ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

6 ಬೋಗಿ ಮೆಟ್ರೋ ರೈಲಿಗೆ ಸುರಕ್ಷತಾ ಕಮಿಷನರ್‌ ಅನುಮತಿ ಇನ್ನೂ ಸಿಕ್ಕಿಲ್ಲ

By Nayana
|
Google Oneindia Kannada News

ಬೆಂಗಳೂರು, ಮೇ 18: ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಆರು ಬೋಗಿ ರೈಲಿನ ಪರೀಕ್ಷಾರ್ಥ ಸಂಚಾರ ಆರಂಭಗೊಂಡಿದೆ. ಆದರೆ ಈ ಸೇವೆಗೆ ಇನ್ನು ಸುರಕ್ಷತಾ ಆಯುಕ್ತರಿಂದ ಪರಿಶೀಲನೆಯೇ ನಡೆದಿಲ್ಲ.

ಆರು ಬೋಗಿ ರೈಲಿನ ಪರೀಕ್ಷಾರ್ಥ ಸಂಚಾರ ಶುರುವಾಗಿ ಒಂದು ತಿಂಗಳಾಗುತ್ತಾ ಬಂದರೂ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ ನಡೆದಿಲ್ಲ. ನಿಯಮ ಪ್ರಕಾರ ಬಿಎಂಆರ್‌ಸಿಎಲ್‌ ಸುರಕ್ಷತಾ ಆಯುಕ್ತರಿಗೆ ಪತ್ರ ಬರೆದು ಪರಿಶೀಲನೆ ನಡೆಸಲು ಕೋರಬೇಕು.

ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಬಳಕೆದಾರರ ಪ್ರಮಾಣ ಶೇ.59ರಷ್ಟು ಹೆಚ್ಚಳ!ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಬಳಕೆದಾರರ ಪ್ರಮಾಣ ಶೇ.59ರಷ್ಟು ಹೆಚ್ಚಳ!

ನಿಗಮವು ಇನ್ನೂ ಈ ಪ್ರಕ್ರಿಯೆಯನ್ನೇ ನಡೆಸಿಲ್ಲ. ಮೇ ಅಂತ್ಯದಲ್ಲಿ ಅಥವಾ ಜೂನ್‌ನಲ್ಲಿ ಆರು ಬೋಗಿ ರೈಲನ್ನು ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಆದರೆ ಇನ್ನೂ ಸುರಕ್ಷತಾ ಆಯುಕ್ತರ ಪರಿಶೀಲನೆ ನಡೆದಿಲ್ಲವಾದ್ದರಿಂದ ವಾಣಿಜ್ಯ ಸಂಚಾರದ ದಿನಾಂಕದ ಬಗ್ಗೆ ಖಾತರಿ ಇಲ್ಲ. ಮೊದಲಿಗೆ ಡಿಪೊದಲ್ಲಿನ ಹಳಿಯಲ್ಲಿ ರೈಲಿನ ಸಂಚಾರ ಪರೀಕ್ಷೆ ನಡೆದಿತ್ತು.

Railways safety commissionaire yet to certify for six coach metro

ಮೆಟ್ರೋದಲ್ಲಿ ಸೊಳ್ಳೆಕಾಟ: ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲಲ್ಇ ಸಂಚರಿಸುವ ಮೆಟ್ರೋದಲ್ಲಿ ಸೊಳ್ಳೆ ಕಾಟ ಆರಂಭವಾಗಿದೆ. ಪ್ರತಿ ದಿನ ಸಂಜೆ ಸೊಳ್ಳೆಯಿಂದ ಕಚ್ಚಿಸಿಕೊಳ್ಳುತ್ತಿರುವ ಪ್ರಯಾಣಿಕರು ಈ ಕುರಿತು ನಿಗಮದ ಸಿಬ್ಬಂದಿಗೆ ದೂರು ನೀಡುತ್ತಿದ್ದಾರೆ. ಆದರೆ ಈ ಕುರಿತು ಕ್ರಮ ಕೈಗೊಳ್ಳಲು ನಿಗಮಕ್ಕೆ ಸಾಧ್ಯವಾಗುತ್ತಿಲ್ಲ.

ಸೊಳ್ಳೆ ನಿಯಂತ್ರಣ ಔಷಧವನ್ನು ಬೋಗಿಯ ಒಳಗೆ ಸಿಂಪಡಿಸಿದರೆ ದುರ್ವಾಸನೆ ಬರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ಬೋಗಗಿಯ ಒಳಗಿನ ಭಾಗವನ್ನು ಸ್ವಚ್ಛವಾಗಿಡುವ ಮೂಲಕ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೂ ಸೊಳ್ಳೆ ಕಾಟ ಇನ್ನೂ ಕಡಿಮೆಯಾಗಿಲ್ಲ.

English summary
Earlier it was expected that Namma Metro will provide six coaches service from June of this year. But it seems to be more delay in addition of two coaches to metro would be more delay as railway safety commissionaire yet to certify the service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X