ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವನಾಥಪುರ ಠಾಣೆಯ ಪಿಎಸ್ಐ ಅಮಾನತು ಕ್ರಮ ಖಂಡಿಸಿ ಪ್ರತಿಭಟನೆ

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ದೇವನಹಳ್ಳಿ, ಜೂನ್.15 : ಗ್ರಾನೈಟ್ ಲಾರಿ ವಶ ವಿಚಾರದಲ್ಲಿ ಸಿಪಿಐಗೆ ಫೋನ್​ನಲ್ಲಿ ಅವಾಜ್​ ಹಾಕಿದ್ದ ಹಿನ್ನೆಲೆಯಲ್ಲಿ ತಾಲೂಕಿನ ವಿಶ್ವನಾಥಪುರ ಠಾಣೆಯ ಪಿಎಸ್ಐ ಶ್ರೀನಿವಾಸ್ ಅವರನ್ನು ನಿನ್ನೆಯಷ್ಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವರಿಷ್ಠಾಧಿಕಾರಿ ಭೀಮಾಶಂಕರ್ ಎಸ್ ಗುಳೇದ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಇದೀಗ ಪಿಎಸ್ಐ ಶ್ರೀನಿವಾಸ್ ಅಮಾನತು ಆದೇಶ ಹೊರಬೀಳುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಕ್ರಮದ ವಿರುದ್ದ ಆಕ್ರೋಶ ವ್ಯಕ್ಯವಾಗಿದೆ.

ಬೆಳಗಾವಿ: ಬೈಕಿಗೆ ಕಾರು ತಾಗಿದ್ದಕ್ಕೆ ಅಬಕಾರಿ ಪಿಎಸ್‌ಐ ಮೇಲೆ ಹಲ್ಲೆಬೆಳಗಾವಿ: ಬೈಕಿಗೆ ಕಾರು ತಾಗಿದ್ದಕ್ಕೆ ಅಬಕಾರಿ ಪಿಎಸ್‌ಐ ಮೇಲೆ ಹಲ್ಲೆ

ವಿಶ್ವನಾಥಪುರ ಪೊಲೀಸ್ ಠಾಣೆ ಮುಂದೆ ಇಂದು ಪಿಎಸ್ಐ ಸಸ್ಪೆಂಡ್ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಕೂಡಲೇ ಶ್ರೀನಿವಾಸ್ ಅವರ ಅಮಾನತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.

Public protesting against Vishwanathpur police station PSI suspension action.

ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರ ವಸೂಲಿಗೆ ಅಡ್ಡಿಪಡಿಸಿದ್ದೇ ಪಿಎಸ್ಐ ಸಸ್ಪೆಂಡ್ ಗೆ ಮುಖ್ಯ ಕಾರಣ ಎನ್ನಲಾಗಿದೆ.

ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದ ಪಿಎಸ್ಐ ಅವಾಜ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿ ಸಾರ್ವಜನಿಕರಿಂದ ಪಿಎಸ್​ಐ ಕಾರ್ಯಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು.
ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆ ಹಿರಿಯ ಅಧಿಕಾರಿ ವಿರುದ್ದ ಅಸಭ್ಯ ವರ್ತನೆ ಮಾಡಿದ್ದಾರೆ ಅಂತ ಸಮ್ಮಿಶ್ರ ಸರ್ಕಾರ ಶ್ರೀನಿವಾಸ್ ಅಮಾನತು ಭಾಗ್ಯ ಕೊಟ್ಟಿದೆ.

English summary
Public protesting against Vishwanathpur Police Station PSI suspension action. Publics today protest in front of Vishwanathpur police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X