ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಥಮ ಪಿಯು ಪ್ರವೇಶಕ್ಕೆ ಅರ್ಜಿ ವಿತರಣೆ ಆರಂಭ: ಮೇ.14ರವರೆಗೆ ವಿತರಣೆ

By Nayana
|
Google Oneindia Kannada News

ಬೆಂಗಳೂರು, ಮೇ 09: ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಂದು ಇನ್ನು ಕೇವಲ ಎರಡುದಿನ ಕಳೆದಿರುವಾಗಲೇ ಕಾಲೇಜುಗಳು ಪ್ರಥಮ ಪಿಯು ಪ್ರವೇಶಕ್ಕೆ ಅರ್ಜಿ ನೀಡಲು ಆರಂಭಿಸಿದೆ.

ನಗರದ ಕೆಲ ಪ್ರತಿಷ್ಠಿತ ಕೇಲೇಜಿನಲ್ಲಿ ಅರ್ಜಿ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಈ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.4ರಷ್ಟು ಹೆಚ್ಚಳವಾಗಿರುವುದರಿಂದ ಕೆಲವು ಖಾಸಗಿ ಪ್ರತಿಷ್ಠಿತ ಕಾಲೇಜುಗಳು ಕಟ್‌ಆಫ್‌ ಏರಿಸಲು ನಿರ್ಧರಿಸಿವೆ.

SSLC ಫಲಿತಾಂಶ: ಉಡುಪಿಗೆ ಮೊದಲ ಸ್ಥಾನ, ಯಾದಗಿರಿ ಕೊನೆಯ ಸ್ಥಾನSSLC ಫಲಿತಾಂಶ: ಉಡುಪಿಗೆ ಮೊದಲ ಸ್ಥಾನ, ಯಾದಗಿರಿ ಕೊನೆಯ ಸ್ಥಾನ

ನಗರದ ಪಿಇಎಸ್, ಎಂಇಇಎಸ್‌, ಮೌಂಟ್‌ ಕಾರ್ಮಲ್ ಸೇರಿ ಇತರೆ ಹಲವು ಕಾಲೇಜುಗಳ ಮುಂದೆ ಪಾಲಕರು ಮತ್ತು ವಿದ್ಯಾರ್ಥಿಗಳು ಅರ್ಜಿ ಪಡೆಯಲು ಸಾಲಿನಲ್ಲಿ ನಿಂತಿದ್ದ ದೃಶ್ಯ ಮಂಗಳವಾರ ಸಾಮಾನ್ಯವಾಗಿತ್ತು.

PU first year admissions resume

ಮೊದಲ ದಿನವೇ 1 ಸಾವಿರದಿಂದ 4 ಸಾವಿರದವರೆಗೆ ಅರ್ಜಿಗಳನ್ನು ವಿತರಿಸಿವೆ. ಮೇ 14 ರವರೆಗೆ ಅರ್ಜಿಯನ್ನು ವಿತರಿಸಲಾಗುತ್ತದೆ. ಇಲಾಖೆ ಪಿಯು ಪ್ರವೇಶಕ್ಕೆ ಪ್ರತ್ಯೇಕ ಅರ್ಜಿ ರೂಪಿಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.ಅದನ್ನೇ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಶುಲ್ಕವಾಗಿ 21 ರೂ. ಪಾವತಿಸಬೇಕಿದೆ. ಆದರೆ, ಬಹುತೇಕ ಖಾಸಗಿ ಕಾಳೇಜುಗಳು ಅರ್ಜಿ, ಕಾಲೇಜಿನ ಕೈಪಿಡಿಗಾಗಿ 500 ರೂ. ಪಡೆಯುತ್ತಿದೆ.

ಸೀಟು ಲಭ್ಯತೆ ಮತ್ತು ಕಟ್‌ಆಫ್‌

ಕಾಲೇಜು ವಿಜ್ಞಾನ ವಾಣಿಜ್ಯ ಕಲೆ
ಪಿಇಎಸ್ 400-ಶೇ.87.00 160-ಶೇ.83 80-ಶೇ.80 ಮೇಲ್ಪಟ್ಟು
ಎಂಇಇಎಸ್ 560-ಶೇ.96.08 160 ಶೇ.95 80-ಶೇ.80 ಮೇಲ್ಪಟ್ಟು
English summary
Following the SSLC results, admission process for first PU was resumed in various colleges in Bengaluru. Hundreds of students were in queue for application in front of colleges on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X