ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಎಎಲ್ ಅಂಗಳದಲ್ಲಿ ರಫೇಲ್ ಚರ್ಚೆ: ಅ.13ರಂದು ರಾಹುಲ್ ಭೇಟಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 9: ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿರುವ ರಫೇಲ್ ಡೀಲ್ ಒಪ್ಪಂದಕ್ಕೆ ಮೂಲ ಕಾರಣವಾದ ಎಚ್‌ಎಎಲ್ ರದ್ದತಿ ಕುರಿತ ಸಂವಾದವನ್ನು ಎಚ್‌ಎಎಲ್ ಅಂಗಳದಲ್ಲೇ ನಡೆಸಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ.

ಅಕ್ಟೋಬರ್ 13ರಂದು ಬೆಂಗಳೂರಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಆವರಣದಲ್ಲಿ ಅಲ್ಲಿನ ನೌಕರರ ಜತೆ ರಫೇಲ್ ಒಪ್ಪಂದ ಕುರಿತಂತೆ ರಾಹುಲ್ ಚರ್ಚೆ ನಡೆಸಲಿದ್ದಾರೆ.

ಫ್ರೆಂಚ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದು ಸತ್ಯ ಎಂದು ಒಪ್ಪಿಕೊಂಡ ರಿಲಯನ್ಸ್ ಫ್ರೆಂಚ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದು ಸತ್ಯ ಎಂದು ಒಪ್ಪಿಕೊಂಡ ರಿಲಯನ್ಸ್

60 ಸಾವಿರ ಕೋಟಿ ರೂಪಾಯಿಗಳ ಮೊತ್ತದ ರಫೇಲ್ ಒಪ್ಪಂದವನ್ನು ಎಚ್‌ಎಎಲ್ ಒಡಂಬಡಿಕೆ ರದ್ದುಪಡಿಸಿ ಫ್ರ್ಯಾನ್ಸ್ ಕಂಪನಿಗೆ ಕೊಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

Rahul Gandhi to discuss Rafael deal at HAL premises

ಮೋದಿಯದ್ದು 'ಸ್ಕಿಲ್ ಇಂಡಿಯಾ' ಅಲ್ಲ 'ಕಿಲ್ ಇಂಡಿಯಾ': ರಾಹುಲ್ ಕುಟುಕು ಮೋದಿಯದ್ದು 'ಸ್ಕಿಲ್ ಇಂಡಿಯಾ' ಅಲ್ಲ 'ಕಿಲ್ ಇಂಡಿಯಾ': ರಾಹುಲ್ ಕುಟುಕು

ಅಷ್ಟೇ ಅಲ್ಲದೆ ರಫೇಲ್ ಒಪ್ಪಂದದಲ್ಲಿ ಭಾರತದ ಕಂಪನಿಗಳು ಕೇಂದ್ರ ಸರ್ಕಾರ ಹಗರಣದಲ್ಲಿ ಶಾಮೀಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಈಗಾಗಲೇ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ರಫೇಲ್ ಒಪ್ಪಂದ ಕುರಿತಂತೆ ಜನಾಂದೋಲನವನ್ನೇ ಆರಂಭಿಸಿದ್ದು ಲೋಕಸಭಾ ಚುನಾವಣೆ ವೇಳೆಗೆ ಭಾರಿ ಚರ್ಚೆ ವಿಷಯವಾಗಿ ಮಾರ್ಪಾಟಾಗುವ ನಿರೀಕ್ಷೆ ಇದೆ.

ರಫೇಲ್ ಡೀಲ್: ಮೋದಿ ಬೆಂಬಲಕ್ಕೆ ನಿಂತ ಫ್ರೆಂಚ್ ಅಧ್ಯಕ್ಷ ರಫೇಲ್ ಡೀಲ್: ಮೋದಿ ಬೆಂಬಲಕ್ಕೆ ನಿಂತ ಫ್ರೆಂಚ್ ಅಧ್ಯಕ್ಷ

ಈ ಮಧ್ಯೆ ಬೆಂಗಳೂರಿನ ಎಚ್‌ಎಎಲ್ ಆವರಣದಲ್ಲೇ ರಫೇಲ್ ಡೀಲ್ ಒಪ್ಪಂದ ಕುರಿತಂತೆ ಸಂವಾದ ಏರ್ಪಡಿಸುವ ಮೂಲಕ ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಲು ಮುಂದಾಗಿದೆ.
ರಾಹುಲ್ ಬೆಂಗಳೂರು ಭೇಟಿ ವೇಳೆ ಹಳೆಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಲಿದ್ದು, ಮುಂಬರುವ ವಿಧಾನಸಭೆ, ಲೋಕಸಭೆ ಉಪ ಚುನಾವಣೆ ಕುರಿತಂತೆಯೂ ಮಾತುಕತೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

English summary
AICC chief Rahul Gandhi will discuss on Rafael deal at HAL premises with its employees on October 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X