ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರನ್ನು ಭೇಟಿ ಮಾಡಿದ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ

By Gururaj
|
Google Oneindia Kannada News

ಬೆಂಗಳೂರು, ಜೂನ್ 14 : ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದರು. ಜಯನಗರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಿತ್ತು.

ಶುಕ್ರವಾರ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ತಂದೆ ರಾಮಲಿಂಗಾ ರೆಡ್ಡಿ ಜೊತೆಗೆ ದೇವೇಗೌಡರನ್ನು ಭೇಟಿ ಮಾಡಿದರು. ಪದ್ಮನಾಭನಗರದಲ್ಲಿನ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ವಿಧಾನಸಭೆಯಲ್ಲಿ ತಂದೆ-ಮಗಳ ಜುಗಲ್ಬಂದಿ, ಇತಿಹಾಸ ಸೃಷ್ಟಿಸಿದ ಸೌಮ್ಯ ರೆಡ್ಡಿವಿಧಾನಸಭೆಯಲ್ಲಿ ತಂದೆ-ಮಗಳ ಜುಗಲ್ಬಂದಿ, ಇತಿಹಾಸ ಸೃಷ್ಟಿಸಿದ ಸೌಮ್ಯ ರೆಡ್ಡಿ

ಜೂನ್ 11ರಂದು ನಡೆದ ಜಯನಗರ ಚುನಾವಣೆಯಲ್ಲಿ ಸೌಮ್ಯಾ ರೆಡ್ಡಿ 2887 ಮತಗಳಿಂದ ಜಯಗಳಿಸಿದ್ದರು. ಜಯನಗರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಕಣದಿಂದ ಹಿಂದೆ ಸರಿದು ಸೌಮ್ಯಾ ರೆಡ್ಡಿಗೆ ಬೆಂಬಲ ನೀಡಿದ್ದರು.

Ramalinga Reddy and Sowmya Reddy meets Deve Gowda

ಆದ್ದರಿಂದ, ಶುಕ್ರವಾರ ಸೌಮ್ಯಾ ರೆಡ್ಡಿ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದು, ಎಲ್ಲರೂ ಒಟ್ಟಾಗಿ ಕೆಲಸ ಮಾಡಲಿದ್ದಾರೆ.

ಜಯನಗರ ಚುನಾವಣೆ : ಯಾವ ಅಭ್ಯರ್ಥಿಗೆ ಎಷ್ಟು ಮತ?ಜಯನಗರ ಚುನಾವಣೆ : ಯಾವ ಅಭ್ಯರ್ಥಿಗೆ ಎಷ್ಟು ಮತ?

ಜೂನ್ 11ರಂದು ಜಯನಗರ ಚುನಾವಣೆ ನಡೆದಿತ್ತು. ಜೂನ್ 13ರಂದು ಫಲಿತಾಂಶ ಪ್ರಕಟವಾಗಿದ್ದು, ಸೌಮ್ಯಾ ರೆಡ್ಡಿ 54,458 ಮತಗಳನ್ನು ಪಡೆದು 2887 ಮತಗಳಿಂದ ಜಯಗಳಿಸಿದ್ದಾರೆ.

ಬಿಜೆಪಿಯ ಬಿ.ಎನ್.ಪ್ರಹ್ಲಾದ್ 51,571 ಮತ, ಜೆಡಿಎಸ್‌ನ ಕಾಳೇಗೌಡ ಕಣದಿಂದ ಹಿಂದೆ ಸರಿದರೂ 817 ಮತ, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ 1,861 ಮತಗಳನ್ನು ಪಡೆದಿದ್ದಾರೆ.

English summary
Jayanagar Congress MLA Sowmya Reddy along with his father Ramalinga Reddy met JD(S) supremo H.D.Deve Gowda. JD(S) extended the support for Congress in Jayanagar elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X