ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಐಡಿ ತನಿಖೆಯಿಂದ ಸತ್ಯ ತಿಳಿಯಲಿದೆ: ಶ್ರೀಮಠ

By Mahesh
|
Google Oneindia Kannada News

ಬೆಂಗಳೂರು, ಸೆ.8 : ರಾಮಚಂದ್ರಾಪುರ ಮಠದ ರಾಮಕಥಾ ಕಲಾವಿದರಿಗೆ ಬೆದರಿಕೆ ಹಾಗೂ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಿರುವುದನ್ನು ಶ್ರೀಮಠ ಸ್ವಾಗತಿಸಿದೆ.

ಸಿಐಡಿ ಅಧಿಕಾರಿಗಳು ಈಗಾಗಲೆ ಅನೇಕ ಪ್ರಕರಣಗಳನ್ನು ಭೇದಿಸಿದ್ದಾರೆ. ಈ ಪ್ರಕರಣವನ್ನು ನಿಷ್ಪಕ್ಷಪಾತ್ರದಿಂದ ತನಿಖೆ ನಡೆಸುವ ವಿಶ್ವಾಸವಿದೆ. ಜನರಿಗೆ ಸತ್ಯಾಸತ್ಯತೆ ತಿಳಿಯಬೇಕಿದೆ ಎಂದು ರಾಮಚಂದ್ರಾಪುರ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ ಭಟ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ರಾಮಚಂದ್ರಾಪುರ ಮಠದ ರಾಮಕಥಾ ಕಲಾವಿದೆ ಪ್ರೇಮಲತಾ ಅವರ ಮಗಳು ಅಂಶುಮತಿ ನೀಡಿರುವ ದೂರಿಗೆ ಸಂಬಂಧಿಸಿದಂತೆ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ ಬೆಂಗಳೂರಿನ ಗಿರಿನಗರ ಪೋಲೀಸರು ಇತ್ತೀಚೆಗೆ ನೋಟಿಸ್ ನೀಡಿದ್ದರು. [ರಾಘವೇಶ್ವರ ಭಾರತಿ ಶ್ರೀಗಳಿಗೆ ನೋಟಿಸ್ ಜಾರಿ]

Ramachandrapura math Welcomes CID probe against Raghaveshwara Bharathi Seer

ಹೊನ್ನಾವರದ ಕೆಕ್ಕಾರದಲ್ಲಿರುವ ರಘೋತ್ತಮ ಮಠಕ್ಕೆ ಆಗಮಿಸಿದ ಗಿರಿನಗರ ಎಎಸ್ ಪಿ ಸುರೇಶ್ ಬಾಬು ಖುದ್ದು ರಾಘವೇಶ್ವರ ಸ್ವಾಮೀಜಿಗಳನ್ನು ಭೇಟಿಯಾಗಿ ವಾರೆಂಟ್ ನೀಡಿ, ಸೆಪ್ಟೆಂಬರ್ 10ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಈ ನಡುವೆ ಕಲಾವಿದರಿಗೆ ಬೆದರಿಕೆ ಒಡ್ಡಿದ ಆರೋಪ ಹೊತ್ತಿರುವ ಪ್ರೇಮಲತಾ ದಂಪತಿಗಳ ಜಾಮೀನು ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿದ್ದು, ಪ್ರೇಮಲತಾ ಶಾಸ್ತ್ರಿ ಹಾಗೂ ದಿವಾಕರ್ ಶಾಸ್ತ್ರಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.10ಕ್ಕೆ ಕೋರ್ಟ್ ಮುಂದೂಡಲಾಗಿದೆ.

ಪ್ರೇಮಲತಾ ದಿವಾಕರ್ ಶಾಸ್ತ್ರಿ ಹಾಗೂ ರಾಘವೇಶ್ವರ ಭಾರತಿ ಇಬ್ಬರಿಗೂ ಸೆ.10ರ ಗಡುವು ಸಿಕ್ಕಿದೆ. ರಾಘವೇಶ್ವರ ಭಾರತಿಗಳ ಮೇಲೆ ಐಪಿಸಿ ಸೆಕ್ಷನ್ 354(ಎ) ಹಾಗೂ 506ರ ಅನ್ವಯ ಪ್ರಕರಣ ದಾಖಲಾಗಿದೆ. ಎರಡೂ ಸೆಕ್ಷನ್ ಗಳು ಜಾಮೀನುರಹಿತವಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಲ್ಪಡಿಸಬಹುದಾಗಿದೆ. ಅದರೆ, ಈ ಪ್ರಕರಣದಲ್ಲಿ ಆರೋಪಿಯ ಹೇಳಿಕೆ ಪಡೆಯಲು ಬಂದ ಪೊಲೀಸರು ಇಂಥ ದಿನ ವಿಚಾರಣೆ ಹಾಜರಾಗತಕ್ಕದ್ದು ಎಂದು ಹೇಳಿ ನೋಟಿಸ್ ನೀಡಿ ತೆರಳಿದ್ದಾರೆ.

English summary
Ramachandrapura math Welcomes CID probe against Raghaveshwara Bharathi Seer in both cases. The truth will prevail and public trust will be strengthen if CID probe conducted said Matha's CEO KG Bhat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X