ರಾಜ್ ಲೀಲಾ ವಿನೋದಕ್ಕೆ ನಕಲಿ ಹಾವಳಿ, ಆದರೂ 15 ಸಾವಿರ ಪ್ರತಿ ಖಾಲಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 19: ಲೇಖಕ-ಪತ್ರಕರ್ತ ರವಿ ಬೆಳಗೆರೆ ಅವರು ಡಿಸೆಂಬರ್ 25ರಂದು ಐದಕ್ಕೂ ಹೆಚ್ಚು ಪುಸ್ತಕ ಬಿಡುಗಡೆ ಮಾಡಿದರು. ಅದರಲ್ಲೂ ನಟಿ ಲೀಲಾವತಿ ಅವರ ಆತ್ಮಕಥನ 'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ವಿಪರೀತ ಕುತೂಹಲ ಹಾಗೂ ನಿರೀಕ್ಷೆಗಳಿದ್ದವು. ಇದೀಗ ಆ ಪುಸ್ತಕದ ಮಾರಾಟ ಸಂಖ್ಯೆಯ ಮಾಹಿತಿ ಒನ್ಇಂಡಿಯಾ ಕನ್ನಡಕ್ಕೆ ಸಿಕ್ಕಿದೆ.

ಭಾವನಾ ಪ್ರಕಾಶನದ ಮಾರಾಟ ವಿಭಾಗದ ಮುಖ್ಯಸ್ಥರಾದ ರವಿಕುಮಾರ್ ಅವರು ನೀಡಿದ ಮಾಹಿತಿ ಪ್ರಕಾರ ಈ ವರೆಗೆ 'ರಾಜ್ ಲೀಲಾ ವಿನೋದ' ಪುಸ್ತಕದ ಹದಿನೈದು ಸಾವಿರ ಪ್ರತಿಗಳು ಮಾರಾಟವಾಗಿವೆ. ಸದ್ಯಕ್ಕೆ ಮತ್ತೆ ಪುಸ್ತಕದ ಮುದ್ರಣ ನಡೆಯುತ್ತಿದ್ದು, ಬೇಡಿಕೆಗೆ ತಕ್ಕಷ್ಟು ಪುಸ್ತಕ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.[ನನ್ನ ಸ್ಥಿತೀಲಿ ಬೇರೆ ಹೆಂಗಸಿದ್ದಿದ್ದರೆ ಎಷ್ಟು ರಾದ್ಧಾಂತ ಆಗ್ತಿತ್ತು?]

Raj Leela Vinoda 15 thousand copies sold out

ಉಳಿದಂತೆ ಅದು ಬಿಡುಗಡೆಯಾದ ಆತ್ಮ, ಬಾಟಮ್ ಐಟಮ್, ಕಾಳಿಂಗ ಕಾಳಗ ಪುಸ್ತಕಗಳ ಮಾರಾಟವು ಭರ್ಜರಿಯಾಗಿ ನಡೆದಿದೆ. ಕರ್ನಾಟಕದಾದ್ಯಂತ ಇರುವ ಹಲವು ಮಾರಾಟ ಮಳಿಗೆಗಳಿಂದ ಪುಸ್ತಕಕ್ಕೆ ಬೇಡಿಕೆ ಬಂದಿದೆ. ಆನ್ ಲೈನ್ ನಲ್ಲಿ ಪುಸ್ತಕವನ್ನು ಆರ್ಡರ್ ಮಾಡಿದವರಿಗೆ ಪೂರೈಸಲು ಸಹ ಸಾಧ್ಯವಾಗುತ್ತಿಲ್ಲ ಎಂದು ಕೆಲವು ಮಾರಾಟಗಾರರು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ ರಾಜ್ ಲೀಲಾ ವಿನೋದ ಪುಸ್ತಕದ ನಕಲು ಮಾಡಿ, ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ರವಿ ಬೆಳಗೆರೆ ಅವರು ಹೇಳಿದರು.[ಲೀಲಾವತಿ ಆತ್ಮಕಥನ 'ರಾಜ್ ಲೀಲಾ ವಿನೋದ'ದಲ್ಲಿ ಅಂಥಾದ್ದೇನಿದೆ?]

ಆನ್ ಲೈನ್ ಪುಸ್ತಕ ಮಾರಾಟ ಸೇರಿದಂತೆ ಇತರೆ ಓದು ಹಾಗೂ ಪುಸ್ತಕಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಮೊಬೈಲ್ ಅಪ್ಲಿಕೇಷನ್ ವೊಂದನ್ನು ರೂಪಿಸುವ ಆಲೋಚನೆ ಇದೆ ಎಂದು ಹೇಳಿದ ಅವರು, ಆ ಬಗ್ಗೆ ತಜ್ಞರು, ಸಲಹೆ ನೀಡಬಯಸುವವರು belagereravi@gmail.comಗೆ ಇ ಮೇಲ್ ಕಳುಹಿಸಬಹುದು ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Raj Leela Vinoda, an autobiography of actress Leelavati, wrote by journalist Ravi Belagere has been selling like a hot cake. Till day (Janauary 19) fifteen thousand copies of the book sold out, told by Bhavana prakashana sales department chief Ravikumar.
Please Wait while comments are loading...