ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರ ಬಂಧನ, ಯುವತಿ ರಕ್ಷಣೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 29 : ವಯಸ್ಸಿಗೆ ಬಂದ ಹುಡುಗಿಯರನ್ನು ಇಟ್ಟುಕೊಂಡು ವಿಟರನ್ನು ಸೆಳೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಕೇಂದ್ರ ಅಪರಾಧಿ ವಿಭಾಗ(ಸಿಸಿಬಿ)ದ ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರಹಳ್ಳಿ ಹೋಬಳಿ ಇಟ್ಮಡು ನಿವಾಸಿ ಯಶೋದಮ್ಮ ಅಲಿಯಾಸ್ ಶೋಭಾ (40) ಮತ್ತು ಅದೇ ಗ್ರಾಮದ ನಿವಾಸಿ ನರೇಶ (31) ಬಂಧಿತರಾಗಿರುವ ಮಾಂಸದ ಅಡ್ಡೆಯ ಮಾಲಿಕರು. ಬೆಂಗಳೂರಿನ ಪೊಲೀಸರು ನಡೆಸಿರುವ ದಾಳಿಯಲ್ಲಿ ಆಂಧ್ರಪ್ರದೇಶದ ಮೂಲಕ ಯುವತಿಯನ್ನು ರಕ್ಷಿಸಿದ್ದಾರೆ. [ಆಕೆ ಅಪ್ರತಿಮ ಸುಂದರಿ: ಆದರೆ ವೇಶ್ಯೆಯರ ಊರಿನವಳು!]

ಸುಬ್ರಮಣ್ಯಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ಅರೇಹಳ್ಳಿ ಗ್ರಾಮದ ಎಜಿಎಸ್ ಲೇಔಟ್ ನಲ್ಲಿನ ಮನೆಯೊಂದರಲ್ಲಿ ಹುಡುಗಿಯರನ್ನು ಇಟ್ಟುಕೊಂಡು ಇವರಿಬ್ಬರು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಆರೋಪಿಗಳಿಂದ ಒಂದು ಸ್ಯಾಮ್‌ಸಾಂಗ್ ಮೊಬೈಲ್ ಫೋನ್ ಹಾಗೂ 48 ಕಾಂಡೋಮ್ಸ್, ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. [ಹೆಣ್ಣಿನ ಆಶೆಗೆ ಬಿದ್ದವರನ್ನು ಏನು ಮಾಡ್ತಿದ್ದರು ಗೊತ್ತಾ?]

Raid on prostitution adda in Bengaluru, two arrested, girl rescued

ತನ್ನ ಮನೆಯಲ್ಲಿ ಅಪ್ರಾಪ್ತ ಮತ್ತು ಪ್ರಾಪ್ತ ಹುಡುಗಿಯರನ್ನು ಮಾನವ ಸಾಗಣೆ ಮಾಡಿಕೊಂಡು ಬಂದು, ಹೆಚ್ಚಿನ ಹಣದ ಅಮಿಷ ತೋರಿಸಿ ಗಿರಾಕಿಗಳನ್ನು ಮನೆಗೆ ಬರಮಾಡಿಕೊಳ್ಳುತ್ತಿದ್ದೆವು. ವೇಶ್ಯಾವಾಟಿಕೆಯಲ್ಲಿ ತೊಡಗಿದರೆ ಒಳ್ಳೆಯ ಹಣ ಸಂಪಾದನೆ ಮಾಡಬಹುದೆಂದು ಪುಸಲಾಯಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೆವು ಎಂದು ವಿಚಾರಣೆ ವೇಳೆ ಯಶೋದಮ್ಮ ತಪ್ಪೊಪ್ಪಿಕೊಂಡಿದ್ದಾಳೆ.

ದ್ವಿ-ಚಕ್ರವಾಹನ ಕಳ್ಳನ ಬಂಧನ

ಮನೆಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕದ್ದಿದ್ದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಇನ್ನೂ 6 ವಾಹನ ಕಳ್ಳತನದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

Thief arrested

ಆರ್.ಟಿ.ನಗರ ಪೊಲೀಸ್‌ಠಾಣಾ ವ್ಯಾಪ್ತಿಯ 2ನೇ ಬ್ಲಾಕ್, 15ನೇ ಕ್ರಾಸ್, ಪಟೇಲ್‌ಇನ್ ರೆಸ್ಟೋರೆಂಟ್ ಮುಂಭಾಗ ನಿಲ್ಲಿಸಿದ್ದ ತಮ್ಮ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ವ್ಯಕ್ತಿಯೊಬ್ಬರು ದೂರಿದ್ದರು.

ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಸೈಯ್ಯದ್ ಮೊಹಮದ್ ಶಾದಾಭ್ (28) ಎಂಬಾತನನ್ನು ಬಂಧಿಸಿ, ಆತನಿಂದ ಸುಮಾರು 2,90,000 ರು. ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. [ಹೆಸರಿಗೆ ಇದು ಮಸಾಜ್ ಪಾರ್ಲರ್, ಒಳಗೆ ವೇಶ್ಯಾವಾಟಿಕೆ!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two people have been arrested by CCB police in Bangaluru in connection with prostitution racket and a girl from Andhra Pradesh has been rescued. In another case a two wheeler thief has been arrested and motor bikes worth Rs 2.9 lakh confiscated.
Please Wait while comments are loading...