ಪುರಾಣಂ ಪರಾಭವಂ-ಯುವಜನರ ಸೃಜನಶೀಲ ರಂಗಪ್ರಯೋಗ

Posted By:
Subscribe to Oneindia Kannada

ಬೆಂಗಳೂರು, ಜ.08: ಪ್ರಯೋಗಶೀಲತೆಗೆ ಸದಾ ತುಡಿಯುವ ನಮ್ಮ-ನಿಮ್ಮೆಲ್ಲರ 'ಸಂವಾದ' ಈ ಬಾರಿಯೂ ಇದರಿಂದ ಹೊರತಾಗಿಲ್ಲ. ಹೊಸ ಕನಸುಗಳಿಗೆ ನೀರೆರೆಯುತ್ತಾ, ಯುವ ಜನರ ಮಿಡಿತಗಳಿಗೆ ಸ್ಪಂದಿಸುತ್ತಲೇ ಅವರಲ್ಲಿನ ಚೈತನ್ಯಕ್ಕೆ ಬೆಳಕಾಗುತ್ತಿದೆ. ಪ್ರತಿ ಬಾರಿಯಂತೆ ಈ ಸಲವೂ ಭಿನ್ನ ರಂಗಪ್ರಯೋಗಕ್ಕೆ ಇಳಿದಿದೆ.

ರಂಗಭೂಮಿಯ ಗಂಧಗಾಳಿಯೂ ಸೋಕದವರಲ್ಲಿ ಅಭಿನಯದ ಒಂದಿಷ್ಟು ಬೀಜ ಬಿತ್ತಿ ಸಜ್ಜುಗೊಳಿಸಿದೆ. ಅದು ಫಸಲಾಗಿ ನಳನಳಿಸುತ್ತದೆಂಬ ಭರವಸೆ ನಮ್ಮಲ್ಲಿಯೂ ಉಸಿರಾಡುತ್ತಿದೆ.

ಜಗದ ಅರಿವಿಗೆ ಬಾರದೆ ಹುದುಗಿರುವ ಎಷ್ಟೋ ಸತ್ಯಗಳಿವೆ. ಅವುಗಳನ್ನು ಬೆನ್ನಟ್ಟಿದಾಗಲೇ ಆಳ-ಅಗಲ ತಿಳಿಯುವುದಲ್ಲದೇ, ತೀವ್ರತೆಯ ಸ್ವರೂಪ ಅರ್ಥವಾಗುವುದು.

Purana Parabhavam Kannada play

ಈ ನಾಟಕದಲ್ಲಿ ತಮ್ಮೊಳಗೇ ಕುಗ್ಗಿ-ಅರಳಿದ ಕಣ್ಣ ರೆಪ್ಪೆಗಳ ತುಡಿತವಿದೆ. ಜಂಜಾಟದ ಬದುಕಿನೊಳಗೆ ಬೆತ್ತಲುಗೊಂಡವರ ಅಸ್ತಿತ್ವವಿದೆ. ಯುವ ಮನಸ್ಸಿನ ತವಕ-ತಲ್ಲಣಗಳನ್ನು ಪ್ರತಿಬಿಂಬಿಸಲಾಗಿದೆ.

ಪ್ರತಿಕ್ಷಣ ಕಾಲದ ಕಾಲಡಿಯಲ್ಲಿ ಸಿಲುಕಿ ಅವರು ತಮ್ಮ ಬದುಕನ್ನು ಹೇಗೆ ಸವೆಸುತ್ತಾ ಸಾಗುತ್ತಾರೆ ಎಂಬುದರೊಳಗೆ ಆರ್ಥಿಕ, ಸಾಮಾಜಿಕ ಸ್ಥಿತಿಗಳೊಳಗೆ ಸಿಲುಕಿ ನಲುಗುವ ಮುಗ್ಧ ಮನಸ್ಸುಗಳ ಬದುಕು ಅನಾವರಣಗೊಂಡಿದೆ. ಯಾರಿಗೂ ತೋರಗೊಡದೆ ತಮ್ಮೊಳಗೇ ಬಚ್ಚಿಟ್ಟುಕೊಂಡ ಹಸಿವಿನ ಬುತ್ತಿ ಬೆಳಕಿಗಾಗಿ ತುಡಿಯುತ್ತಿರುತ್ತದೆ. ಅಲ್ಲದೇ ಪುಟ್ಟ ಸಾಂತ್ವನದ ನಿಟ್ಟುಸಿರಿನ ಬೆಚ್ಚನೆಯ ಸ್ಪರ್ಶವ ಬೇಡುತ್ತಿರುತ್ತದೆ. ಇದನ್ನು ಅನುಭವಿಸಿಯೇ ತೀರಬೇಕಾದರೆ 'ಪುರಾಣಂ ಪರಾಭವಂ' ನಾಟಕ ನೋಡಲೇಬೇಕು.

ಹಳ್ಳಿಗಳು ನಗರಗಳಾಗಿ, ನಗರಗಳು ಮಹಾನಗರಗಳಾಗಿ ರೂಪಾಂತರಗೊಳ್ಳುತ್ತಿರುವ ಸಂಕ್ರಮಣ ಸಂದರ್ಭದಲ್ಲಿ ಯುವಜನರು ಅನಿವಾರ್ಯತೆಗೆ ಸಿಲುಕಿ, ನೆಲದ ನೆನಪುಗಳನ್ನು ಕೈಬಿಟ್ಟು ಬದುಕಿಗಾಗಿ ಗುಳೆ ಹೋಗಿ ಮಹಾನಗರಗಳಲ್ಲಿ ನೆಲೆನಿಂತಾಗ ಎದುರಾಗುವ ಸವಾಲು, ತಲ್ಲಣಗಳ ನೆರಳಲ್ಲಿ ಬಿಚ್ಚಿಕೊಳ್ಳುವ ನೆನಪುಗಳ ಕಥಾನಕವೇ 'ಪುರಾಣಂ ಪರಾಭವಂ' ನಾಟಕ.

Purana Parabhavam Kannada play a unique drama by a team of 27 youngsters. The show will be staged at KEA Prabhath Rangamandira, Basaveshwara Nagar, Bengaluru on Jan 09, 2015.

ಆಯ್ಕೆಯ ಸ್ವಾತಂತ್ರವಿಲ್ಲದೆ ಯುವಜನರು: ಕೌಟುಂಬಿಕ ಒತ್ತಡಗಳಿಂದಾಗಿ ಆಯ್ಕೆಯ ಸ್ವಾತಂತ್ರವಿಲ್ಲದೆ ಯುವಜನರು ಖಿನ್ನತೆಗೆ ಒಳಗಾಗುವುದು, ಸಹಜವಾಗಿ ಚಿಗುರುವ ಪ್ರೀತಿಯು ಜಾತಿ ಧರ್ಮದ ಸಂಕೋಲೆಗೆ ಸಿಲುಕಿ ನರಳುವುದು, ದೇವದಾಸಿ ಪದ್ದತಿ ಕಾರಣಕ್ಕೆ ಅಸ್ತಿತ್ವಹೀನರಾಗುವ ಯುವತಿಯರ ನೋವು, ಬಡತನದ ಕಾರಣಕ್ಕೆ ಕನಸುಗಳೇ ಹುಟ್ಟದೇ ಕಮರುವ ಬದುಕಿನ ಕುರಿತು ಸ್ವಗತ... ಕೊನೆಗೆ ಇವೆಲ್ಲವುಗಳನ್ನು ಮುರಿದು ಪಂಜರವ ದಾಟಿ, ಹಕ್ಕಿಯಂತೆ ಹಾರುವ ಭರವಸೆಯನ್ನು ಈ ನಾಟಕ ಪ್ರಸ್ತುತಪಡಿಸುತ್ತದೆ.


ಈ ನಾಟಕವು ಹಲವು ಕಾರಣಗಳಿಗಾಗಿ ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟವಾದ ಪ್ರಯೋಗವಾಗಿದೆ. ನಾಟಕ ತಂಡದಲ್ಲಿ 27 ಯುವಜನರಿದ್ದೂ ಕರ್ನಾಟಕದ ಬೆಳಗಾವಿಯಿಂದ ಕೋಲಾರದವರೆಗೂ, ಮಡಿಕೇರಿಯಿಂದ ಬಳ್ಳಾರಿವರೆಗೂ ಹಲವೂ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಅರವು, ತುಳು, ಬ್ಯಾರಿ, ಉರ್ದು, ಭಾಷೆಗಳ ಹಿನ್ನಲೆಯ ಯುವಜನರು ಈ ತಂಡದಲ್ಲಿ ಇದ್ದಾರೆ.

27 ಜನರು ತಾವು ಅನುಭವಿಸಿದ, ತಾವು ಕೇಳಿದ ಅನುಭವ ಜಗತ್ತುಗಳನ್ನೇ ಕಥೆಯಾಗಿಸಿ, ನಾಟಕವಾಗಿಸಿ, ಹಾಡುಗಳನ್ನು ಬರೆದು, ಸಂಗೀತ-ನೃತ್ಯ ಸಂಯೋಜಿಸಿ ರೂಪಿಸಿರುವ ಸಮೂಹ ರಚನೆಯ ವಿಶಿಷ್ಟ ನಾಟಕವು ಇದಾಗಿದೆ.

ಈ ನಾಟಕವು 9-01-2016, ಶನಿವಾರದಂದು ಸಂಜೆ 7ಕ್ಕೆ ಕೆಳಗಿನ ವಿಳಾಸದಲ್ಲಿ ನಡೆಯಲಿದೆ.
ಕೆ.ಇ.ಎ ಪ್ರಭಾತ್ ರಂಗ ಮಂದಿರ
ಕರ್ನಾಟಕ ಇಂಜಿನಿಯರ್ಸ್ ಅಕಾಡಮೆ
# 1,8ನೇ ಮೈನ್, 2ನೇ ಕ್ರಾಸ್, ಕಮಲಾನಗರ.
ಮ್ಯಾಕ್ಸ್ ಮುಲ್ಲ್ರ್ ಪಬ್ಲಿಕ್ ಶಾಲೆ ಹತ್ತಿರ.
ಬಸವೇಶ್ವರ ನಗರ, ಬೆಂ- 79

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ-
* 99720 89471(ಮುರಳಿ ಕಾಟಿ)
* 78997 69899 (ಮಂಜುನಾಥ್)

(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Purana Parabhavam Kannada play a unique drama by a team of 27 youngsters. The show will be staged at KEA Prabhath Rangamandira, Basaveshwara Nagar, Bengaluru on Jan 09, 2015.
Please Wait while comments are loading...