಯಿತಾದರೂ, ಇಲ್ಲಿ ಅವರ ತಮ್ಮ ಹಳೆಯ ವರಸೆಯನ್ನೇ ಮುಂದುವರೆಸಿದರು. 'ಆದಷ್ಟು ಬೇಗ ಕೊಂದವರು ಸಿಗ್ತಾರೆ ನಾನು ಯಾವಾಗ್ಲೂ ಪಾಸಿಟಿವ್ ಅದಕ್ಕೆ ಲಾಸ್ಟ್ ಟೈಮ್ ಬೇಗ ಸಿಗ್ತಾರೆ ಅಂತ ಹೇಳಿದ್ದೆ' ಎಂದು ಎಡಬಿಡಂಗಿ ಹೇಳಿಕೆ ನೀಡಿದರು.

   2000 ಪುಟದ ವರದಿ ಕೊಟ್ಟಿದ್ದಾರೆ

   2000 ಪುಟದ ವರದಿ ಕೊಟ್ಟಿದ್ದಾರೆ

   ಕೇಂದ್ರ ಕಾರಾಗೃಹದಲ್ಲಿ ನಡೆದ ಕರ್ಮಕಾಂಡ ಪ್ರಕರಣದ ಬಗ್ಗೆ ಮಾತನಾಡಿದ ಸಚಿವರು, ಇನ್ನೂ ವರದಿ ನೋಡಿಲ್ಲ ಎಂದರು. 'ವಿನಯ್ ಕುಮಾರ್ ಕೊಟ್ಟ ವರದಿ ಬಂದಿದೆ ವರದಿಯನ್ನು ನಾನು ನೋಡಿಲ್ಲ, 2000 ಪುಟದ ವರದಿ ಸಿಕ್ಕಿದೆ, ಅದನ್ನೆಲ್ಲಾ ಸ್ಟಡಿ ಮಾಡಿ ಪ್ರತಿಕ್ರಿಯೆ ಕೊಡುತ್ತೇನೆ, ಯಾರು ತಪ್ಪು ಮಾಡಿದ್ದಾರೋ ಅವ್ರ ಮೇಲೂ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಆದರೆ 2000 ಪುಟ ಸ್ಟಡಿ ಮಾಡು ಎಷ್ಟು ದಿನ ಬೇಕೊ ಹೇಳಲಿಲ್ಲ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Ramalinga reddy talks about Gowri Lankesh issue, money londering issue, centrel jail corruption issue, bengaluru crime rate and many other things with media.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ