ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಯಂಡಹಳ್ಳಿ-ಬೈಯಪ್ಪನಹಳ್ಳಿ ಮಾರ್ಗದಲ್ಲಿ 2 ದಿನ ಮೆಟ್ರೋ ಸೇವೆ ಸ್ಥಗಿತ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ಮೆಟ್ರೋ ಸಮಸ್ಯೆಯನ್ನು ಸರಿಪಡಿಸಲು ಬಿಎಂಆರ್‌ಸಿಎಲ್ ದೆಹಲಿ ಮೆಟ್ರೋ ತಜ್ಞರ ಮೊರೆ ಹೋಗಿದ್ದಾರೆ. ನಿಗಮದ ಅಧಿಕಾರಿಗಳ ಪರಿಶೀಲನೆ ಹಿನ್ನೆಲೆಯಲ್ಲಿ ಎರಡು ದಿನ ಟ್ರಿನಿಟಿ ವೃತ್ತದಲ್ಲಿ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ

ಗುರುವಾರ ಬೆಳಗಿನ ಜಾವ 5ರಿದ 7ರವರೆಗೆ ಟ್ರಿನಿಟಿ ವೃತ್ತದಿಂದ ಬೈಯಪ್ಪನಹಳ್ಳಿ ನಡುವೆ ಮೆಟ್ರೋ ಸೇವೆ ಅಲಭ್ಯವಾಗಿತ್ತು. ಈ ಅವಧಿಯಲ್ಲಿ ಸುಮಾರು ಏಳು ಟ್ರಿಪ್‌ಗಳು ರದ್ದಾಗಿವೆ. ಮುಂದಿನ ಶನಿವಾರ ಮತ್ತು ಭಾನುವಾರ ಕೂಡ ದುರಸ್ತಿ ಕಾರ್ಯ ಇರುವುದರಿಂದ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಬ್ಯವಾಗಿದೆ.

ದೆಹಲಿ ಮೆಟ್ರೋ ವಯಾಡಕ್ಟ್‌ನಲ್ಲೂ ಸಮಸ್ಯೆ

ದೆಹಲಿ ಮೆಟ್ರೋ ವಯಾಡಕ್ಟ್‌ನಲ್ಲೂ ಸಮಸ್ಯೆ

ಈ ಹಿಂದೆ ದೆಹಲಿ ಮೆಟ್ರೋದ ವಯಾಡಕ್ಟ್ ನಲ್ಲೂ ಕೂಡ ಸಮಸ್ಯೆ ಕಾಣಿಸಿಕೊಂಡಿತ್ತು. ಏರ್‌ಪೋರ್ಟ್ ಮಾರ್ಗದ ಮೆಟ್ರೋ ಸೇತುವೆಯ ವಯಾಡಕ್ಟ್ ಮತ್ತು ಕಂಬದ ನಡುವಿನ ಬೇರಿಂಗ್ ಕಿತ್ತು ಹೊರಬಂದಿತ್ತು. ಇರಿಂದ ಏರ್‌ಪೋರ್ಟ್ ಮಾರ್ಗದ ಮೆಟ್ರೋ ಸೇವೆ ಕೆಲ ದಿನಗಳ ಮಟ್ಟಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ? ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?

ಕಾಂಕ್ರೀಟ್ ಶಿಥಿಲಗೊಂಡಿರುವ ಸಾಧ್ಯತೆ

ಕಾಂಕ್ರೀಟ್ ಶಿಥಿಲಗೊಂಡಿರುವ ಸಾಧ್ಯತೆ

ನಿಗಮದ ಮೂಲಗಳ ಪ್ರಕಾರ, ಟ್ರಿನಿಟಿ ನಿಲ್ದಾಣದ ಸಮೀಪದ ವಯಾಡಕ್ಟ್‌ ಕೆಳಗೆ ಅಳವಡಿಸಲಾಗಿರುವ ನಾಲ್ಕು ಗಾರ್ಡರ್‌ಗಳನ್ನು ಜೋಡಿಸಿ ಹಾಕಲಾಗಿರುವ 200 ಟನ್ ತೂಕದ ಡಯಾಫ್ರೇಮ್ ನಲ್ಲಿ ಕಾಂಕ್ರೀಟ್ ಶಿಥಿಲಗೊಂಡಿರುವ ಸಾಧ್ಯತೆ ಇದೆ. ಪರಿಣಾಮ ಆ ಕಾಂಕ್ರೀಟ್ ಮೇಲಿದ್ದ ಬೇರಿಂಗ್ ಸುಮಾರು 15 ಮಿ.ಮೀನಷ್ಟು ಕೆಳಗೆ ಕುಸಿದಿದೆ. ಅದಕ್ಕೆ ಕಬ್ಬಿಣದ ಕಂಬಿಗಳನ್ನು ಆಧಾರವಾಗಿ ಇಡಲಾಗಿದೆ. ಇನ್ನು ಆ ಮಾರ್ಗದಲ್ಲಿ ರೈಲು ಹಾದುಹೋದಾಗ, ಅದರ ಭಾರ ಕಂಬದ ಮೇಲೆ ಬೀಳುವ ಕಾರಣ ಮೆಟ್ರೋ 20 ಕಿಮೀ ವೇಗದಲ್ಲಿ ಸಂಚರಿಸುತ್ತಿದೆ.

ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್‌ಸಿಎಲ್ ಮನವಿ ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್‌ಸಿಎಲ್ ಮನವಿ

ಎರಡು ದಿನ ಮೆಟ್ರೋ ಸಂಚಾರ ಸ್ಥಗಿತ

ಎರಡು ದಿನ ಮೆಟ್ರೋ ಸಂಚಾರ ಸ್ಥಗಿತ

ಎರಡು ದಿನಗಳ ಕಾಲ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ, ಶನಿವಾರ ಮತ್ತು ಭಾನುವಾರ ದುರಸ್ತಿ ಕಾರ್ಯಗಳು ನಡೆಯುವುದರಿಂದ ಟ್ರಿನಿಟಿ ವೃತ್ತ ಅಂದರೆ ನಾಯಂಡಹಳ್ಳಿ-ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಪ್ರಯಾಣಿಕರ ಸಂಖ್ಯೆ ಇಳಿಕೆ?

ಪ್ರಯಾಣಿಕರ ಸಂಖ್ಯೆ ಇಳಿಕೆ?

ನಮ್ಮ ಮೆಟ್ರೋದಲ್ಲಿ ಗುರುವಾರ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು ಎನ್ನುವುದನ್ನು ಬಿಎಂಆರ್‌ಸಿಎಲ್ ಅಲ್ಲಗಳೆದಿದೆ. ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಪ್ರತಿ ದಿನ 3.60 ರಿಂದ 4 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಡಿಸೆಂಬರ್ 12 ರಂದು 3.88 ಲಕ್ಷ, ಡಿ.13ರವರೆಗೆ 2.11 ಲಕ್ಷ ಮಂದಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದ್ದಾರೆ.

English summary
Due to the ongoing work on the concrete beam supporting the rail tracks at Trinity Metro station. BMRCL will effect a shutdown in operation between MG road and Baiyappanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X