ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2014ರ ಸರ್ಕಾರಿ ರಜಾ ಪಟ್ಟಿ, ಮೂರು ರಜೆ ನಷ್ಟ

|
Google Oneindia Kannada News

vidanasoudha
ಬೆಂಗಳೂರು, ಅ, 27 : 2014ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಒಟ್ಟು 22 ರಜಾ ದಿನಗಳನ್ನು ಘೋಷಣೆ ಮಾಡಲಾಗಿದೆ. ಎಲ್ಲ 2ನೇ ಶನಿವಾರ ಮತ್ತು ಭಾನುವಾರದ ರಜಾ ದಿನಗಳನ್ನು ಹೊರತುಪಡಿಸಿದ 22 ರಜಾ ದಿನಗಳು ದೊರೆಯಲಿವೆ. ಆದರೆ, ಮೂರು ಸರ್ಕಾರಿ ರಜೆ ಭಾನುವಾರ ಬಂದಿರುವುದರಿಂದ ನೌಕರರಿಗೆ ನಿರಾಸೆಯಾಗಿದೆ.

ಜ.14- ಈದ್‌ ಮಿಲಾದ್‌, ಜ.15- ಸಂಕ್ರಾಂತಿ, ಫೆ.27- ಶಿವರಾತ್ರಿ, ಮಾ.31- ಯುಗಾದಿ, ಏ.14- ಅಂಬೇಡ್ಕರ್‌ ಜಯಂತಿ, ಏ.18- ಗುಡ್‌ ಫ್ರೈಡೆ, ಮೇ 1- ಕಾರ್ಮಿಕ ದಿನಾಚರಣೆ, ಮೇ 2- ಬಸವ ಜಯಂತಿ, ಜು.29- ರಂಜಾನ್‌, ಆ.15- ಸ್ವಾತಂತ್ರ್ಯ ದಿನಾಚರಣೆ, ಆ.29- ಗಣೇಶ ಚೌತುರ್ಥಿ, ಸೆ.24- ಮಹಾಲಯ ಅಮವಾಸ್ಯೆ, ಅ.2- ಗಾಂಧಿ ಜಯಂತಿ, ಅ.3- ಆಯುಧ ಪೂಜೆ, ಅ.4- ವಿಜಯ ದಶಮಿ, ಅ.8- ವಾಲ್ಮೀಕಿ ಜಯಂತಿ, ಅ.22- ನರಕ ಚತುರ್ದಶಿ, ಅ.24- ದೀಪಾವಳಿ, ನ.1- ರಾಜ್ಯೋತ್ಸವ, ನ.4- ಮೊಹರಂ, ನ.8- ಕನಕದಾಸ ಜಯಂತಿ, ಡಿ.25- ಕ್ರಿಸ್‌ಮಸ್‌ ರಜಾದಿನಗಳಾಗಿವೆ.

ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ 26-01-2014 ಗಣರಾಜ್ಯೋತ್ಸವ, 13-04-2014 ಮಹಾವೀರ ಜಯಂತಿ, ಮತ್ತು 05-10-2014ರ ಬಕ್ರೀದ್, ರಜಾ ದಿನಗಳನ್ನೊಳಗೊಂಡಿರುವುದಿಲ್ಲ. ಆದ್ದರಿಂದ ಈ ಬಾರಿ ಸರ್ಕಾರಿ ನೌಕರರಿಗೆ ಮೂರು ರಜೆಗಳು ನಷ್ಟವಾಗಿವೆ.

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗದಿತ ದಿನಾಂಕದಂದು ಬರದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.

ದಿನಾಂಕ:18-10-2014 ಶನಿವಾರ ತುಲಾ ಸಂಕ್ರಮಣ ಆಚರಿಸಲು ಮತ್ತು ದಿನಾಂಕ:07-12-2014 ಭಾನುವಾರ ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

2014ರ ರಜಾಪಟ್ಟಿ ಹೀಗಿದೆ
ಕ್ರ. ಸಂ ದಿನಾಂಕ ವಾರ ಸಾರ್ವತ್ರಿಕ ರಜಾ
1 14-01-2014 ಮಂಗಳವಾರ
ಈದ್ ಮಿಲಾದ್
2 15-01-2014 ಬುಧವಾರ ಸಂಕ್ರಾತಿ ಹಬ್ಬ
3 27-02-2014 ಗುರುವಾರ ಮಹಾಶಿವರಾತ್ರಿ
4 31-03-2014 ಸೋಮವಾರ ಚಂದ್ರಮಾನ ಯುಗಾದಿ
5 14-04-2014
ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ
6 18-04-2014
ಶುಕ್ರವಾರ ಗುಡ್ ಫ್ರೈಡೆ
7 01-05-2014
ಗುರುವಾರ ಕಾರ್ಮಿಕ ದಿನಾಚರಣೆ
8 02-05-2014
ಶುಕ್ರವಾರ ಬಸವಜಯಂತಿ
9 29-07-2014
ಮಂಗಳವಾರ ಖುತುಬ್-ಎ-ರಂಜಾನ್
10 15-08-2014
ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ
11 29-08-2014
ಶುಕ್ರವಾರ ವರಸಿದ್ಧಿ ವಿನಾಯಕ ವ್ರತ
12 24-09-2014
ಬುಧವಾರ ಮಹಾಲಯ ಅಮವಾಸ್ಯೆ
13 02-10-2014
ಗುರುವಾರ ಗಾಂಧೀ ಜಯಂತಿ
14 03-10-2014
ಶುಕ್ರವಾರ ಮಹಾನವಮಿ ಆಯುಧಪೂಜೆ
15 04-10-2014
ಶನಿವಾರ ವಿಜಯ ದಶಮಿ
16 08-10-2014
ಬುಧವಾರ ಮಹರ್ಷಿ ವಾಲ್ಮೀಕಿ ಜಯಂತಿ
17 22-10-2013
ಬುಧವಾರ ನರಕ ಚತುರ್ದಶಿ
18 24-10-2014
ಶುಕ್ರವಾರ ದೀಪಾವಳಿ
19 01-11-2014
ಶನಿವಾರ ಕನ್ನಡ ರಾಜ್ಯೋತ್ಸವ
20 04-11-2014
ಮಂಗಳವಾರ ಮೊಹರಂ ಕಡೇ ದಿನ
21 08-11-2014
ಶನಿವಾರ ಕನಕದಾಸ ಜಯಂತಿ
22 25-12-2014
ಗುರುವಾರ ಕ್ರಿಸ್‌ಮಸ್
English summary
List of public holidays declared by Karnataka government for the year 2014. Karnataka govt has also declared list of restricted holidays. government employees get 22 holidays in year 2014. Have a fantastic year ahead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X