ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಅಭಿವೃದ್ಧಿಯೆಂದರೆ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಮಾಡುವುದಲ್ಲ'

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನ ಅಭಿವೃದ್ಧಿಯೆಂದರೆ ಎಲ್ಲರಲ್ಲಿ ತಪ್ಪು ಕಲ್ಪನೆಯಿದೆ. ಕೇವಲ ಕಟ್ಟಗಳ ನಿರ್ಮಾಣ, ರಸ್ತೆಗಳ ಮೇಲೆ ವೈಟ್ ಟಾಪಿಂಗ್ ಮಾಡುವುದಲ್ಲ, ಜನರ ಸಲಹೆ ಮೇರೆಗೆ ಅವರಿಗೆ ಬೇಕಾದ ಅಗತ್ಯತ್ಯತೆಗಳನ್ನು ಒದಗಿಸಿಕೊಡಬೇಕು.

ಬೆಂಗಳೂರು ಅಭಿವೃದ್ಧಿಯೆಂದರೆ, ಭ್ರಷ್ಟಾಚಾರ ಮುಕ್ತ, ಜನಪರ, ಸಮರ್ಥನೀಯ ಬೆಳವಣಿಗೆ ಮುಖ್ಯ, ಯೋಜನೆಗಳ ಜಾರಿ ಸಮಯದಲ್ಲಿ ಕೇವಲ ಸಚಿವರು, ಬಿಲ್ಡರ್ ಗಳ ಅಭಿಪ್ರಾಯ ಮಾತ್ರವಲ್ಲ ನಗರವಾಸಿಗಳ ಅಭಿಪ್ರಾಯವೂ ಮುಖ್ಯವಾಗಿದೆ ಹೀಂಗೊಂದು ಮಾತು ಕೇಳಿಬಂದಿದ್ದು ನವ ಭಾರತಕ್ಕಾಗಿ ನವ ಬೆಂಗಳೂರು ಚರ್ಚೆಯಲ್ಲಿ.

ನವ ಭಾರತಕ್ಕಾಗಿ ನವ ಬೆಂಗಳೂರು ಸಂವಾದದಲ್ಲಿ ರಾಜೀವ್ ಚಂದ್ರಶೇಖರ್ ನವ ಭಾರತಕ್ಕಾಗಿ ನವ ಬೆಂಗಳೂರು ಸಂವಾದದಲ್ಲಿ ರಾಜೀವ್ ಚಂದ್ರಶೇಖರ್

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನವಭಾರತ ಕನಸು ನನಸಾಗಿಸುವ ದೃಷ್ಟಿಯಿಂದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಶುಕ್ರವಾರ ಹಮ್ಮಿಕೊಂಡಿದ್ದ ಫೇಸ್ ಬುಕ್ ಲೈವ್ ಅಭಿಯಾನದಲ್ಲಿ ಕೇಳಿಬಂದ ಅಂಶಗಳಿವು.

ಬೆಂಗಳೂರು ಸಮಸ್ಯೆಗಳ ಗೂಡಾಗಿದೆ, ಜನರನ್ನು ಈ ಸಮಸ್ಯೆಯಿಂದ ಹೊರತರುವ ಅಗತ್ಯವಿದೆ. ಹೀಗಾಗಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಎನ್‌ಬಿಎನ್ ಐ ಫೇಸ್ ಲೈವ್ ಮೂಲಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.

ಸಿದ್ದು ಸರಕಾರದಲ್ಲಿ ಬೆಂಗ್ಳೂರಿಗರ ಪಡಿಪಾಟಲು: ರಾಜೀವ್ ಚಂದ್ರಶೇಖರ್ ಸಿದ್ದು ಸರಕಾರದಲ್ಲಿ ಬೆಂಗ್ಳೂರಿಗರ ಪಡಿಪಾಟಲು: ರಾಜೀವ್ ಚಂದ್ರಶೇಖರ್

ರಾಜ್ಯದಲ್ಲಿ ಕಳೆದ ಐದು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರದಲ್ಲಿ ಸಾವಿರಾರು ಕೋಟಿ ರೂ,ಗಳನ್ನು ವೆಚ್ಚ ಮಾಡಿದರೂ ಅಭಿಔಋದ್ಧಿ ವಿಚಾರದಲ್ಲಿ ಹಿಡಿತ ಸಿಕ್ಕಿಲ್ಲ. ಸುಸ್ಥಿರ ಅಭಿವೃದ್ಧಿ, ಪಾರದರ್ಶಕ ಆಡಳಿತ, ದೂರದೃಷ್ಟಿತ್ವ ಹೊಂದುವಲ್ಲಿ ಸರ್ಕಾರ ಎಡವಿದೆ. ದೇಶದಲ್ಲಿಯೇ ವಿಶಾಲ ಕೆರೆಯಾಗಿರುವ ಬೆಳ್ಳಂದೂರು ಕೆರೆ ಸಂರಕ್ಷಣೆಗೆ ಮುಂಜಾಗರತಾ ಕ್ರಮ ಕೈಗೊಳ್ಳುವಲ್ಲಿ, ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಬನ್ನೇರುಘಟ್ಟ ರಕ್ಷಣೆ ಮತ್ತು ನಗರ ಕಸ ವಿಂಗಡಣೆ, ವಿಲೇವಾರಿಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಐಐಎಸ್ಸಿ ವಿಜ್ಞಾನಿ ಟಿ.ವಿ. ರಾಮಚಂದ್ರ ಮಾತನಾಡಿ, ನಗರದ ನಿವಾಸಿಗಳಿಗೆ ಮಾಲಿನ್ಯ ಮುಕ್ತ ಗಾಳಿ ಮತ್ತು ಪರಿಶುದ್ಧ ನೀರು ನೀಡುವ ಜತೆಗೆ ಬೆಂಗಳೂರನ್ನು ಮತ್ತೆ ವಾಸಿಸಲು ಯೋಗ್ಯ ಸ್ಥಳವನ್ನಾಗಿ ನಿರ್ಮಾಣ ಮಾಡುವತ್ತ ಗಮನ ಹರಿಸಬೇಕಿದೆ. ನೀರು ಮತ್ತು ಗಾಳಿ ಮಾಲಿನ್ಯದಿಂದ ದೇಶದ ಆಸ್ತಿಯಾಗಿರುವ ಯುವಕರ ಆರೋಗ್ಯ ಹಾಳಾಗುತ್ತಿದೆ ಎಂದರು.

ನಗರದಲ್ಲಿ ಮೊದಲು ಒತ್ತುವರಿ ತೆರವುಗೊಳಿಸಿ ಸಂಪೂರ್ಣವಾಗಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು. ನಗರಕ್ಕೆ 18 ಟಿಎಂಸಿ ನೀರು ಅವಶ್ಯವಿದ್ದು, ಶೇ.70ರಷ್ಟು ಮಳೆ ನೀರಿನಿಂದಲೇ ದೊರೆಯಲಿದೆ. ಕೊಳಚೆ ನೀರನ್ನು ಸಂಪೂರ್ಣ ಸಂಸ್ಕರಿಸಿದರೆ ಕನಿಷ್ಠ 16 ಟಿಎಂಸಿ ನೀರು ದೊರೆಯಲಿದೆ. 15 ಟಿಎಂಸಿ ಮಳೆ ನೀರು ಮತ್ತು ಸಂಸ್ಕರಿಸಿದ 16 ಟಿಎಂಸಿ ಸಂಸ್ಕರಿತ ನೀರು ಸೇರಿದರೆ ನಗರದ ನೀರಿನ ಬಿಕ್ಕಟ್ಟು ನಿವಾರಣೆಯಾಗಲಿದೆ ಎಂದರು.

English summary
New Bengaluru for New India (NBNI), a facebook live discussion of Rajya Sabha member Rajeev Chandrasekhar raised many questions like definition of development which only helps builders and contractors which was done in Congress led government in the state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X