ರೈಲ್ವೆ ಕುರಿತ ದೂರಿಗೆ 'ಮದದ್' ಆ್ಯಪ್‌: ಶೀಘ್ರದಲ್ಲೇ ಬಿಡುಗಡೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ರೈಲ್ವೆ ಸಮಸ್ಯೆಗಳಿಗೆ ಟ್ವಿಟ್ಟರ್, ಫೇಸ್ ಬುಕ್, ಹೆಲ್ಪ್ ಲೈನ್, ಕಂಪ್ಲೇಂಟ್ ರಿಜಿಸ್ಟ್ರಿ ಸೇರಿ 14 ಮಾಧ್ಯಮಗಳ ಮೂಲಕ ರೈಲ್ವೆ ದೂರು ದಾಖಲಿಸುವ ವ್ಯವಸ್ಥೆ ಇನ್ನು ಹಳೆಯದಾಗಲಿದೆ.

ಚಲಿಸುವ ರೈಲಿಂದ ಟಿಕೆಟ್ ಕಲೆಕ್ಟರ್‌ನ್ನು ತಳ್ಳಿದ ಪ್ರಯಾಣಿಕರು

ಮದದ್ ಎಂಬ ಅಪ್ಲಿಕೇಷನ್ ಒಂದನ್ನು ರೈಲ್ವೆ ಸಚಿವಾಲಯ ಸಿದ್ಧಪಡಿಸುತ್ತಿದ್ದು, ಏಪ್ರಿಲ್ ಅಂತ್ಯದೊಳಗೆ ಪ್ರಯಾಣಿಕರಿಗೆ ಪರಿಚಯಿಸಲಿದೆ. ಕಳಪೆ ಆಹಾರ, ಗಲೀಜಾಗಿರುವ ಶೌಚಾಲಯ ಬಗ್ಗೆ ದೂರುಗಳನ್ನು ಈ ಅಪ್ಲಿಕೇಷನ್ ಮೂಲಕವೇ ದಾಖಲಿಸಬಹುದಾಗಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಅಷ್ಟೇ ಅಲ್ಲ, ತುರ್ತು ಸಂದರ್ಭಗಳಲ್ಲಿ ತುರ್ತು ಸೇವೆಗಳನ್ನು ಈ ಅಪ್ಲಿಕೇಷನ್ ಮೂಲಕವೇ ಅಪೇಕ್ಷಿಸಬಹುದಾಗಿದೆ. ಪ್ರಾಸ್ತಾವಿತ ಅಪ್ಲಿಕೇಷನ್ ರೈಲ್ವೆಯಲ್ಲಿರುವ ಎಲ್ಲ ದೂರು, ದುಮ್ಮಾನ ವಿಭಾಗಗಳಿಗೂ ಜೋಡಿಸಲಾಗುತ್ತದೆ.

Railways will launch one stop app Madad for users

ದೂರು ದಾಖಲಿಸುವುದು ಹೇಗೆ? : ಅಪ್ಲಿಕೇಷನ್ ಮೂಲಕ ದೂರು ದಾಖಲಿಸಲು ಪ್ರಯಾಣಿಕರು ಮಾಡಬೇಕಾದ್ದು ಇಷ್ಟ ತಮ್ಮ ಟಿಕೆಟ್ ನಲ್ಲಿ ನಮೂದಿಸಲಾಗಿರುವ ಪಿಎನ್ ಆರ್ ಸಂಖ್ಯೆ ನಮೂದಿಸಿ ದೂರಿನ ಅಥವಾ ಸಮಸ್ಯೆಯ ವಿವರವನ್ನು ದಾಖಲಿಸಬೇಕು. ಅದಾಗಿ, ಪ್ರಯಾಣಿಕರಿಗೆ ದೂರಿನ ಗುರುತು ಸಂಖ್ಯೆ ಮತ್ತು ದಾಖಲಾದ ಸಮಯದ ವಿವಿರ ಎಸ್ ಎಂಎಸ್ ಮೂಲಕ ಸಿಗುತ್ತದೆ.

ದೂರು ವಿಲೇವಾರಿ ಹೇಗೆ? ಅಪ್ಲಿಕೇಷನ್ ಮೂಲಕ ದಾಖಲಾಗುವ ದೂರುಗಳು ನೇರವಾಗಿ ಸಂಬಂಧ ಪಟ್ಟ ವಿಭಾಗಗಳ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಅವರು ಕೂಡಲೇ ಸಮಸ್ಯೆಗೆ ಸ್ಪಂದಿಸುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian railways has decided to launch an app which will give passengers for all the services, solution for grievances etc. The app Mobile Application for Desired Assistance During Travel (MADAD) will be launched by end of this month.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ