ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಏ.1ರವರೆಗೂ ಮಳೆ: ಕಲಬುರಗಿಯಲ್ಲಿ ದಾಖಲೆಯ ಬಿಸಿಲು

|
Google Oneindia Kannada News

ಬೆಂಗಳೂರು, ಮಾರ್ಚ್ 30: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿರುವುದರಿಂದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದೆ.

ಏ.1ರವರೆಗೆ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುರುವಾರ ಮಳೆಯಾಗಿದೆ. ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಏ.3ರಂದು ಹಾವೇರಿ, ಧಾರವಾಡ, ರಾಯಚೂರು, ಕಲಬುರಗಿ ಭಾಗಗಳಲ್ಲಿ ಬಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಹೆಚ್ಚಿದ ತಾಪಮಾನಕ್ಕೆ ಬಸವಳಿದ ಜನರಾಜ್ಯದಲ್ಲಿ ಹೆಚ್ಚಿದ ತಾಪಮಾನಕ್ಕೆ ಬಸವಳಿದ ಜನ

ಚಿತ್ರದುರ್ಗ ಜಿಲ್ಲೆ ಹೊಸದುರ್ಗಘ ತಾಲೂಕಿನ ಮಾಡದಕೆರೆಯಲ್ಲಿ ಗುರುವಾರ ಅತಿ ಹೆಚ್ಚು 65ಮಿ.ಮೀ ನಷ್ಟು ಭಾರಿ ಮಳೆಯಾಗಿದೆ. ಈ ನಡುವೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಏರತೊಡಗಿದ್ದು, ಎರಡು ದಿನಗಳ ಹಿಂದಷ್ಟೆ 40ಡಿಗ್ರಿ ಸೆಲ್ಸಿಯಸ್ ನಷ್ಟಿದ್ದ ಕಲಬುರಗಿ ಜಿಲ್ಲೆಯ ಗರಿಷ್ಠ ತಾಪಮಾನ ಗುರುವಾರ ಈ ವರ್ಷದ ದಾಖಲೆಯ 42.3 ಡಿಗ್ರಿಗೆ ಏರಿಕೆಯಾಗಿದೆ.

Rain in south, maximum temperature records in north

ಮಾರ್ಚ್ ತಿಂಗಳಲ್ಲಿ ಕಲಬುರಗಿ ತಾಪಮಾನ ಹಿಂದೆಂದೂ 40ಡಿಗ್ರಿ ದಾಟಿರಲಿಲ್ಲ. ಆದರೆ ಈ ಬಾರಿ ಮಾರ್ಚ್ ತಿಂಗಳು ಮುಗಿಯುವರೊಳಗೆ ತಾಪಮಾನ 42.3 ಡಿಗ್ರಿ ಸೆಲ್ಸಿಯಸ್ ತಲುಪಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲದೆ ಕೊಪ್ಪಳ, ವಿಜಯಪುರ, ಯಾದಗಿರಿ, ದಾವಣಗೆರೆ, ಬಾಗಲಕೋಟೆ ಜಿಲ್ಲೆಗಳ ಗರಿಷ್ಠ ತಾಪಮಾನ 40 ಡಿಗ್ರಿ.ಸೆ.ಗೆ ಸಮೀಪಕ್ಕೆ ಏರಿದ್ದು ಏಪ್ರಿಲ್ ಮೊದಲ ವಾರದಲ್ಲಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳ ತಾಪಮಾನ 40ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಬಾರಿ ದೇಶದಲ್ಲಿ ಸಾಮಾನ್ಯ ಮಾನ್ಸೂನ್ ಮುನ್ಸೂಚನೆಈ ಬಾರಿ ದೇಶದಲ್ಲಿ ಸಾಮಾನ್ಯ ಮಾನ್ಸೂನ್ ಮುನ್ಸೂಚನೆ

English summary
Indian meteorological department has said rain fall in south and interior Karnataka will continue till April.1. Meanwhile in north Karnataka maximum level of temperature has reached 42.3 degree celsius on Thursday which is the ever highest temperature in the month of March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X