ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್.ಆರ್.ನಗರ ಚುನಾವಣೆ : ವಶಪಡಿಸಿಕೊಂಡಿದ್ದ ವೋಟರ್ ಐಡಿ ಹಂಚಿಕೆ

By Gururaj
|
Google Oneindia Kannada News

ಬೆಂಗಳೂರು, ಮೇ 24 : ರಾಜರಾಜೇಶ್ವರಿ ನಗರದ ಕ್ಷೇತ್ರದ ಚುನಾವಣೆಗೆ ಚುನಾವಣಾ ಆಯೋಗವು ಸಿದ್ಧವಾಗುತ್ತಿದೆ. ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಶಕ್ಕೆ ಪಡೆಯಲಾಗಿದ್ದ ಮತದಾರರ ಗುರುತಿನ ಚೀಟಿಗಳನ್ನು ಜನರಿಗೆ ವಾಪಸ್ ನೀಡಲಾಗುತ್ತಿದೆ.

ಮೇ 8ರಂದು ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನ ಫ್ಲಾಟ್‌ ನಂ 115ರಲ್ಲಿ 9,746 ವೋಟರ್‌ ಐಡಿಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿತ್ತು. ಬಳಿಕ ಮೇ 12ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು.

ಆರ್.ಆರ್.ನಗರ ಚುನಾವಣೆ : ಮುನಿರತ್ನ, ಕುಮಾರಸ್ವಾಮಿ ರಹಸ್ಯ ಚರ್ಚೆ!ಆರ್.ಆರ್.ನಗರ ಚುನಾವಣೆ : ಮುನಿರತ್ನ, ಕುಮಾರಸ್ವಾಮಿ ರಹಸ್ಯ ಚರ್ಚೆ!

ಮೇ 28ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ನಡೆಯಲಿದೆ. ಆದ್ದರಿಂದ, ಚುನಾವಣಾ ಆಯೋಗ ಗುರುತಿನ ಚೀಟಿಗಳನ್ನು ಮತದಾರರಿಗೆ ವಾಪಸ್ ವಿತರಣೆ ಮಾಡುತ್ತಿದೆ. ಮತ ಚೀಟಿಗಳು ಕಳೆದು ಹೋಗಿವೆ ಎಂದು ಜನರಿಂದ ಹೇಳಿಕೆ ಪಡೆದುಕೊಂಡು ಚೀಟಿಗಳನ್ನು ವಾಪಸ್ ನೀಡಲಾಗುತ್ತಿದೆ.

Rajarajeshwari Nagar elections : Voter ID card distribution begins

ಚುನಾವಣಾ ಅಧಿಕಾರಿಗಳು ನೀಡಿದ ದೂರಿನ ಅನ್ವಯ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸೇರಿದಂತೆ 14 ಜನರ ವಿರುದ್ಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಆರ್‌.ಆರ್.ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಮುನಿರತ್ನ ಎಂಎಲ್‌ಸಿ?ಆರ್‌.ಆರ್.ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಮುನಿರತ್ನ ಎಂಎಲ್‌ಸಿ?

ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕ ಎಲ್ಲಾ ಗುರುತಿನ ಚೀಟಿಗಳು ಅಸಲಿಯಾಗಿವೆ. ಚುನಾವಣಾಧಿಕಾರಿಗಳು ಅವುಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಮೇ 28ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಅದನ್ನು ಜನರಿಗೆ ವಾಪಸ್ ನೀಡಲಾಗುತ್ತಿದೆ.

English summary
Distribution of voter identity cards began in Rajarajeshwari Nagar assembly constituency, Bengaluru. Assembly elections will be held on May 28, 2018. The flying squad of the Election Commission on May 8, 2018 seized 9 thousand voter identity cards from a flat in Jalahalli
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X