ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹನುಮ ಜಯಂತಿ ಜತೆ ರಾಗಿಗುಡ್ಡ ದೇಗುಲದ ಸುವರ್ಣ ಸಂಭ್ರಮ

By ಪ್ರಣವ
|
Google Oneindia Kannada News

Recommended Video

Ragigudda Anjaneya Temple, Bengaluru :ರಾಗಿಗುಡ್ಡ ದೇವಸ್ಥಾನದ ಡಾಕ್ಯುಮೆಂಟರಿ ವಿಡಿಯೋ | Oneindia Kannada

ಬೆಂಗಳೂರು ದಕ್ಷಿಣದ ಪ್ರಮುಖ ಹೆಗ್ಗುರುತಾದ ಜಯನಗರ 9ನೇ ಬಡಾವಣೆಯ ರಾಗಿಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ 50ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮದ ಸಂಭ್ರಮ.

5 ದಶಕಗಳ ಹಿಂದೆ ಗುಡ್ಡದ ಮೇಲೆ ಪ್ರಸನ್ನ ಆಂಜನೇಯ ಸ್ವಾಮಿಯನ್ನು ಸ್ಥಾಪಿಸಿ ಧಾರ್ಮಿಕ ಜಾಗೃತಿಗೆ ಕಾರಣವಾದ ಈ ದೇಗುಲ ಅಂದಿನಿಂದ ಅನೇಕ ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳ ಚಟುವಟಿಕೆಯ ಕೇಂದ್ರಸ್ಥಾನವಾಗಿ ನಡೆದು ಬರುತ್ತಿದೆ.

ರಾಗೀಗುಡ್ಡದ ಹನುಮ ಜಯಂತಿ ಉತ್ಸವಕ್ಕೆ ಅದ್ದೂರಿ ಚಾಲನೆ ರಾಗೀಗುಡ್ಡದ ಹನುಮ ಜಯಂತಿ ಉತ್ಸವಕ್ಕೆ ಅದ್ದೂರಿ ಚಾಲನೆ

ದೇವಾಲಯದ ಪ್ರವೇಶ ದ್ವಾರದಲ್ಲಿ ಪಾದರಕ್ಷೆ ವಿಭಾಗದಿಂದ ಪ್ರಸಾದದ ವಿಭಾಗದ ವರೆಗೆ ಮಾದರಿ ಎನಿಸುವ ಸ್ವಯಂ ಸೇವಕರ ತಂಡ ಕಾರ್ಯನಿರ್ವಹಿಸುತ್ತದೆ.

ಕೆಲ ಹಂತಸ್ತಿನಲ್ಲಿ ಮಹಾಗಣಪತಿ, ರಾಜರಾಜೇಶ್ವರಿ ಮತ್ತು ನವಗ್ರಹ ಗುಡಿಗಳಿದ್ದರೆ, ಮೆಟ್ಟಿಲೇರಿ ಗುಡ್ಡದ ಮೇಲೆ ನೆಲೆ ನಿಂತ ಆಂಜನೇಯನೊಡನೆ ದಕ್ಷಿಣೇಶ್ವರ ಸ್ವಾಮಿ ಮತ್ತು ಶ್ರೀ ರಾಮಪರಿವಾರವನ್ನು ಕಣ್ತುಂಬಿ ಕೊಳ್ಳಬಹುದು.

ರಾಗೀಗುಡ್ಡದ ಆಂಜನೇಯ ಸ್ವಾಮಿಗೆ ಸುವರ್ಣ ಮಹೋತ್ಸವದ ಸಂಭ್ರಮ ರಾಗೀಗುಡ್ಡದ ಆಂಜನೇಯ ಸ್ವಾಮಿಗೆ ಸುವರ್ಣ ಮಹೋತ್ಸವದ ಸಂಭ್ರಮ

ಡಿ. 12ರಿಂದ 30ರ ವರೆಗೆ ಹನುಮ ಜಯಂತಿಯ ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತದೆ.

* ಡಿ. 12ರ ಸಂಜೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರಿಂದ ಕಾರ್ಯಕ್ರಮಕ್ಕೆ ಚಾಲನೆ, ವೇದ ವಿದ್ವಾಂಸರಿಗೆ ಸನ್ಮಾನ, ಅನೇಕ ವಿಧದ ಹೋಮಗಳು ಮತ್ತು ಅಲಂಕಾರಗಳು ನಡೆಯಿತು.

ಪ್ರತಿನಿತ್ಯ ಒಂದಲ್ಲ ಒಂದು ಗಾನ-ಜ್ಞಾನ-ಯಜ್ಞ

ಪ್ರತಿನಿತ್ಯ ಒಂದಲ್ಲ ಒಂದು ಗಾನ-ಜ್ಞಾನ-ಯಜ್ಞ

ದೇವಾಲಯದ ಆವರಣದಲ್ಲಿ 32 ಅಡಿ ಎತ್ತರದ ತ್ರಿಮೂರ್ತಿಗಳ ವಿಗ್ರಹ ನೋಡುಗರ ಮನಸೂರೆಗೊಳ್ಳುತ್ತದೆ. ಪ್ರತಿನಿತ್ಯ ಒಂದಲ್ಲ ಒಂದು ಗಾನ-ಜ್ಞಾನ-ಯಜ್ಞ ನಡೆಯುವ ಕುಚಲಾಂಬ ಮಂಟಪ, ಮಾರುತಿ ಕುಟೀರವಿದೆ.

ದೇವಾಲಯದ ವತಿಯಿಂದ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು ನರ್ಸರಿಯಿಂದ 10ನೇ ತರಗತಿಯ ವರೆಗೆ 1350 ಬಡ ಮಕ್ಕಳಿಗೆ ವಿದ್ಯಾ ದಾನವನ್ನು ಮಾಡುತ್ತಿದೆ.

ಪ್ರತಿ ಶನಿವಾರ ಅನ್ನಪೂರ್ಣೇಶ್ವರಿ ಭವನದಲ್ಲಿ ಅನ್ನದಾಸೋಹ ನಡೆಯುತ್ತದೆ. ಅಂತೆಯೇ ಸಂಜೀವಿನಿ ಆರೋಗ್ಯ ತಪಾಸಣಾ ಕೇಂದ್ರ, ವಿದ್ಯಾರ್ಥಿಗಳಿಗೆ ಬುಕ್ ಬ್ಯಾಂಕ್, ಗೋಶಾಲೆ, ಧಾರ್ಮಿಕ ಪುಸ್ತಕ ಮಳಿಗೆ ನಿರ್ಮಾಣ ಮಾಡಲಾಗಿದೆ.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು

* ಡಿ. 15ರಂದು ವಿದ್ವಾನ್ ಕುಮರೇಶ್ ಮತ್ತು ವಿದೂಷಿ ಜಯಂತಿ ಕುಮರೇಶ್ ತಂಡದಿಂದ ಪಿಟೀಲು ಮತ್ತು ವೀಣೆಯ ಜೋಡಿ ವಾದನ
* ಡಿ. 16 ರಂದು ಕಂಚಿ ಕಾಮಕೋಟಿ ಆಸ್ಥಾನ ವಿದ್ವಾನ್ ಶಿವಮೊಗ್ಗ್ ಕುಮಾರಸ್ವಾಮಿ ರವರಿಂದ ಸ್ಯಾಕ್ಸೋಫೋನ್ ವಾದನ
* ಡಿ. 17ರಂದು ಪಂಡಿತ್ ಪ್ರವೀಣ್ ಗೋಡ್ಖಿಂಡಿ ರವರಿಂದ ರಾಗರರಂಜಿನಿ ವೇಣುನಾದ ಲಹರಿ
* ಡಿ. 19 ಎಂ.ಎಸ್. ಸುಬ್ಬಲಕ್ಷ್ಮಿ ರವರ ಮರಿಮಗಳು ವಿದೂಷಿ ಎಸ್. ಐಶ್ವರ್ ಮತ್ತು ವಿದೂಷಿ ಕು. ಎಸ್. ಸೌಂದರ್ಯ ರವರಿಂದ ಶಾಸ್ತ್ರೀಯ ಸಂಗೀತ

ಡಿ. 30ರಂದು ರಾಮತಾರಕ ಹೋಮ

ಡಿ. 30ರಂದು ರಾಮತಾರಕ ಹೋಮ

* ಡಿ. 21 ರಂದು ಮೈಸೂರು ರಾಮಾಚಂದ್ರಾಚಾರ್ ರವರಿಂದ ದಾಸವಾಣಿ
* ಡಿ. 23ರಿಂದ 30ರ ವರೆಗೆ ಕೃಷ್ಣ ಯರ್ಜುರ್ವೇದ ಸಂಹಿತಾ ಸ್ವಾಹಕಾರ ಯಾಗ
* ಡಿ. 30ರಂದು ರಾಮತಾರಕ ಹೋಮ ಮತ್ತು ಸಂಹಿತಾಯಾಗದ ಪೂರ್ಣಾಹುತಿ.

ಪವನಸುತ ಸ್ಮರಣ ಸಂಚಿಕೆ ಬಿಡುಗಡೆ

ಪವನಸುತ ಸ್ಮರಣ ಸಂಚಿಕೆ ಬಿಡುಗಡೆ

ಸ್ವರ್ಣ ಮಹೋತ್ಸವದ ಸವಿ ನೆನಪಿಗೆ 18 ಅಡಿ ಎತ್ತರದ ಶ್ರೀ ರಾಮತಾರಕನಾಮ ಕೋಟಿ ಲೇಖನ ಯಜ್ಞದ ಸ್ಮಾರಕ ಸ್ಥಂಭ ಸ್ಥಾಪನೆಯನ್ನು ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪವನಸುತ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದೆ. ಸಂಜೆ ಪ್ರಭಾತ್ ಕಲಾವಿದರಿಂದ ಶ್ರೀರಾಮ ಪ್ರತೀಕ್ಷ ನೃತ್ಯರೂಪಕ ನಡೆಯಲಿದೆ ಎಂದು ಭಕ್ತ ಮಂಡಲಿ ತಿಳಿಸಿದೆ.

English summary
Bengaluru: Jayanagar's pride Ragigudda temple is celebrating it Silver Jubilee now along with Hanuma Jayanti.The event will be held from December 12 to Dec 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X