ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ ಸ್ಥಳಾಂತರಿಸದಂತೆ ಸಂಸದ ರಾಜೀವ್ ಗೌಡ ಮನವಿ

|
Google Oneindia Kannada News

ನವದೆಹಲಿ, ಆಗಸ್ಟ್ 9: ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಸ್ಥಳಾಂತರಿಸದಂತೆ ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ನ ರಾಜೀವ್ ಗೌಡ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ನೀಡಿದ್ದಾರೆ.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲಿಯೇ ಉಳಿಸಬೇಕು ಎಂದು ಕೋರಿದ ಅವರು, ಅದರ ಸ್ಥಳಾಂತರವು ನಮ್ಮ ವೈಮಾನಿಕ ಉದ್ಯಮಕ್ಕೆ ನೋವುಂಟುಮಾಡಲಿದೆ ಎಂದು ಮನದಟ್ಟು ಮಾಡಿದರು.

ಬೆಂಗಳೂರಿನಿಂದ ಏರೋ ಇಂಡಿಯಾ ಲಕ್ನೋಗೆ ಶಿಫ್ಟ್ ?ಬೆಂಗಳೂರಿನಿಂದ ಏರೋ ಇಂಡಿಯಾ ಲಕ್ನೋಗೆ ಶಿಫ್ಟ್ ?

ಏರೋ ಇಂಡಿಯಾ ಪ್ರದರ್ಶನ ಸ್ಥಳಾಂತರದ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ಅಂತಿಮಗೊಳಿಸಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾಗಿ ರಾಜೀವ್ ಗೌಡ ಟ್ವೀಟ್ ಮಾಡಿದ್ದಾರೆ.

rajyasabha member rajeev gowda letter to nirmala sitharaman not to shift aero india

ಉತ್ತಮ ಪ್ರಜ್ಞೆ ಹಾಗೂ ಆರ್ಥಿಕತೆ ರಾಜಕೀಯವನ್ನು ಜಯಿಸುತ್ತದೆ ಎಂಬ ಆಶಾವಾದವಿದೆ ಎಂದು ಅವರು ಹೇಳಿದ್ದಾರೆ.

ಏರೋ ಇಂಡಿಯಾದ ಸ್ಥಳಾಂತರ ಪ್ರಯತ್ನ ನಿಲ್ಲಿಸುವಂತೆ ರಾಜ್ಯ ಕಾಂಗ್ರೆಸ್ ಕೂಡ ರಕ್ಷಣಾ ಸಚಿವರಿಗೆ ಪತ್ರ ಬರೆದಿತ್ತು.

ಏರೋ ಇಂಡಿಯಾ ಪ್ರತಿಷ್ಠೆಯ ಕಾರ್ಯಕ್ರಮವಾಗಿದೆ. ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಕಾರ್ಯಕ್ರಮ ಆಯೋಜಿಸಲು ಬೆಂಗಳೂರಿಗಿಂತ ಉತ್ತಮ ಸ್ಥಳವಿಲ್ಲ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನೀವು ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದೀರಿ? ಅದರ ಬದಲು ಇಲ್ಲಿರುವುದನ್ನು ಸ್ಥಳಾಂತರ ಮಾಡುತ್ತಿದ್ದೀರಿ. ನೀವು ರಾಜ್ಯದ ಹಿತಾಸಕ್ತಿಯನ್ನು ಮೊದಲು ಕಾಪಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

English summary
Rajya Sabha MP of Congress Rajeev Gowda submitted a letter to Defence Minister Nirmala Sitharaman urging that Aero India not to be shifted out from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X