ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜರಾಜೇಶ್ವರಿ ನಗರ ಫಲಿತಾಂಶ : ಪಕ್ಷೇತರರಲ್ಲಿ ವೆಂಕಟ್ ಅವರೇ ಬೆಸ್ಟ್

By Prasad
|
Google Oneindia Kannada News

ಬೆಂಗಳೂರು, ಮೇ 31 : "ನಾನು ಯಾರಿಗೂ ಯಾವುದೇ ರೀತಿಯ ಆಮಿಷವೊಡ್ಡಿಲ್ಲ. ಪ್ರಾಮಾಣಿಕವಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಅದಕ್ಕೆಂದೇ ನಾನು ಸೋತಿದ್ದೇನೆ. ತಪ್ಪು ನನ್ನದೋ ಜನರದ್ದೋ?"

ಹೀಗೆಂದು ನೋವಿನಿಂದ ಕೇಳಿದವರು ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, 'ಫೈರಿಂಗ್ ಸ್ಟಾರ್' ವೆಂಕಟರಾಮ್ ಅಲಿಯಾಸ್ ಹುಚ್ಚ ವೆಂಕಟ್ ಅವರು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು ಪಡೆದಿರುವ ಮತಗಳು 620.

ಆರ್‌ಆರ್‌ನಗರ ಚುನಾವಣೆ: ಹುಚ್ಚವೆಂಕಟ್‌ ಸೋಲಿಗೆ 5 ಕಾರಣಗಳುಆರ್‌ಆರ್‌ನಗರ ಚುನಾವಣೆ: ಹುಚ್ಚವೆಂಕಟ್‌ ಸೋಲಿಗೆ 5 ಕಾರಣಗಳು

ಚುನಾವಣಾ ಅಕ್ರಮ ನಡೆದಿದೆ ಎಂದು ಮುಂದೂಡಲಾಗಿದ್ದ ಈ ಕ್ಷೇತ್ರದಲ್ಲಿ ಇತರ ಸ್ಪರ್ಧಿಗಳು ಪಡೆದಿರುವ ಮತಗಳು ಇಂತಿವೆ. ಕಾಂಗ್ರೆಸ್ಸಿನ ಮುನಿರತ್ನ 1,08,064, ಬಿಜೆಪಿಯ ಮುನಿರಾಜು ಗೌಡ 82,572 ಮತ್ತು ಜೆಡಿಎಸ್ ನ ಜಿಎಚ್ ರಾಮಚಂದ್ರ 60,360 ಮತಗಳನ್ನು ಗಳಿಸಿದ್ದಾರೆ.

ರಾರಾನಗರದಲ್ಲಿ ಸ್ಪರ್ಧೆಗಿಳಿದಿರುವ 'ಹುಚ್ಚ' ವೆಂಕಟ್ ಆಸ್ತಿಯೆಷ್ಟು?ರಾರಾನಗರದಲ್ಲಿ ಸ್ಪರ್ಧೆಗಿಳಿದಿರುವ 'ಹುಚ್ಚ' ವೆಂಕಟ್ ಆಸ್ತಿಯೆಷ್ಟು?

ಇಂಥ ಘಟಾನುಘಟಿ ಸ್ಪರ್ಧಿಗಳ ನಡುವೆ ಯಾವುದೇ ಅಬ್ಬರವಿಲ್ಲ, ಅಕ್ಷರಶಃ ಪ್ರಚಾರವೂ ಇಲ್ಲದೆ, ಮತದಾರರಿಗೆ ಯಾವುದೇ ಆಮಿಷ ಒಡ್ಡದೆ, ಯಾವುದೇ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ, ಆದರೆ, ಅಪಾರ ಜನಾನುರಾಗಿ ಆಗಿರುವ ವೆಂಕಟ್ ಅವರು ಪಡೆದಿರುವ ಮತಗಳು ನೋಟಾಗಿಂತಲೂ ಕಡಿಮೆ.

ಆರ್.ಆರ್.ನಗರ ಚುನಾವಣೆ : ಹುಚ್ಚ ವೆಂಕಟ್ ಪಡೆದ ಮತಗಳೆಷ್ಟು?ಆರ್.ಆರ್.ನಗರ ಚುನಾವಣೆ : ಹುಚ್ಚ ವೆಂಕಟ್ ಪಡೆದ ಮತಗಳೆಷ್ಟು?

ಅವರು ಚುನಾವಣೆಯಲ್ಲಿ ಡೆಪಾಸಿಟ್ ಕಳೆದುಕೊಂಡಿರಬಹುದು. ಆದರೆ, ರಾಜಕೀಯದಲ್ಲಿ ಅವರಿಲ್ಲದಿದ್ದರೂ, ರಾಜಕಾರಣ ಅವರಿಗೆ ಗೊತ್ತಿಲ್ಲದಿದ್ದರೂ ಜನರ ಪ್ರೀತಿಯನ್ನು ಕಳೆದುಕೊಂಡಿಲ್ಲ ಎಂಬುದಕ್ಕೆ ಅವರು ಪಡೆದಿರುವ ಅಷ್ಟು ಮತಗಳೇ ಸಾಕ್ಷಿ. ಅಲ್ಲದೆ, ಅವರ ಸೋಲಿನ ಕುರಿತಂತೆ ಹಲವರು ಹಲವು ಬಗೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಇತರ ತಮಾಷೆಯ ಪ್ರತಿಕ್ರಿಯೆಗಳು ಕೂಡ ಇಲ್ಲಿವೆ.

ಮುನಿರತ್ನ ಹೀಗೂ ಉಂಠೇ?

ಮುನಿರತ್ನ ಅವರು 41,162 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಇಷ್ಟೆಲ್ಲಾ ಲೀಡ್ ತಗೊಂಡಿದ್ದರೂ ಮುನಿರತ್ನ ಅವರು ಅಕ್ರಮ ಎಸಗಿದ್ದು ಏಕೆ? ನಕಲಿ ವೋಟರ್ ಐಡಿ ಮಾಡಿದ್ದು ಯಾಕೆ? (ಮತಚೀಟಿ ಸಂಗ್ರಹಿಸಿದ ಆರೋಪ ಅವರ ಮೇಲಿತ್ತು) ನಮ್ಮನ್ನೆಲ್ಲಾ ಕಾಡುವ ಕಾಡೋ ಕಡೆಯ ಪ್ರಶ್ನೆ... ಹೀಗೂ ಉಂಠೆ? ಎಂದು ಲೋಹಿತ್ ಅವರು ತಮಾಷೆ ಮಾಡಿದ್ದಾರೆ.

ವೆಂಕಟ್ ಅವರಿಗೂ ವೋಟ್ ಹಾಕೋರು ಇದ್ದಾರಾ?

ಹುಚ್ಚ ವೆಂಕಟ್ ಅವರಿಗೂ ವೋಟ್ ಹಾಕೋರು ಇದ್ದಾರಾ? ಶಿವ ಶಿವಾ... ಇನ್ನೂ ಏನೇನು ಬಾಕಿ ಇದೆಯೋ ಎಂದು ಶ್ವೇತಾ ಆನಂದ್ ಅವರು ಬಾಯಿಯ ಮೇಲೆ ಅಚ್ಚರಿಯಿಂದ ಬೆರಳಿಟ್ಟಿದ್ದಾರೆ. ಹುಚ್ಚ ವೆಂಕಟ್ ಅವರು ಬಿಡಿ, ಇನ್ನೂ ಎಂಥೆಂಥವರೋ ಭರ್ಜರಿ ಪ್ರಚಾರ ಮಾಡಿಯೂ ಇಷ್ಟು ಕೂಡ ಮತ ಗಳಿಸಿರುವುದಿಲ್ಲ. ಅವರಿಗಿಂತ ಹುಚ್ಚ ವೆಂಕಟ್ ಅವರೇ ಎಷ್ಟೋ ಮೇಲು ಅಲ್ಲವೆ. ನೀರಿಗಿಳಿದ ಮೇಲೆ ತಾನೆ ಆಳದ ಅರಿವಾಗುವುದು?

ಹುಚ್ಚ ವೆಂಕಟ್ ವರ್ಸಸ್ ನೋಟಾ

ರಾಜರಾಜೇಶ್ವರಿ ನಗರದಲ್ಲಿ ಏನು ಜಿದ್ದಾಜಿದ್ದಿ ಫೈಟ್ ಅಂತೀರಾ? ಕಾಂಗ್ರೆಸ್, ಬಿಜೆಪಿ ನಡುವೆ ಅಲ್ಲ! ಹುಚ್ಚ ವೆಂಕಟ್ ಮತ್ತು ನೋಟಾ ನಡುವೆ! ಯಾರು ಗೆಲ್ತಾರೆ ಅಂತ ಅತ್ಯಂತ ಕುತೂಹಲದಿಂದ ನೋಡುತ್ತಿದ್ದೇನೆ. ಯಾರು ಗೆಲ್ತಾರೆ? ನಾನು ನೋಟಾ ಮೇಲೆ ಬೇಕಿದ್ರೆ ಬೆಟ್ಟಿಂಗ್ ಕಟ್ತೇನೆ ಎಂದು ರಾಮಚಂದ್ರ ಎಂಬುವವರು ತಮ್ಮ ಹಾಸ್ಯ ಲಹರಿಯನ್ನು ಹರಿಯಬಿಟ್ಟಿದ್ದಾರೆ.

ವೆಂಕಟ್ ಸಾಧನೆಯೇನು ಕಮ್ಮಿಯದಲ್ಲ

ವೆಂಕಟ್ ಗಳಿಸಿರುವ ವೋಟ್ ಗಳ ಬಗ್ಗೆ ಅಷ್ಟು ಕೇವಲವಾಗಿ ಮಾತಾಡುವುದು ಅಷ್ಟು ತರವಲ್ಲ. ಏಕೆಂದರೆ, ಉಳಿದೆಲ್ಲ ಪಕ್ಷೇತರರಿಗಿಂತ ಕಾಂಟ್ರೋವರ್ಸಿಯಲ್ ರಿಯಾಲಿಟಿ ಶೋ ಸ್ಟಾರ್ ಹುಚ್ಚ ವೆಂಕಟ್ ಅವರು ಹೆಚ್ಚು ಮತ ಗಳಿಸಿದ್ದಾರೆ. ಇದು ಸಾಧನೆ ಅಲ್ಲವೆ? ವೆಂಕಟ್ ಅವರು ಪಡೆದದ್ದು 764 ವೋಟುಗಳು. ಏನೇ ಆಗ್ಲಿ, ಲೋಕಸಭೆ ಚುನಾವಣೆಯಲ್ಲೂ ವೆಂಕಟ್ ಅವರು ಸ್ಪರ್ಧಿಸಲಿದ್ದಾರಂತೆ. ಪ್ರಧಾನಿಯಾಗುವುದೇ ನನ್ನ ಕನಸು ಎಂದೂ ಅವರು ಹೇಳಿದ್ದಾರೆ.

English summary
Rajarajeshwari Nagar assembly election results 2018 : Controversial reality show star Huccha Venkat is best among the Independents, though he has not beaten NOTA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X