ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಪತ್ತೆಯಾದ ಟೆಕ್ಕಿಯನ್ನು 8 ಗಂಟೆಗಳಲ್ಲೇ ಹುಡುಕಿದ ಪೊಲೀಸರು

|
Google Oneindia Kannada News

ಬೆಂಗಳೂರು, ಡಿಸೆಂಬರ್ 17: ನಾಪತ್ತೆಯಾಗಿದ್ದ ಟೆಕ್ಕಿಯನ್ನು ಕೇವಲ 8 ಗಂಟೆಯೊಳಗೇ ಹುಡುಕಿ ಪೊಲೀಸರು ತಮ್ಮ ಚತುರತೆ, ನಿಷ್ಠೆಯನ್ನು ಮೆರೆದಿದ್ದಾರೆ.

45 ವರ್ಷದ ಟೆಕ್ಕಿ ವಿನಯ್(ಹೆಸರು ಬದಲಿಸಲಾಗಿದೆ) ಅವರು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ಬಳಿ ಇರುವ ಕಂಪನಿಯೊಂದಕ್ಕೆ ಇಂಟರ್‌ವ್ಯೂಗಾಗಿ ತೆರಳಿದ್ದವರು ವಾಪಸ್ ಮನೆಗೆ ಹಿಂದಿರುಗಿರಲಿಲ್ಲ. ಅವರ ಪತ್ನಿ ಮಲ್ಟಿನ್ಯಾಷನಲ್ ಕಂಪನಿಯೊಂದರಲ್ಲಿ ಕೆಲಸ ನಿರ್ವಹಸುತ್ತಿದ್ದಾರೆ. ದಂಪತಿಗೆ ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದಾರೆ.

ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಘಟನೆಗೆ ಕಾರಣ: ಟೆಕ್ಕಿ ವಿನಯ್ 2017ರ ಡಿಸೆಂಬರ್‌ನಲ್ಲೇ ಕೆಲಸವನ್ನು ಬಿಟ್ಟಿದ್ದ, ಬಳಿಕ ಫ್ರೀಲ್ಯಾನ್ಸರ್‌ ಆಗಿ ಕೆಲಸ ಮಾಡುತ್ತಿದ್ದರು. ಅಂದು ಇಂಟರ್‌ವ್ಯೂಗೆಂದು ಹೋಗಿದ್ದರು ಆದರೆ ಅವರು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.

Quick-thinking cops trace missing techie in 8 hours

ಬಳಿಕ ಡ್ರೈವರ್ ಬಳಿ ನೀನೊಬ್ಬನೆ ಮನೆಗೆ ಹೋಗು ಎಂದು ಹೇಳಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ಅದಾದ ಬಳಿಕ ಹೆಂಡತಿಗೆ ಲ್ಯಾಪ್‌ ಟಾಪ್‌ನಿಂದ ಒಂದು ಸಂದೇಶ ಕಳುಹಿಸಿದ್ದರು, ತಾನು ಇಲ್ಲದ ಜೀವನವನ್ನು ನೀನು ಬದುಕಲು ಅಭ್ಯಾಸ ಮಾಡಿಕೊಳ್ಳಬೇಕು, ಮಕ್ಕಳ ಕರ್ತವ್ಯ ನಿನ್ನ ಮೇಲಿದೆ ಎಂದೆಲ್ಲಾ ಬರೆದಿದ್ದರು. ಇದನ್ನು ನೋಡಿ ಶಾಕ್ ಆದ ಪತ್ನಿ ತಕ್ಷಣ ಮಾರತ್ತಹಳ್ಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ.

ಗೆಳತಿಯೊಂದಿಗೆ ಕಲಹ: ಲಿವಿಂಗ್ ಟುಗೆದರ್ ನಲ್ಲಿದ್ದ ಟೆಕ್ಕಿ ಆತ್ಮಹತ್ಯೆ ಗೆಳತಿಯೊಂದಿಗೆ ಕಲಹ: ಲಿವಿಂಗ್ ಟುಗೆದರ್ ನಲ್ಲಿದ್ದ ಟೆಕ್ಕಿ ಆತ್ಮಹತ್ಯೆ

ಪೊಲೀಸರು ತನಿಖೆ ಆರಂಭಿಸಿದಾಗ ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವುದು ತಿಳಿದಿದೆ ಆದರೂ ಇಮೇಲ್ ಬಂದಿದೆಯೆಂದರೆ ಆತ ವೈಫೈ ಬಳಕೆ ಮಾಡಿರಬೇಕು ಎಂಜಿ ರಸ್ತೆಯಲ್ಲಿ ಉಚಿತ ವೈ-ಫೈ ಇದೆ ಎಂದು ತಿಳಿದಿದ್ದ ಪೊಲೀಸರು ತಕ್ಷಣವಾಗಿ ಆತನ ಪತ್ನಿಗೆ ಎಂಜಿ ರಸ್ತೆಗೆ ತೆರಳಲು ಹೇಳಿದರು.

ಅಲ್ಲಿಗೆ ಹೋಗುತ್ತಿರುವಾಗ ಅನಿಲ್ ಕುಂಬ್ಳೆ ವೃತ್ತದ ಬಳಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಪೊಲೀಸರು ಅವರನ್ನು ಸುರಕ್ಷಿತವಾಗಿ ಕುಟುಂಬಕ್ಕೆ ತಲುಪಿಸಿದ್ದಾರೆ. ಆತನ ಆಶ್ರಮಕ್ಕೆ ಸೇರಲು ನಿರ್ಧರಿಸಿದ್ದ ಎಂದು ತಿಳಿದುಬಂದಿದೆ.

ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್ ಮಾಜಿ ಪ್ರೇಯಸಿಯನ್ನು ಬೆದರಿಸಿ ರೇಪ್ ಮಾಡಿದ ಸಾಫ್ಟ್ ವೇರ್ ಎಂಜಿನಿಯರ್

ಅವರ ಮಾನಸಿಕ ಸ್ಥಿತಿ ಸರಿಯಿಲ್ಲ ಈ ಮನಸ್ಥಿತಿಯಿಂದ ಹೊರ ಬರಲು ಕುಟುಂಬದವರ ಸಹಕಾರ ಮುಖ್ಯ ಎಂದು ಬೆಂಗಳೂರು ನಗರ ಪೊಲೀಸ್ ಉಪ ಆಯುಕ್ತ ಅಬ್ದುಲ್ ಅಹದ್ ಮನೆಯವರಿಗೆ ಸಲಹೆ ನೀಡಿದ್ದಾರೆ.

English summary
Quick thinking, police intuition, public Wi-Fi hot spot and of course , luck came to the aid of city police in locating techie with in 8 hours
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X