ಇನ್ನೂ ಒಂದು ವಾರಗಳ ಕಾಲ ಬೆಂಗಳೂರಲ್ಲಿ ಮಳೆ

Posted By: Gururaj
Subscribe to Oneindia Kannada

ಬೆಂಗಳೂರು, ಆಗಸ್ಟ್. 27 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನೊಂದು ವಾರಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು: ಮೋಡ ಬಿತ್ತನೆಗೆ ಇಂದಿನಿಂದ ವಿಧ್ಯುಕ್ತ ಚಾಲನೆ

ಭಾನುವಾರ ಮುಂಜಾನೆಯಿಂದಲೇ ಬೆಂಗಳೂರು ನಗರದಲ್ಲಿ ಮಳೆ ಸುರಿಯುತ್ತಿದೆ. ನಗರ ಸಂಪೂರ್ಣವಾಗಿ ಮೋಡದಲ್ಲಿ ಮುಚ್ಚಿ ಹೋಗಿದ್ದು ಕೆಲವು ಬಡಾವಣೆಗಳಲ್ಲಿ ಆಗಾಗ ಮಳೆ ಸುರಿಯುತ್ತಿದೆ.

ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆ ಆರಂಭ

Rain continues for one week, Heavy rain in Bengaluru

ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ಮುಂಗಾರು ಚುರುಕುಗೊಂಡಿದೆ. ಆದ್ದರಿಂದ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಒಂದು ವಾರಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ದಾಖಲೆಯ ಮಳೆ : ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಇಲ್ಲಿಯ ತನಕ ನಗರದಲ್ಲಿ 345.5 ಮಿ.ಮೀ ಮಳೆಗಾಗಿದೆ. ಇನ್ನು 42 ಮಿ.ಮೀ. ಮಳೆ ಸುರಿದರೆ ದಾಖಲೆಯ ಮಳೆಯಾಗಲಿದೆ.

1998ರ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ 378.1 ಮಿ.ಮೀ. ಮಳೆಯಾಗಿತ್ತು. 2008ರ ಆಗಸ್ಟ್‌ನಲ್ಲಿ 309.8 ಮಿ.ಮೀ.ಮಳೆಯಾಗಿತ್ತು. ನಗರದಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕಡಿಮೆ ಮಳೆಯಾಗಿತ್ತು. ಆದರೆ, ಕಳೆದ ಹತ್ತು ದಿನದಲ್ಲಿ ನಗರದಲ್ಲಿ ದಾಖಲೆಯ ಮಳೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Heavy rains lashed several parts of Bengaluru on Sunday, August 27, 2017. Meteorological department said, rain will continues for one week.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ