ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

RR ನಗರ ಮತದಾನ ಮುಕ್ತಾಯ, ಮೇ 31ಕ್ಕೆ ಫಲಿತಾಂಶ

By Manjunatha
|
Google Oneindia Kannada News

ಬೆಂಗಳೂರು, ಮೇ 28: ಚುನಾವಣಾ ಅಕ್ರಮದಿಂದಾಗಿ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಗೆ ಇಂದು ಮತದಾನ ಮುಗಿದಿದೆ.

ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ 9000 ಕ್ಕೂ ಹೆಚ್ಚು ಮತದಾರ ಗುರುತಿನ ಚೀಟಿ ಸಿಕ್ಕಿತ್ತು ಜೊತೆಗೆ ಕಂಟೇನರ್ ಒಂದರಲ್ಲಿ ಮುನಿರತ್ನ ಅವರ ಚಿತ್ರವುಳ್ಳ ಟೀಶರ್ಟ್ ದೊರಕಿತ್ತು.

ಆರ್.ಆರ್.ನಗರ : ಮತದಾನ ಅಂತ್ಯ, ಮೇ .31ರಂದು ಫಲಿತಾಂಶಆರ್.ಆರ್.ನಗರ : ಮತದಾನ ಅಂತ್ಯ, ಮೇ .31ರಂದು ಫಲಿತಾಂಶ

ಮತದಾರರ ಗುರುತಿನ ಚಿತ್ರ ದೊರಕಿದ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆದ ಕಾರಣ ಚುನಾವಣಾ ಆಯೋಗವು ರಾರಾನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಿತ್ತು. ಹಾಗಾಗಿ ಇಂದು ಈ ಕ್ಷೇತ್ರದ ಅಭ್ಯರ್ಥಿಗಳ ಹಣೆಬರಹ ಇವಿಎಂ ಮಷೀನ್‌ಗಳಲ್ಲಿ ಭದ್ರವಾಗಿದೆ. ಫಲಿತಾಂಶ ಇದೇ ತಿಂಗಳ 31ಕ್ಕೆ ಹೊರಬೀಳಲಿದೆ.

Rajarajeshwari Nagar voting is over, counting is on May 31st.

ಇಂದು ಸಂಜೆ 5 ಗಂಟೆ ವೇಳೆಗೆ ಶೇ 50 ರಷ್ಟು ಮತದಾನವಾದ ಬಗ್ಗೆ ಮಾಹಿತಿ ದೊರೆತಿದ್ದು, ಒಟ್ಟಾರೆ ಮತದಾನದ ಶೇ. ಲೆಕ್ಕ ಚುನಾವಣಾ ಆಯೋಗ ಇನ್ನೂ ನೀಡಿಲ್ಲ.

ಬಿಜೆಪಿ ಶಾಸಕ ಆರ್.ಅಶೋಕ್, ಮಾಳವಿಕಾ, ಅವಿನಾಶ್, ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ಸುಚಿತೇಂದ್ರ ಪ್ರಸಾದ್, ಪವಿತ್ರ ಲೋಕೇಶ್ ಇನ್ನೂ ಹಲವು ಪ್ರಮುಖರು ಇಂದು ತಮ್ಮ ಮತ ಚಲಾಯಿಸಿದರು.

ಆರ್‌ಆರ್‌ನಗರ ಚುನಾವಣೆ: 300 ಭಿಕ್ಷುಕರಿಂದ ಮತದಾನಆರ್‌ಆರ್‌ನಗರ ಚುನಾವಣೆ: 300 ಭಿಕ್ಷುಕರಿಂದ ಮತದಾನ

ಆರ್ ಆರ್ ನಗರ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿರುವವರಿಗೆ ಮತದಾನದ ವ್ಯವಸ್ಥೆ ಮಾಡಲಾಗಿತ್ತು. 300ಕ್ಕೂ ಹೆಚ್ಚು ಬಿಕ್ಷುಕರು ಸುಂಕದಕಟ್ಟೆಯ ಶ್ರೀನಿವಾಸ ನಗರದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಪುನರ್ವಸತಿ ಕೇಂದ್ರದಲ್ಲಿ 850 ಭಿಕ್ಷುಕರಿದ್ದು, ಅವರಲ್ಲಿ ಬುದ್ಧಿಮಾಂದ್ಯರನ್ನು ಹೊರತುಪಡಿಸಿ ಉಳಿದವರಿಗೆ ಮತದಾನ ಸೌಲಭ್ಯ ಕಲ್ಪಿಸಲಾಗಿತ್ತು.

Rajarajeshwari Nagar voting is over, counting is on May 31st.

ಮತದಾನವು ಶಾಂತಿಯುತವಾಗಿ ನಡೆಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಲಗ್ಗೆರೆಯ 154ನೇ ಮತಗಟ್ಟೆಯಲ್ಲಿ ಇವಿಎಂನಲ್ಲಿ ಕಾಣಿಸಿಕೊಂಡಿದ್ದ ದೋಷವನ್ನು ಅಧಿಕಾರಿಗಳು ಸರಿಪಡಿಸಿದ್ದಾರೆ. ಈ ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು.

ಮತೆಣಿಕೆಯು ಮೇ 31ರಂದು ನಡೆಯಲಿದ್ದು, ಫಲಿತಾಂಶದ ದಿನ ಗಲಾಟೆ ಆಗುವ ಬಗ್ಗೆ ಪೊಲೀಸ್ ಗುಪ್ತಚರ ಇಲಾಖೆಗೆ ಮಾಹಿತಿ ಇರುವ ಕಾರಣ ಅಂದು ಕ್ಷೇತ್ರದಲ್ಲಿ ನಿಷೇಧಾಜ್ಞೆಯನ್ನು ಆಯುಕ್ತ ಸುನಿಲ್ ಕುಮಾರ್ ಜಾರಿಗೊಳಿಸಿದ್ದಾರೆ.

ರಾರಾನಗರ ಕ್ಷೇತ್ರದಲ್ಲಿ ಒಟ್ಟು 14 ಮಂದಿ ಚುನಾವಣೆ ಕಣದಲ್ಲಿದ್ದಾರೆ ಆದರೆ ಪ್ರಮುಖವಾಗಿ ಸ್ಪರ್ಧೆ ನಡೆಯುತ್ತಿರುವುದು ಕಾಂಗ್ರೆಸ್‌ನ ಮುನಿರತ್ನ, ಜೆಡಿಎಸ್‌ನ ಜಿ.ಎಚ್. ರಾಮಚಂದ್ರಪ್ಪ ಮತ್ತು ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರ ನಡುವೆ. ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹುಚ್ಚಾ ವೆಂಕಟ್ ಕೂಡ ಸ್ಪರ್ಧಿಸಿದ್ದಾರೆ.

English summary
Bengaluru's Rajarajeshwari Nagar constituency voting is over today. as per the election commission 50% voting till evening 5. Vote counting is going to held on May 31st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X