ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ಶುಲ್ಕಗಳು ಹೆಚ್ಚಳ

Posted By:
Subscribe to Oneindia Kannada

ಬೆಂಗಳೂರು, ಮೇ 10 : ರೈಲು ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಮಾಡಲು ಹೆಚ್ಚಿನ ಹಣ ಪಾವತಿ ಮಾಡಬೇಕು. ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿನ ಎಲ್ಲಾ ರೈಲು ನಿಲ್ದಾಣಗಳಲ್ಲಿ ವಾಹನ ನಿಲುಗಡೆ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

ಬೆಂಗಳೂರು ನಗರ, ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ವೈಟ್‌ಫೀಲ್ಡ್, ಯಶವಂತಪುರ, ಹೆಬ್ಬಾಳ, ಕೆ.ಆರ್.ಪುರ, ಕೆಂಗೇರಿ ನಗರ ರೈಲು ನಿಲ್ದಾಣಗಳಲ್ಲಿ ವಾಹನ ಪಾರ್ಕಿಂಗ್ ಶುಲ್ಕ ಹೆಚ್ಚಳವಾಗಿದೆ. ಏ.21ರಿಂದಲೇ ನೂತನ ದರ ಜಾರಿಗೆ ಬಂದಿದೆ. ಆದರೆ, ದರ ಹೆಚ್ಚಳವಾದ ಕುರಿತು ಯಾವುದೇ ಮಾಹಿತಿಯನ್ನು ಜನರಿಗೆ ನೀಡಿಲ್ಲ. [ಬೆಂಗಳೂರು : ಪ್ರೀಪೇಯ್ಡ್ ಟ್ಯಾಕ್ಸಿ ದರಗಳು ಹೆಚ್ಚಳ]

bengaluru

ಹಿಂದೆ ಮೊದಲ 2 ಗಂಟೆಗೆ ಸೈಕಲ್‌ ನಿಲ್ಲಿಸಲು 2 ರೂ., ದ್ವಿಚಕ್ರ ವಾಹನಕ್ಕೆ 5 ರೂ. ಶುಲ್ಕ ಪಾವತಿ ಮಾಡಬೇಕಿತ್ತು. ಈಗ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದ್ದು, ಸೈಕಲ್‌ ನಿಲ್ಲಿಸಲು 5 ರೂ., ದ್ವಿಚಕ್ರ ವಾಹನಕ್ಕೆ 10 ರೂ. ಪಾವತಿಸಬೇಕಾಗಿದೆ. [ಬೆಂಗಳೂರಿನಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ : ಎಲ್ಲಿ, ಏನು?]

ನೂತನ ದರ ಪಟ್ಟಿ

0-2 ಗಂಟೆ - ಸೈಕಲ್ 5 ರೂ, ದ್ವಿಚಕ್ರ ವಾಹನ 10 ರೂ.
2-4 ಗಂಟೆ - ಸೈಕಲ್ 10 ರೂ, ದ್ವಿಚಕ್ರ ವಾಹನ 20 ರೂ.
4-10 ಗಂಟೆ - ಸೈಕಲ್ 15 ರೂ.,ದ್ವಿಚಕ್ರ ವಾಹನ 30 ರೂ.
10-16 ಗಂಟೆ - ಸೈಕಲ್ 20 ರೂ., ದ್ವಿಚಕ್ರ ವಾಹನ 40 ರೂ.
16-24 ಗಂಟೆ - ಸೈಕಲ್ 25 ರೂ., ದ್ವಿಚಕ್ರ ವಾಹನ 50 ರೂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
South Western railway hiked the parking fee in Bengaluru city, Cantonment and other city railway stations.
Please Wait while comments are loading...