ದರ್ಶನ್ ಮನೆ, ಎಸ್ಎಸ್ ಆಸ್ಪತ್ರೆ ನೆಲಸಮವಾಗಲಿದೆ: ಡಿಸಿ ಶಂಕರ್

Posted By:
Subscribe to Oneindia Kannada
   ಕನ್ನಡದ ನಟ ದರ್ಶನ ಮನೆ ತೆರವು ಕಾರ್ಯ ಸದ್ಯದಲ್ಲೇ | Oneindia Kannada

   ಬೆಂಗಳೂರು, ಅಕ್ಟೋಬರ್ 19: ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ ಒತ್ತುವರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶಂಕರ್ ಅವರು ಮಹತ್ವದ ಸುಳಿವು ನೀಡಿದ್ದಾರೆ. ಹೈಕೋರ್ಟಿನಿಂದ ರಿಲೀಫ್ ಪಡೆದರೂ ದರ್ಶನ್ ಮನೆ ಹಾಗೂ ಶಾಮನೂರು ಕುಟುಂಬದ ಆಸ್ಪತ್ರೆ ನೆಲಸಮ ಮಾಡುವ ಅಧಿಕಾರ ಬಿಬಿಎಂಪಿಗಿದೆ ಎಂದಿದ್ದಾರೆ.

   ರಾಜಕಾಲುವೆ ಒತ್ತುವರಿ ತೆರವು ಎಂಬ ನಿಗೂಢ ರಹಸ್ಯ

   ಐಡಿಯಲ್ ಹೋಮ್ ಒತ್ತುವರಿಗೆ ಸಂಬಂಧಿಸಿದಂತೆ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳುವ ಅಧಿಕಾರ ವಿಶೇಷ ಆಯುಕ್ತರಿಗಿರುತ್ತದೆ ಎಂದು ಡಿಸಿ ಶಂಕರ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

   ರಾಜ ಕಾಲುವೆ ಒತ್ತುವರಿಯಾಗಿದ್ದರೆ ನಾನೇ ಅಗೆದುಕೊಡ್ತೀನಿ: ದರ್ಶನ್

   ರಾಜಕಾಲುವೆ ಒತ್ತುವರಿ ಮಾಡಿ, ಅನಧಿಕೃತವಾಗಿ ನಿರ್ಮಿಸಿರುವ ಮನೆ, ಆಸ್ಪತ್ರೆ ಸೇರಿದಂತೆ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಲಾಗುವುದು. ಈ ಕುರಿತಂತೆ ಎರಡೆರಡು ಬಾರಿ ಸರ್ವೆ ನಡೆಸಿದ್ದೇವೆ, ಬಿಬಿಎಂಪಿ ತೆರವು ಕಾರ್ಯ ಮಾಡಲಿ ಎಂದು ಹೇಳಿದರು.

   ರಾಜಕಾಲುವೆ ಜಾಗದಲ್ಲೇ ದರ್ಶನ್ ತೂಗುದೀಪ ಅವರ ಮನೆ

   ನಟ ದರ್ಶನ್ ತೂಗುದೀಪ ಅವರ ಮನೆ ಹಾಗೂ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಎಸ್.ಎಸ್ ಆಸ್ಪತ್ರೆ ತೆರವು ವಿಚಾರದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಹೈಕೋರ್ಟ್ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ತೆರವು ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ತೆರವುಗೊಳಿಸುವ ಅಧಿಕಾರವನ್ನು ಸ್ಪೆಷಲ್ ಕಮೀಷನರ್ ಹೊಂದಿರುತ್ತಾರೆ ಎಂದಿದ್ದಾರೆ.

    ಸರ್ವೆ ವರದಿ ಏನು ಹೇಳುತ್ತದೆ?

   ಸರ್ವೆ ವರದಿ ಏನು ಹೇಳುತ್ತದೆ?

   ಭೂ ದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ಕೆ.ಜಯಪ್ರಕಾಶ್‌ ಅವರು ಬಿಬಿಎಂಪಿ ಆಯುಕ್ತರಿಗೆ ಸರ್ವೆ ವರದಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ದರ್ಶನ್ ಅವರ ಮನೆ ಮತ್ತು ಎಸ್.ಎಸ್.ಆಸ್ಪತ್ರೆ ಸೇರಿದಂತೆ ವಿವಿಧ ಕಟ್ಟಡಗಳು ಸುಮಾರು 7 ಎಕರೆಯಷ್ಟು ವಿಸ್ತೀರ್ಣದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿವೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಸರಕಾರಿ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಎಟಿ ರಾಮಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. 2007ರಲ್ಲಿ 1,22,918ಎಕರೆ ಸರ್ಕಾರಿ ಜಮೀನು ಒತ್ತುವರಿ ಇದೆ ಅಂತ ವರದಿ ನೀಡಿದ್ದರು.

    ಬಿಬಿಎಂಪಿ ಆಯುಕ್ತರು ಹೇಳುವುದೇನು?

   ಬಿಬಿಎಂಪಿ ಆಯುಕ್ತರು ಹೇಳುವುದೇನು?

   ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಈ ಕುರಿತು ಹೇಳಿಕೆ ನೀಡಿ, '1969ರಲ್ಲಿ ಬೆಂಗಳೂರು ನಗರ ಸುಧಾರಣಾ ಟ್ರಸ್ಟ್ ಮಂಡಳಿಯಿಂದ ಐಡಿಯಲ್ ಹೋಮ್ಸ್ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು. 1989ರಲ್ಲಿ ಬಡಾವಣೆಯ ಪರಿಷ್ಕೃತ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ದೊರೆತಿದೆ. ಅದರೆ, ನಂತರದ ಬೆಳವಣಿಗೆಯಲ್ಲಿ ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿಯಾಗಿರುವುದು ಕಂಡು ಬಂದಿದೆ. ಈ ಬಗ್ಗೆ ನಡೆಸಿದ ಎರಡು ಸರ್ವೆಗಳ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ.

   ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್ಸೈ ಟ್ನ ನಲ್ಲಿ ಲಭ್ಯ

    ಎಷ್ಟು ಒತ್ತುವರಿಯಾಗಿದೆ?

   ಎಷ್ಟು ಒತ್ತುವರಿಯಾಗಿದೆ?

   ನಟ ದರ್ಶನ್ ಅವರು ಒಟ್ಟು 2,100 ಚ. ಅಡಿ ರಾಜ ಕಾಲುವೆ ಪ್ರದೇಶ ಒತ್ತುವರಿ ಮಾಡಿ ಮನೆ ನಿರ್ಮಿಸಿರುವುದು ಬಿಬಿಎಂಪಿ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಶಾಸಕ ಶಾಮನೂರು ಶಿವಶಂಕರಪ್ಪ ಅವರ ಎಸ್.ಎಸ್. ಆಸ್ಪತ್ರೆಯು ಸಹ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವುದು ದೃಢಪಟ್ಟಿದೆ. ಒಟ್ಟು 22ಗುಂಟೆ ಒತ್ತುವರಿ ಸ್ಥಳ, 69 ಆಸ್ತಿಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ ಎಂದು ತಹಶೀಲ್ದಾರ್ ಶಿವಕುಮಾರ್ ಅವರು ಒನ್ ಇಂಡಿಯಾಗೆ ತಿಳಿಸಿದ್ದಾರೆ.

    ಶಾಮನೂರು ಶಿವಶಂಕರಪ್ಪ ಪ್ರಶ್ನೆ

   ಶಾಮನೂರು ಶಿವಶಂಕರಪ್ಪ ಪ್ರಶ್ನೆ

   30 ವರ್ಷಗಳ ಹಿಂದೆ ಆಸ್ಪತ್ರೆಗೆಂದು 2.34 ಎಕರೆ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ)ಪಡೆದುಕೊಂಡಿದ್ದೆವು. ಅದು ಈಗ ಹೇಗೆ ಅಕ್ರಮವಾಗುತ್ತದೆ ಎಂದು ದಾವಣಗೆರೆ ದಕ್ಷಿಣದ ಎಂ ಎಲ್ ಎ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಪ್ರಶ್ನಿಸಿದ್ದಾರೆ. ಪ್ರಭಾವಿಗಳ ಮನೆ, ಮಾಲ್ ಗಳನ್ನು ಮಾತ್ರ ತೆರವುಗೊಳಿಸದೆ ಉಳಿಸಲಾಗಿದೆ. ಮಧ್ಯಮ ವರ್ಗದ ಜನರು, ಬಡವರಿಗೆ ಬಿಡಿಎ ಕಾರ್ಯಾಚಾರಣೆಯಿಂದ ಅನ್ಯಾಯವಾಗಿದೆ ಎಂದು ನೊಂದವರು ಪ್ರಶ್ನಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   RajaKuluve Drive : Kannada actor Darshan's house in Rajarajeshwari Nagar's Ideal Homes Layout faces demolition. Darshan's house and Shamanur Shivashankarappa's SS hospital encroached the Rajakaluve and it will be demolished soon said Bengaluru district administration.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ