ಎರಡನೇ ಹಂತದ ಮೆಟ್ರೋ ಮಾರ್ಗ: ಹಳಿ ಅಳವಡಿಸಲು ಭರದ ಸಿದ್ಧತೆ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 23 : ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಚುರುಕಾಗಿದೆ. ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯಲ್ಲಿ ಎತ್ತರಿಸಿದ ಮಾರ್ಗ ಹಾಗೂ ನಿಲ್ದಾಣ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿರುವಾಗಲೇ 455 ಕೋಟಿ ರೂ. ವೆಚ್ಚದಲ್ಲಿ 72 ಕಿ.ಮೀ ಉದ್ದದ ಹಳಿ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜನವರಿಯಲ್ಲಿ ಆರು ಬೋಗಿ ಮೆಟ್ರೋ ರೈಲು ಪ್ರಾಯೋಗಿಕ ಆರಂಭ

ಎರಡನೇ ಹಂತದ ಯೋಜನೆಯಲ್ಲಿ ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್ ಶಿಪ್ ವರೆಗೆ ಹಾಗೂ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ಎತ್ತರಿಸದ ಮಾರ್ಗ ನಿರ್ಮಿಸುವ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದರ ಜತೆಗೆ ಬೈಯ್ಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್, ಹೆಸರಘಟ್ಟದಿಂದ ಬಿಐಇಸಿವರೆಗೆ , ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಹಾಗೂ ಗೊಟ್ಟಿಗೆರೆಯಿಂದ ನಾಗವಾರದವರೆಗಿನ ಮಾರ್ಗ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ.

Rail alignment prepared for phase-2

ಇದರಲ್ಲಿ ಯಲಚೇನಹಳ್ಳಿ-ಅಂಜನಾಪುರ, ಟೌನ್ ಶಿಪ್ ಎತ್ತರಿಸಿದ ಮಾರ್ಗದಲ್ಲಿ 2018 ರ ಅಂತ್ಯದಲ್ಲಿ ವಾಣಿಜ್ಯ ಸಂಚಾರ ಆರಂಭಿಸುವ ಗುರಿ ಇದೆ. ಈ ಎಲ್ಲ ಮಾರ್ಗಗಳಲ್ಲಿ ಹಳಿ ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಮೆಟ್ರೋದ ಎತ್ತರಿಸಿದ ಮಾರ್ಗ ಹಾಗೂ ಸುರಂಗ ಮಾರ್ಗಕ್ಕೆ ಈ ಹಳಿ ಬಳಕೆಯಾಗಲಿದೆ.

ಒಟ್ಟು 72 ಕಿ.ಮೀ ಉದ್ದದ ಹಳಿ ರೈಲ್ವೆ ಇಲಾಖೆಯ ಮಾರ್ಗಸೂಚಿಗೆ ತಕ್ಕಂತೆ ತಯಾರಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮೆಟ್ರೋದಲ್ಲಿ ಎರಡು ಜತೆ ಹಳಿಗಳನ್ನು ಅಳವಡಿಸಲಾಗುತ್ತಿದೆ. ಒಂದು ರೈಲಿನಿಂದ ಮತ್ತೊಂದು ರೈಲಿಗೆ4 ರಿಂದ5 ಅಡಿಅಂತರವಿರುವಂತೆ ಈ ಹಳಿಗಳನ್ನು ಅಳವಡಿಸಲಾಗುತ್ತದೆ.

ಬೆಂಗಳೂರು ಏರ್ ಪೋರ್ಟ್ ಗೆ ಮೆಟ್ರೋ: ಸಚಿವ ಸಂಪುಟ ಅಸ್ತು

ಜತೆಗೆ ಹಳಿಯ ಸುತ್ತ ಕಾಂಕ್ರಿಟ್ ಹಾಕಿ ಗಟ್ಟಿಗೊಳಿಸಲಾಗುತ್ತದೆ. ಮೆಟ್ರೋದ ನಿಲ್ದಾಣ ಹಾಗೂ ಮಾರ್ಗ ಹೊರತುಪಡಿಸಿದರೆ , ಅತ್ಯಧಿಕ ಕಾಂಕ್ರಿಟ್ ಈ ಹಳಿ ಸುತ್ತ ಹಾಕಲು ಬಳಕೆಯಾಗುತ್ತದೆ. ರೈಲು ಚಲಿಸುವಾಗ ಉಂಟಾಗುವ ಕಂಪನದ ಪ್ರಮಾಣವನ್ನು ಕಾಕ್ರಿಟ್ ತಗ್ಗಿಸುತ್ತದೆ.

ಉಚಿತ ಜಾಗ: ಹಳಿ ನಿರ್ಮಿಸುವ ಗುತ್ತಿಗೆದಾರರಿಗೆ ಬಿಎಂಆರ್ ಸಿಎಲ್ ಉಚಿತವಾಗಿ ಜಾಗ ನೀಡಲಿದೆ. ಪೀಣ್ಯದಲ್ಲಿ 21,500 ಚದರ ಮೀಟರ್ ಜಾಗವನ್ನು ನಿಗಮ ಹೊಂದಿದ್ದು, ಇದನ್ನು ಹಳಿ ತಯಾರಿಸುವ ಘಟಕಕ್ಕಾಗಿ ಬಿಟ್ಟುಕೊಡಲಾಗುತ್ತದೆ. ಇಲ್ಲಿ ಹಳಿಗಳನ್ನು ತಯಾರಿಸಿ ಮಾರ್ಗದ ಮೇಲೆ ಕೊಂಡೊಯ್ದು ಅಳವಡಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Preparations have been completed for the 72km rail alignment with the cost of Rs.455 crores in secon phase of Namma metro by BMRCL

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ