ಬಿಬಿಎಂಪಿ ಮಾಜಿ ಮೇಯರ್ ಶಾಂತಕುಮಾರಿ ಜೆಡಿಎಸ್ ಸೇರಲ್ಲ

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 13 : 'ಬಿಬಿಎಂಪಿಯ ಮಾಜಿ ಮೇಯರ್ ಶಾಂತಕುಮಾರಿ, ಹೆಚ್.ರವೀಂದ್ರ ಅವರು ಜೆಡಿಎಸ್ ಪಕ್ಷಕ್ಕೆ ಸೇರುವುದಿಲ್ಲ' ಎಂದು ಮಾಜಿ ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ. ಇಬ್ಬರು ನಾಯಕರು ಬಿಜೆಪಿ ತೊರೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಶುಕ್ರವಾರ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್, 'ವಿಜಯನಗರದ ಬಿಜೆಪಿ ಮುಖಂಡ ಹೆಚ್.ರವೀಂದ್ರ, ಮಾಜಿ ಮೇಯರ್ ಶಾಂತಕುಮಾರಿ ಪಕ್ಷ ಬಿಡುವುದಿಲ್ಲ' ಎಂದು ಹೇಳಿದರು.

ಕೈ-ಕಮಲ ಕಿತ್ತಾಟ ಜೆಡಿಎಸ್ ಗೆ ವರದಾನ?

R Ashok rules out Shanthakumari and H Ravindra joining jds

ಹೆಚ್.ರವೀಂದ್ರ ಮತ್ತು ಶಾಂತಕುಮಾರಿ ಅವರು ಸಹ ಮಾಧ್ಯಗಳ ಜೊತೆ ಮಾತನಾಡಿ ಬಿಜೆಪಿ ತೊರೆಯುವುದಿಲ್ಲ ಎಂದು ಹೇಳಿದರು. ಹೆಚ್.ರವೀಂದ್ರ ಅವರು ಗುರುವಾರ ಫೇಸ್‌ಬುಕ್‌ನಲ್ಲಿಯೂ ಪಕ್ಷ ಬಿಡುವುದಿಲ್ಲ ಬಿಜೆಪಿ ತೊರೆಯುವ ಬಗ್ಗೆ ಹಬ್ಬಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು.

ಪುಟ್ಟಣ್ಣ ಬಿಜೆಪಿ ಸೇರಿದರೆ ಯಶವಂತಪುರದಿಂದ ಸ್ಪರ್ಧೆ?

ಸೋಮವಾರ ವಿವಿಧ ಮಾಧ್ಯಮಗಳಲ್ಲಿ ಶಾಂತಕುಮಾರಿ ಮತ್ತು ಹೆಚ್.ರವೀಂದ್ರ ಅವರು ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿತ್ತು. 2018ರ ಚುನಾವಣೆಗೆ ಇಬ್ಬರಿಗೂ ಬೆಂಗಳೂರು ನಗರ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ನೀಡಲಿದೆ. ಆದ್ದರಿಂದ, ಇಬ್ಬರು ಬಿಜೆಪಿ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂಬ ವರದಿಗಳು ಬಂದಿತ್ತು.

2018ರ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ಕಸರತ್ತು ಶುರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former BBMP mayor N.Shanthakumari and Vijayanagar BJP leader H.Ravindra will not join JDS said Former minister R.Ashok.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ