ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ರಜನಿಕಾಂತ್

By Manjunatha
|
Google Oneindia Kannada News

ಬೆಂಗಳೂರು, ಜನವರಿ 03: ರಜನಿಕಾಂತ್ ಅವರು ಸಿನಿಮಾ ಸೂಪರ್ ಸ್ಟಾರ್ ಆಗುವ ಮುಂಚೆ ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್ ಆಗಿದ್ದರೆನ್ನುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಗೊತ್ತಿಲ್ಲದ ವಿಷಯವೆಂದರೆ ಅವರು ಕನ್ನಡ ದಿನಪತ್ರಿಕೆಯೊಂದರಲ್ಲಿ ಪತ್ರಕರ್ತರಾಗಿಯೂ ಕೆಲಸ ಮಾಡಿದ್ದರು ಎಂಬುದು.

ಹೌದು, ರಜನೀಕಾಂತ್ ಅವರು ಸಿನಿಮಾಕ್ಕೆ ಬಣ್ಣ ಹಚ್ಚಲು ಚೆನ್ನೈಗೆ ಹೋಗುವ ಮೊದಲು ಕೆಲ ಕಾಲ ಕನ್ನಡದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಪ್ರೂಫ್ ರೀಡಿಂಗ್ ಕೆಲಸ ಮಾಡುತ್ತಿದ್ದುದಾಗಿ ರಜನೀಕಾಂತ್ ಅವರೇ ಹೇಳಿಕೊಂಡಿದ್ದಾರೆ.

ರಜನಿ ತಮಿಳುನಾಡು ರಾಜಕಾರಣದ ಚಹರೆಯನ್ನೇ ಬದಲಾಯಿಸಬಲ್ಲರೆ?ರಜನಿ ತಮಿಳುನಾಡು ರಾಜಕಾರಣದ ಚಹರೆಯನ್ನೇ ಬದಲಾಯಿಸಬಲ್ಲರೆ?

ಚೆನ್ನೈನಲ್ಲಿ ನಡೆದ ಅಭಿಮಾನಿಗಳೊಂದಿಗಿನ ಸಂವಾದದಲ್ಲಿ ಈ ವಿಷಯವನ್ನು ಸ್ವತಃ ರಜನೀಕಾಂತ್ ಅವರೇ ಹೇಳಿಕೊಂಡಿದ್ದು, 'ಕನ್ನಡ ದಿನಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡುತ್ತಿದ್ದ ನನ್ನ ಗೆಳೆಯ ರಾಮಚಂದ್ರ ರಾವ್ ಅವರೊಂದಿಗೆ ನಾನು ಸಹ ಪ್ರೂಫ್ ರೀಡರ್ ಆಗಿ ಕೆಲಸ ಮಾಡುತ್ತಿದ್ದೆ' ಎಂದು ನೆನಪಿಸಿಕೊಂಡಿದ್ದಾರೆ.

Rajinakath says he was Kannada journalist once

ಈ ಬಗ್ಗೆ ಸಂಯುಕ್ತ ಕರ್ನಾಟಕದ ಲೋಕಶಿಕ್ಷಣ ಟ್ರಸ್ಟ್ ಮುಖ್ಯಸ್ಥರು ಸ್ಪಷ್ಟನೆ ನೀಡಿದ್ದು, ರಜನೀಕಾಂತ್ ಅವರು ನಮ್ಮ ದಿನಪತ್ರಿಕೆಯ ಉದ್ಯೋಗಿ ಆಗಿರಲಿಲ್ಲ, ಅವರು ತಮ್ಮ ಗೆಳೆಯ ರಾಮಚಂದ್ರ ರಾವ್ ಅವರ ಭೇಟಿಗೆಂದು ಕಚೇರಿಗೆ ಬರುತ್ತಿದ್ದರು ಆಗ ಅವರಿಗೆ ಸಹಾಯ ಮಾಡುತ್ತಿದ್ದರು, ಇತ್ತೀಚೆಗಷ್ಟೆ ರಾಮಚಂದ್ರ ರಾವ್ ಅವರು ನಿವೃತ್ತರಾಗಿದ್ದಾರೆ ಎಂದಿದ್ದಾರೆ.

ಅಜ್ಞಾತವಾಸದಿಂದ ವರ್ಮಾ ರಿಟರ್ನ್, ರಜನಿ ಬಗ್ಗೆ ಟ್ವೀಟ್ಅಜ್ಞಾತವಾಸದಿಂದ ವರ್ಮಾ ರಿಟರ್ನ್, ರಜನಿ ಬಗ್ಗೆ ಟ್ವೀಟ್

ರಜನೀಕಾಂತ್ ಅವರಿಗೆ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಇತ್ತು ಹಾಗಾಗಿ ಅವರು ನಮ್ಮ ಕಚೇರಿಗೆ ನಿಗದಿತವಾಗಿ ಬರುತ್ತಿದ್ದರು ಎಂದು ನೆನಪಿಸಿಕೊಂಡಿರುವ ದಿನಪತ್ರಿಕೆ ಮುಖ್ಯಸ್ಥರು, ಸನಿಹದಲ್ಲಿಯೇ ರಜನೀಕಾಂತ್ ಅವರನ್ನು ಸಂಯುಕ್ತ ಕರ್ನಾಟಕ ಕಚೇರಿಗೆ ಆಹ್ವಾನಿಸುವುದಾಗಿ ಹೇಳಿದ್ದಾರೆ.

English summary
Superstar Rajinikanth has claimed that he had worked as a Kannada journalist for some time in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X