ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಕೆರೆ: ಸಿದ್ದರಾಮಯ್ಯ ವಿರುದ್ಧ ರಾಜೀವ್ ಚಂದ್ರಶೇಖರ್ ಟೀಕೆ

By Nayana
|
Google Oneindia Kannada News

ಬೆಂಗಳೂರು, ಜೂನ್ 14: ಬೆಂಗಳೂರಿನ ಬೆಳ್ಳಂದೂರು ಕೆರೆಯನ್ನು ಸೆಪ್ಟಿಕ್ ಟ್ಯಾಂಕ್‌ ಆಗಿ ಪರಿವರ್ತಿಸುವ ಸಿದ್ದರಾಮಯ್ಯ ಸರ್ಕಾರಕ್ಕೆ ಭಾರಿ ಹಿನ್ನಡೆ ಉಂಟಾಗಿದ್ದು, ಸತತ ಹೋರಟಾಕ್ಕೆ ಪ್ರತಿಫಲ ದೊರೆತಿದೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟ್ವಿಟ್ಟರ್‌ನಲ್ಲಿ ಬಣ್ಣಿಸಿದ್ದಾರೆ.

ಬೆಳ್ಳಂದೂರು ಕೆರೆ: ಸರ್ಕಾರದ ಮಾಹಿತಿ ಪರಿಶೀಲನೆಗೆ ಎನ್‌ಜಿಟಿ ಸಮಿತಿಬೆಳ್ಳಂದೂರು ಕೆರೆ: ಸರ್ಕಾರದ ಮಾಹಿತಿ ಪರಿಶೀಲನೆಗೆ ಎನ್‌ಜಿಟಿ ಸಮಿತಿ

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೇಮಕ ಮಾಡಿದ್ದ ಪರಿಶೀಲನಾ ತಂಡ ಬೆಳ್ಳಂದೂರು ಕೆರೆ ಭೇಟಿ ಕೊಟ್ಟ ಬಳಿಕ ನೀಡಿರುವ ವರದಿಯಲ್ಲಿ ಬೆಂಗಳೂರಿನ ಬೆಳ್ಳಂದೂರು ಕೆರೆಯನ್ನು ಸೆಪ್ಟಿಕ್ ಟ್ಯಾಂಕ್ ಆಗಿ ಪರಿವರ್ತಿಸಲು ಅಲ್ಲಿನ ಸ್ಥಳೀಯ ಸರ್ಕಾರ ಹುನ್ನಾರ ನಡೆಸಿತ್ತು ಎಂಬ ವರದಿ ನೀಡಿದೆ.

ಈ ವರದಿಯನ್ನು ಆಧರಿಸಿ ಇಂಡಿಯಾ ಟುಡೆ ಪ್ರಕಟಿಸಿರುವ ಸುದೀರ್ಘ ಲೇಖನವನ್ನು ಉಲ್ಲೇಖಿಸಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂದಿನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನವಿರೋಧಿ ಚಿಂತನೆಗಳಿಗೆ ತಕ್ಕ ಉತ್ತರವನ್ನು ಎನ್‌ಜಿಟಿ ನೀಡಿದೆ ಎಂದು ರಾಜೀವ್‌ ಚಂದ್ರಶೇಖರ್ ಬಣ್ಣಿಸಿದ್ದಾರೆ.

Rajeev Chandrasekhar claims setback for Siddaramaiah In Bellandur lake case

ಹಸಿರು ನ್ಯಾಯಾಧೀಕರಣ ನೇಮಿಸಿರುವ ತಂಡವು ಏ.14 ಮತ್ತು 15ರಂದು ಬೆಳ್ಳಂದೂರು, ಅಗರ, ವರ್ತೂರು ಕೆರೆಗಳ ಪರಿಶೀಲನೆ ನಡೆಸಿತ್ತು. ಎನ್‌ಜಿಟಿಗೆ ಮಾಹಿತಿ ನೀಡಿರುವಂತೆ ಸರ್ಕಾರ ಕೆರೆಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮ, ವಾಸ್ತವದಲ್ಲಿ ನಡೆದಿರುವ ಕಾಮಗಾರಿಗಳು, 75 ಮೀಟರ್‌ವರೆಗೆ ಬಫರ್ ಜೋನ್, ಎಸ್‌ಜಿಟಿಗಳ ನಿರ್ವಹಣೆ ವೀಕ್ಷಿಸಿ ವರದಿಯನ್ನು ನ್ಯಾಯಾಧೀಕರಣಕ್ಕೆ ನೀಡಿತ್ತು.

English summary
Rajyasabha member Rajeev chandrasekhar has tweeted that NGT formed commitee has reported previous government was try to convert Bellandur lake to septic tank. It is a big setback for Siddaramaiah's government policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X