ಗೃಹಪ್ರವೇಶಕ್ಕೆ ಹೆಲಿಕಾಪ್ಟರಿನಿಂದ ಪುಷ್ಟವೃಷ್ಟಿ, ಹೈಕೋರ್ಟಿನಲ್ಲಿ ಅರ್ಜಿ ವಜಾ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 6: ಗೃಹಪ್ರವೇಶಕ್ಕೆ ಮನೆಯ ಮೇಲೆ ಹೆಲಿಕಾಪ್ಟರಿನಿಂದ ಪುಷ್ಪವೃಷ್ಟಿ ಮಾಡುವಂತೆ ಅವಕಾಶ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯೊಂದನ್ನು ಹೈಕೋರ್ಟ್ ತಿರಸ್ಕರಿಸಿದೆ.

ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿಯ ಮುಳ್ಳೂರು ವ್ಯಾಪ್ತಿಯ ಸರ್ಜಾಪುರ ರಸ್ತೆಯ ನಿವಾಸಿ ಎಂ.ಮುನಿರಾಜು ಅವರು ಫೆ.9ರಂದು ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಈ ಸಮಯದಲ್ಲಿ ಡೆಕ್ಕನ್ ಏರ್ ವೇಶ್ ಪ್ರೈವೇಟ್ ಲಿಮಿಟೆಡ್ ನ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 11.30ಕ್ಕೆ ಮನೆಯ ಮೇಲೆ ಪುಷ್ಪವೃಷ್ಟಿ ನಡೆಸಲು ಗೃಹ ಪ್ರವೇಶ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ, ಕಳೆದ ತಿಂಗಳಿನಲ್ಲಿ ಅವಕಾಶ ಕಲ್ಪಿಸುವಂತೆ ಕೋರಿ ಜ.30ರಂದು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು ಆದರೆ ಆಯುಕ್ತರು ಮನವಿಯನ್ನು ತಿರಸ್ಕರಿಸಿದ್ದರು.[ಕದ್ದುಮುಚ್ಚಿ ಗೃಹಪ್ರವೇಶ ಮಾಡಿದ ಮಾಜಿ ಸಂಸದೆ ರಮ್ಯಾ]

rain of flowers wrapped by helicopter: High Court dismissed the petition

ಅನುಮತಿ ನೀಡಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಮುನಿರಾಜು ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಹೆಲಿಕಾಪ್ಟರಿನಿಂದ ಪುಷ್ಪವೃಷ್ಟಿ ಮಾಡುವುದು ಶಾಸ್ತ್ರವೇ? ಇದು ಆಚರನೆಯಲ್ಲಿದೆಯೇ ಎಂದು ಪ್ರಶ್ನೆ ಮಾಡಿರುವ ನ್ಯಾಯಾಲಯ ನಾವೇ ಒಂದು ಹೊಸ ಸಂಪ್ರದಾಯ ಸೃಷ್ಟಿಸಿದಂತಾಗುತ್ತದೆ. ಇದು ಸಮಾಜಕ್ಕೂ ಅಹಿತಕರ, ಮುನಿರಾಜು ಮನೆಯ ಸುತ್ತಮುತ್ತ ಅನೇಕ ಶೀಟ್ ಮನೆಗಳಿರುವ ಕಾರಣ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಮದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಸೋಮವಾರ ಅರ್ಜಿ ನಿರಾಕರಿಸಿದೆ.[ಕುಮಾರಸ್ವಾಮಿ-ಅನಿತಾ ದಂಪತಿಯಿಂದ ಹುಬ್ಬಳ್ಳಿಯಲ್ಲಿ ಗೃಹಪ್ರವೇಶ]

ಆದರೆ ಮುನಿರಾಜು ಅವರು ' ನಾನು ಈಗಾಗಲೇ ಗೃಹಪ್ರವೇಶ ಆಹ್ವಾನ ಪತ್ರಿಕೆಯಲ್ಲಿ ಪುಪ್ಪವೃಷ್ಟಿ ಮಾಡುವ ಚಿತ್ರವನ್ನು ಮುದ್ರಿಸಿ ಎಲ್ಲ ಸಂಬಂಧಿಕರಿಗೂ ಹಂಚಿದ್ದೇನೆ. ಒಂದು ವೇಳೆ ಅನುಮತಿಯನ್ನು ನಿರಾಕರಿಸಿದರೆ ನನಗೆ ಅವಮಾನವಾಗುತ್ತದೆ ಎಂದು ನ್ಯಾಯಲಯಕ್ಕೆ ತಿಳಿಸಿದ್ದಾರೆ ಆದರೆ ನ್ಯಾಯಲಯ ಅವರ ಮನವಿಯನ್ನು ತಿರಸ್ಕರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Let the rain of flowers wrapped by helicopter to the new house of the High Court dismissed the petition.
Please Wait while comments are loading...