ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಬ್ ಗಳಲ್ಲಿ ಶುಕ್ರವಾರದಿಂದ ಸಂಗೀತ ಬಂದ್ ಆದರೆ ಇದೇ ಕಾರಣ...

|
Google Oneindia Kannada News

Recommended Video

ಪಬ್ ಗಳಲ್ಲಿ ಶುಕ್ರವಾರದಿಂದ ಸಂಗೀತ ಬಂದ್ ಆದರೆ ಇದೇ ಕಾರಣ... | Oneindia kannada

ಬೆಂಗಳೂರು, ಜುಲೈ 12 : ಅಗತ್ಯ ಅನುಮತಿ ಪಡೆಯದೆ ಲೈವ್ ಅಥವಾ ರೆಕಾರ್ಡ್ ಮಾಡಿದ ಸಂಗೀತವನ್ನು ಕೇಳಿಸುತ್ತಿರುವ ಪಬ್ ಗಳು ಶುಕ್ರವಾರದಿಂದ ಅದನ್ನು ನಿಲ್ಲಿಸಬೇಕು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ನೋಟಿಸ್ ಜಾರಿ ಮಾಡಿದ್ದಾರೆ.

ಈ ಬಗ್ಗೆ ಕಮಿಷನರ್ ಟಿ.ಸುನೀಲ್ ಕುಮಾರ್ ಮಾಧ್ಯಮವೊಂದರ ಜತೆ ಮಾತನಾಡಿ, ನಾವು ಸಮಯಾವಕಾಶ ನೀಡಿದ್ದೆವು. ಪರವಾನಗಿ ಪಡೆದುಕೊಳ್ಳಲು ಸೂಚನೆ ಕೊಟ್ಟಿದ್ದೆವು. ಈಗ ಯಾರು ನಮ್ಮ ನಿಯಮಾವಳಿ ಅನ್ವಯ ಪರವಾನಗಿ ಪಡೆದಿಲ್ಲವೋ ಅವರೆಲ್ಲ ಸಂಗೀತ ಹಾಕುವಂತಿಲ್ಲ ಎಂದು ಆದೇಶ ನೀಡಿದ್ದೇವೆ ಎಂದಿದ್ದಾರೆ.

ಬೆಂಗಳೂರಿನ ಪಬ್‌ ಮೇಲೆ ದಾಳಿ: 32 ಮಹಿಳೆಯರ ರಕ್ಷಣೆಬೆಂಗಳೂರಿನ ಪಬ್‌ ಮೇಲೆ ದಾಳಿ: 32 ಮಹಿಳೆಯರ ರಕ್ಷಣೆ

ಆದರೆ, ಬೆಂಗಳೂರಿನ ಪಬ್ ವೊಂದರ ಸಿಬ್ಬಂದಿ ತಮ್ಮ ಕಷ್ಟ ಹೀಗೆ ಹೇಳಿಕೊಂಡಿದ್ದಾರೆ: ಕೆಲವು ಇಲಾಖೆ ಬಳಿ ನಿರಾಕ್ಷೇಪಣಾ ಪತ್ರಕ್ಕೆ ಅರ್ಜಿ ಹಾಕಿಕೊಂಡಿದ್ದೀವಿ. ಕಟ್ಟಡದ ಮಾಲೀಕರು ಒಂದು ಪ್ರಮಾಣ ಪತ್ರ ನೀಡಬೇಕಿದೆ. ಅವುಗಳಿಂದ ಪೊಲೀಸರು ತಿಳಿಸಿದ ನಿಯಮಗಳನ್ನು ಅನುಸರಿಸಲು ನಮಗೆ ತಡವಾಗುತ್ತಿದೆ ಎಂದಿದ್ದಾರೆ.

Pub

ಆದರೆ, ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತರು ಹೇಳುವ ಪ್ರಕಾರ, ಪೊಲೀಸರಿಂದ ಅವರಿಗಿನ್ನೂ ಮಾಹಿತಿ ಬಂದಿಲ್ಲ. ಆ ಬಗ್ಗೆ ಆದೇಶ ಪತ್ರ ಸಿಕ್ಕ ನಂತರ ಈ ನಿಯಮ ಪಾಲನೆ ಮಾಡಲಾಗುತ್ತದೆ ಎಂದಿದ್ದಾರೆ.

ಪರವಾನಗಿ ಇಲ್ಲದೆ ಸಂಗೀತ ಹಾಕುತ್ತಿರುವ ಪಬ್ ಗಳಿಗೆ ಪೊಲೀಸರು ನೋಟಿಸ್ ನೀಡಲು ಆರಂಭಿಸಿದ್ದರು. ಏಕೆಂದರೆ, ಅಂಥ ಪಬ್ ಗಳಿಗೆ ಪರವಾನಗಿ ಕಡ್ಡಾಯ ಮಾಡಿ, ಈ ವರ್ಷದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಸಾರ್ವಜನಿಕ ಮನರಂಜನೆಗಾಗಿ ಯಾವುದೇ ರೀತಿಯ ಸಂಗೀತ ಕೇಳಿಸುವ ಪಬ್ ಗಳು ಆ ಸ್ಥಳದ ಆಕ್ಯುಪೆನ್ಸಿ ಸರ್ಟಿಫಿಕೇಟ್ ಹಾಗೂ ಫೈರ್ ಸೇಫ್ಟಿ ವಿಭಾಗದಿಂದ ನಿರಾಕ್ಷೇಪಣಾ ಪತ್ರ ಕಡ್ಡಾಯವಾಗಿ ಪಡೆದಿರಬೇಕು.

ನಿರ್ದಿಷ್ಟ ಅವಧಿಯೊಳಗೆ ಒಂದು ವೇಳೆ ಈ ದಾಖಲಾತಿಗಳನ್ನು ನೀಡದಿದ್ದರೆ ಸಂಗೀತ ಹಾಕಲು ಅಥವಾ ಕೇಳಿಸಲು ಅವಕಾಶ ನೀಡುವುದಿಲ್ಲ ಎಂದು ಕಮಿಷನರ್ ತಿಳಿಸಿದ್ದರು. ಕೆಲವು ಪಬ್ ಗಳ ಮಾಲೀಕರು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿನಾಯಿತಿ ನೀಡುವಂತೆ ಕರ್ನಾಟಕ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಆಗ ಅಗತ್ಯ ದಾಖಲಾತಿಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.

English summary
The Commissioner of Police of Bengaluru has issued notice to shut down music (live and recorded) in those pubs that play music without the necessary licenses from tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X