ಇನ್ಫೋಸಿಸ್ ನಲ್ಲಿ ವಾರವಿಡೀ ರಾಜ್ಯೋತ್ಸವ ಸಂಭ್ರಮ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 19: ಇನ್ಫೋಸಿಸ್ ನ ಬೆಂಗಳೂರು ಡೆವಲಪ್ ಮೆಂಟ್ ಸೆಂಟರ್ ನಲ್ಲಿ ವಾರವಿಡೀ ರಾಜ್ಯೋತ್ಸವದ್ದೇ ಸಂಭ್ರಮ. ಅಲ್ಲಿ ಉದ್ಯೋಗಿಗಳೇ ಸೇರಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ 'ಸಿರಿಗಂಧ' ಎಂಬ ಶೀರ್ಷಿಕೆ ಇತ್ತು. ಅಂದಹಾಗೆ, ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಇದು ಸತತ ಒಂಬತ್ತನೇ ವರ್ಷದ ಆಚರಣೆ.

ರಸಪ್ರಶ್ನೆ, ಫೋಟೋ ತೆಗೆಯುವುದು, ಕಾವ್ಯ ರಚನೆ ಹೀಗೆ ನಾನಾ ಸ್ಪರ್ಧೆಗಳನ್ನು ನಡೆಸಲಾಯಿತು. ಇದರ ಜತೆಗೆ ಕರ್ನಾಟಕದ ಸ್ವಾದ ಧಾರವಾಡ ಫೇಡ, ಚನ್ನಪಟ್ಟಣದ ಬೊಂಬೆ, ಮೈಸೂರು ಸ್ಯಾಂಡಲ್ ಸಾಬೂನು ಹೀಗೆ ನಾನಾ ಮಳಿಗೆಗಳಿದ್ದವು. ಕ್ಯಾಂಪಸ್ ನ ಹಸಿರು ಹಾಸಿನ ಮೇಲೆ ಇಪ್ಪತ್ತೈದು ಅಡಿ ಎತ್ತರ ಮಹಿಷಾಸುರ ಪುತ್ಥಳಿ ಇಡಲಾಗಿತ್ತು.[ಇನ್ಫೋಸಿಸ್ ನಿಂದ ಅತ್ಯಾಧುನಿಕ ಬ್ಲಡ್ ಬ್ಯಾಂಕ್ ವ್ಯಾನ್ ಕೊಡುಗೆ!]

rajyotsava

ನವೆಂಬರ್ 16, 17ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ನಾಡೋಜ ಡಾ.ನಾರಾಯಣ ರೆಡ್ಡಿಯವರಿಗೊಂದು ಸನ್ಮಾನ ಕಾರ್ಯಕ್ರಮವಿತ್ತು. ಈ ವೇಳೆ ನಟರಾದ ಶ್ರೀನಾಥ್ ಹಾಗೂ ರಕ್ಷಿತ್ ಶೆಟ್ಟಿ ಕೂಡ ಭಾಗಿಯಾಗಿದ್ದರು. ಪಂಚಮ್ ಹಳಿಬಂಡಿ ಅವರ ಸಂಗೀತ ಕಾರ್ಯಕ್ರಮವಿತ್ತು. ಮಂಡ್ಯ ರಮೇಶ್ ನಿರ್ದೇಶನದಲ್ಲಿ ನಾಟಕ 'ಸಾಯೋ ಆಟ' ಪ್ರದರ್ಶಿಸಲಾಯಿತು. ಹಾಸ್ಯ ಪಟು ಪ್ರೊ.ಕೃಷ್ಣೇಗೌಡರು ತಮ್ಮ ಹಾಸ್ಯದಿಂದ ನಗು ಮೂಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Infosys Bangalore Development Center (DC) hosted ‘Rajyotsava Sambhrama’, a weeklong celebration of Karnataka Rajyotsava amid much fanfare at its campus. Organized under the flagship of the ‘Sirigandha’, an employee volunteer group, this is the ninth consecutive year of the successful celebrations. 
Please Wait while comments are loading...