ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯಕೀಯ ಪರೀಕ್ಷೆಗೆ ಆಗಮಿಸಿದ ರಾಘವೇಶ್ವರ ಶ್ರೀಗಳು

|
Google Oneindia Kannada News

ಬೆಂಗಳೂರು, ಡಿ. 5 : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳು ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶುಕ್ರವಾರ ಬೆಳಗ್ಗೆ ಹಾಜರಾಗಿದ್ದಾರೆ. ಗುರುವಾರ ಪರೀಕ್ಷೆಗೆ ಸ್ವಾಮೀಜಿಗಳು ಗೈರು ಹಾಜರಾಗಿದ್ದರು.

ಶುಕ್ರವಾರ ಬೆಳಗ್ಗೆ 8 ಗಂಟೆ ರಾಘವೇಶ್ವರ ಶ್ರೀಗಳು ಸುಮಾರು 10 ಶಿಷ್ಯರೊಂದಿಗೆ ವೈದ್ಯಕೀಯ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಆಗಮಿಸಿದರು. ಆಸ್ಪತ್ರೆಯಲ್ಲಿದ್ದ ಸಿಐಡಿ ಪೊಲೀಸರು ಅವರನ್ನು ಆವರಣದಿಂದ ಆಸ್ಪತ್ರೆಯೊಳಗೆ ಕರೆದುಕೊಂಡು ಹೋಗಿದ್ದಾರೆ. [ಪುರುಷತ್ವ ಪರೀಕ್ಷೆ ಎಂದರೇನು? ಇಲ್ಲಿದೆ ಮಾಹಿತಿ]

Ramachandrapura Math

ಬುಧವಾರ ಕರ್ನಾಟಕ ಹೈಕೋರ್ಟ್‌ ರಾಘವೇಶ್ವರ ಶ್ರೀಗಳ ವೈದ್ಯಕೀಯ ಪರೀಕ್ಷೆ ಆಗಲೇಬೇಕು ಎಂದು ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆಗೆ ಖಾಲಿ ಹೊಟ್ಟೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು ಎಂದು ಸಿಐಡಿ ಪೊಲೀಸರು, ಶ್ರೀಗಳಿಗೆ ನೋಟಿಸ್ ನೀಡಿದ್ದರು. [ಶ್ರೀಗಳಿಗೆ ಪರೀಕ್ಷೆ ಆಗಲೇಬೇಕು]

ಗುರುವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ಸಕಲ ಸಿದ್ಧತೆ ನಡೆದಿತ್ತು. ಪೊಲೀಸರು ಆಸ್ಪತ್ರೆಯಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರು, ಆದರೆ, ಶ್ರೀಗಳು ಪರೀಕ್ಷೆಗೆ ಹಾಜರಾಗಿರಲಿಲ್ಲ. ಹೈಕೋರ್ಟ್ ತೀರ್ಪಿನ ಪ್ರತಿ ತಮಗೆ ತಲುಪಿಲ್ಲ ಆದ್ದರಿಂದ ಪರೀಕ್ಷೆಗೆ ಬರಲು ಒಂದು ವಾರದ ಕಾಲಾವಕಾಶ ನೀಡುವಂತೆ ಶ್ರೀಗಳು ಮನವಿ ಮಾಡಿದ್ದರು. ಆದರೆ, ಶುಕ್ರವಾರ ಪರೀಕ್ಷೆಗೆ ಬಂದಿದ್ದಾರೆ.

ಪರೀಕ್ಷೆ ಏಕೆ : ರಾಘವೇಶ್ವರ ಶ್ರೀಗಳ ವಿರುದ್ಧ ಗಾಯಕಿ ಪ್ರೇಮಲತಾ ದಿವಾಕರ್ ಶಾಸ್ತ್ರೀ ಅವರು ಅತ್ಯಾಚಾರದ ಆರೋಪ ಮಾಡಿದ್ದಾರೆ. ಅತ್ಯಾಚಾರ ನಡೆಸಿದ್ದಾರೆ ಎಂಬ ಸಮಯದಲ್ಲಿ ಧರಿಸಿದ್ದ ಬಟ್ಟೆಯನ್ನು ಪೊಲೀಸರಿಗೆ ನೀಡಿದ್ದು ಅದರಲ್ಲಿ ವೀರ್ಯ ಪತ್ತೆಯಾಗಿತ್ತು. ಅದು ಯಾರದ್ದು? ಎಂದು ತಿಳಿಯಲು ಸಿಐಡಿ ಪೊಲೀಸರು ಶ್ರೀಗಳ ವೈದ್ಯಕೀಯ ಪರೀಕ್ಷೆ ನಡೆಸಲು ನೋಟಿಸ್‌ ನೀಡಿದ್ದರು.

ಆದರೆ, ಹೈಕೋರ್ಟ್‌ಗೆ ಶ್ರೀಗಳ ಪರ ವಕೀಲರು ಅರ್ಜಿಸಲ್ಲಿಸಿ ಪರೀಕ್ಷೆಗೆ ತಡೆಯಾಜ್ಞೆ ತಂದಿದ್ದರು. ಇದನ್ನು ಪ್ರಶ್ನಿಸಿ ಸಿಐಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು ಮತ್ತು ತಡೆಯಾಜ್ಞೆ ತೆರವುಗೊಳಿಸುವಂತೆ ಮನವಿ ಮಾಡಿತ್ತು. ಈ ಕುರಿತು ತೀರ್ಪು ನೀಡಿದ್ದ ಕೋರ್ಟ್ ಪರೀಕ್ಷೆ ಆಗಲೇಬೇಕು ಎಂದು ಹೇಳಿತ್ತು.

English summary
Raghaveshwara Bharathi Swamiji of Ramachandrapura Mutt attend for medical test in Victoria Hospital Bengaluru on Friday 8 am. CID police issued notice to Swamiji for attend medical test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X