ರಾಜ್ ರಾಗ : ರಾಜೋತ್ಸವದಲ್ಲಿ ರಾಗದ ಉತ್ಸವ

Posted By:
Subscribe to Oneindia Kannada

ಏಪ್ರಿಲ್ ಎಂದರೆ ಅದು ಕನ್ನಡಿಗರಿಗೆ " ರಾಜೋತ್ಸವ " ಇದನ್ನು ಮತ್ತಷ್ಟು ಮೆರಗುಗೊಳಿಸಲು ' ಅವಿರತ ' ಮತ್ತು
' ಭ್ರಮೆ ' ತಂಡಗಳು ಜಂಟಿಯಾಗಿ ಏಪ್ರಿಲ್ 24 ಅಂದರೆ ನಟ ಸಾರ್ವಭೌಮ " ಡಾ . ರಾಜ್ ಕುಮಾರ್ " ಅವರ ಜನ್ಮ ದಿನದ ಅಂಗವಾಗಿ " ರಾಜ್ ರಾಗ " ಎಂಬ ವಿಶಿಷ್ಟವಾದ, ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ .

"ನಾಡಿಗಾಗಿ ನಿರಂತರ " ಈ ಘೋಷವಾಕ್ಯದೊಂದಿಗೆ ಈಗಾಗಲೇ ಕನ್ನಡ ಸಾಹಿತ್ಯ , ಸಂಗೀತ ಕ್ಷೇತ್ರಗಳಲ್ಲಿ ತನ್ನದೇ ಆದ ವಿಭಿನ್ನ ರೀತಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರುವ " ಅವಿರತ " ಸಂಸ್ಥೆಯು ಇದೀಗ ಸಂಗೀತ ಸಾಮ್ರಾಜ್ಯದಲ್ಲಿ ಪುಟ್ಟ ಹೆಜ್ಜೆಯಿಟ್ಟು ದೊಡ್ಡದಾಗಿ ಬೆಳೆಯುತ್ತಿರುವ ಅಪ್ಪಟ ಕನ್ನಡದ ಪ್ರತಿಭಾನ್ವಿತರ " ಭ್ರಮೆ " ತಂಡದ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದಾರೆ . ಇದು ಅವರೇ ಹೇಳುವಂತೆ ಭಿನ್ನ - ಮಿಶ್ರ .[ಮಹಾರಾಷ್ಟ್ರ ಶಾಲೆ ಪಠ್ಯದಲ್ಲಿ ರಾಜ್‌ಕುಮಾರ್ ಕುರಿತು ಪಾಠ]

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಾಡಿನ ಖ್ಯಾತ ಸಂಗೀತ ನಿರ್ದೇಶಕರಾದ ' ಶ್ರೀ ರಾಜನ್ ' ರವರು ಇರಲಿದ್ದು ಸುಂದರ ಸಂಜೆಗೆ ಸಾಕ್ಷಿಯಾಗಲಿದ್ದಾರೆ.

Tribute to Dr Rajkumar by Bhrame and Aviratha Team

ಇವರ ಈ ಪ್ರಯತ್ನಕ್ಕೆ ಕನ್ನಡ ಚಿತ್ರರಂಗದ ಕಲಾವಿದರು ಮೆಚ್ಚುಗೆಯ ಮಾತುಗಳನ್ನು ಆಡುವ ಮೂಲಕ ಶುಭ ಹಾರೈಸಿದ್ದಾರೆ . ಬನ್ನಿ ನೀವು ಈ " ರಾಜ " ಮತ್ತು " ರಾಗ "ಉತ್ಸವದಲ್ಲಿ ಪಾಲ್ಗೊಂಡು ಕರುನಾಡ ಕಣ್ಮಣಿಯ ಹುಟ್ಟನ್ನು ಹಬ್ಬವಾಗಿಸಿ ..

ಭ್ರಮೆ ತಂಡವು ವಿಭಿನ್ನವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಈ ಕೆಳಕಂಡ ವಿಡಿಯೋಗಳನ್ನೂ ನೋಡಿ ..

ಪಾಸುಗಳಿಗೆ ಸಂಪರ್ಕಿಸಿ :
+91-9964126430
+91-9880086300

ಕಾರ್ಯಕ್ರಮ : ರಾಜ್ ರಾಗ

ದಿನಾಂಕ : 24/04/2016, ಭಾನುವಾರ

ಸ್ಥಳ : ಕೆ ಇ ಎ ಪ್ರಭಾತ್ ರಂಗ ಮಂದಿರ
ಕರ್ನಾಟಕ ಇಂಜಿನಿಯರ್ಸ್ ಅಕಾಡೆಮಿ
ಬಸವೇಶ್ವರ ನಗರ , ಬೆಂಗಳೂರು - 79

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tribute to Dr Rajkumar by Bhrame and Aviratha Team. 'Raj Raaga' A unique musical program scheduled on Dr Rajkumar's Birthday (April 24) at KEA Prabhath Rangamandira, Kamalanagar, Bengaluru.
Please Wait while comments are loading...