ಪೂಜಿತ ಅಹಮದಾಬಾದ್‌ಗೆ ಪ್ರಯಾಣಿಸಿದ್ದಾಳೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 28 : 13 ವರ್ಷದ ಎಂ.ಕೆ.ಪೂಜಿತ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. ಭಾನುವಾರ ಆಕೆ ಹುಬ್ಬಳ್ಳಿಯಲ್ಲಿ ಆಕೆ ಪತ್ತೆಯಾಗಿದ್ದು, ಸಬಂಧಿಕರ ಮನೆಯಲ್ಲಿದ್ದಾಳೆ. [ಹುಬ್ಬಳ್ಳಿಯಲ್ಲಿ ಪೂಜಿತ ಪತ್ತೆ]

ಹಿಂದಿನ ಸುದ್ದಿ : ಬೆಂಗಳೂರಿನಿಂದ ನಾಪತ್ತೆಯಾಗಿರುವ ಎಂ.ಕೆ.ಪೂಜಿತ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಆದರೆ, ಅಲ್ಲಿಂದ ಆಕೆ ಎಲ್ಲಿಗೆ ತೆರಳಿದ್ದಾಳೆ? ಎಂಬ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ರಾಜಾಜಿನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 7 ತರಗತಿ ಓದುತ್ತಿದ್ದ ಎಂ.ಕೆ. ಪೂಜಿತಾ (13) ಆಗಸ್ಟ್ 24ರಿಂದ ನಾಪತ್ತೆಯಾಗಿದ್ದಾಳೆ. ಆ.24ರಂದು ಆಕೆ ಅಜ್ಮೀರ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಅಹಮದಾಬಾದ್‌ಗೆ ತೆರಳಿದ್ದಾಳೆ.[ಪೂಜಿತಾ ನಿಗೂಢ ನಾಪತ್ತೆ]

Puujita has traveled from Bengaluru to Ahmedabad

ಆ.26ರಂದು ಆಕೆ ಅಹಮದಾಬಾದ್‌ ತಲುಪಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಅಹಮದಾಬಾದ್‌ನಿಂದ ದಕ್ಷಿಣ ಭಾರತದ ಕಡೆ ತೆರಳಲು ಆಕೆ ರೈಲ್ವೆ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾಳೆ. ಆದರೆ, ಟಿಕೆಟ್ ಸಿಕ್ಕಿಲ್ಲ. ಮುಂಬೈಗೆ ತೆರಳಲು ಆಕೆ ಪ್ರಯತ್ನ ನಡೆಸಿದ್ದಾಳೆ.

ಮುಂದೇನಾಯಿತು? ಎಂಬ ಬಗ್ಗೆ ಪೊಲೀಸರಿಗೂ ಮಾಹಿತಿ ಸಿಕ್ಕಿಲ್ಲ. ಆ.26ರ ಮಧ್ಯಾಹ್ನ 3 ಗಂಟೆಗೆ ಅಹಮದಾಬಾದ್‌ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಪತ್ತೆಗೆ ಸಹಕಾರ ನೀಡಿ : ಪೂಜಿತಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಓದಲು ಮತ್ತು ಮಾತಾಡಲು ಬರುತ್ತದೆ. ನಾಪತ್ತೆಯಾಗುವಾಗ ಆಕೆ ಬೀಳಿ ಬಣ್ಣದ, ಕಂದು ಪಟ್ಟಿಗಳಿರುವ ಅಂಗಿ ಮತ್ತು ಕಂದು ಬಣ್ಣದ ಸ್ಕರ್ಟ್ ತೊಟ್ಟಿದ್ದು, ಕಪ್ಪು ಬಣ್ಣದ ಟಾಪ್ ಹಾಗು ಪ್ಯಾಂಟನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಆಕೆ ಕೆಂಪು ಬಣ್ಣದ ಸ್ಕೂಲ್ ಬ್ಯಾಗನ್ನು ಕೂಡ ತೆಗೆದುಕೊಂಡು ಹೋಗಿದ್ದಾಳೆ.

ಪೂಜಿತ ಬಗ್ಗೆ ಮಾಹಿತಿ ಸಿಕ್ಕರೆ ಈ ನಂಬರ್‌ಗೆ ಕರೆ ಮಾಡಿ

Madhukiran - +91 99022 70300
Vasudev Murthy - +91 8095 502931
Jayathirtha - +91 77387 37827
Manohar Iyer - +91 98862 98870

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Poilice have some solid confirmation that Puujita has traveled from Bengaluru to Ahmedabad on August 24th night by Ajmer Express, reached Ahmedabad on August 26th morning. A 13-year-old girl M.K.Puujita is missing from Bengaluru.
Please Wait while comments are loading...