ವಿದ್ಯಾರ್ಥಿನಿಯರ ಒಳ ಉಡುಪು ಕದಿಯುವ ಯಾರು ಈ ವಿಕೃತ ಕಾಮಿ?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್. 21 : ಮಹಾರಾಣಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸೈಕೋ ಒಬ್ಬನ ಕಾಟ ಶುರುವಾಗಿದೆ. ಅರೇ ಬೆತ್ತಲೆಯಾಗಿ ವಿಕೃತ ಕಾಮಿಯೊಬ್ವ ಮಧ್ಯರಾತ್ರಿ ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಕದಿಯುತ್ತಾನೆ.

ಮಧ್ಯರಾತ್ರಿ ವೇಳೆ ಈ ಸೈಕೋ ವ್ಯಕ್ತಿ ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿನಿಯರು ಹೊರಗೆ ಒಣಹಾಕಿದ್ದ ಒಳ ಉಡುಪುಗಳನ್ನು ಕದ್ದು ತೊಟ್ಟುಕೊಳ್ಳುತ್ತಾನೆ.

ಅಷ್ಟೇ ಅಲ್ಲದೆ ಕೊಠಡಿಯಲ್ಲಿ ಮಲಗಿರುವ ಹುಡುಗಿಯರನ್ನು ಈತ ಕಿಟಕಿಯಿಂದ ಕದ್ದುನೋಡುತ್ತಾನೆ ಈ ಎಲ್ಲಾ ದೃಶ್ಯ ಹಾಸ್ಟೆಲ್ ನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. [ಲೈಂಗಿಕ ಕಿರುಕುಳ, ಬೆಂಗ್ಳೂರು ಮಹಾರಾಣಿ ಕಾಲೇಜ್ ಪ್ರಾಧ್ಯಾಪಕ ಅಮಾನತು]

Psycho person Entered in Maharani Collage womens Hostel Bengaluru

ಹಾಸ್ಟೆಲ್ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಸೈಕೋನನ್ನು ಹಿಡಿಯಲು ಪ್ರಯತ್ನಿಸಿದ್ದರೂ ಇವರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾನೆ. ಈತ ತನ್ನ ಕೈಯಲ್ಲಿ ಆಸಿಡ್ ಮತ್ತು ಚಾಕು ಇಟ್ಟುಕೊಂಡಿರುತ್ತಾನೆ ಎಂಬುದು ತಿಳಿದುಬಂದಿದೆ.

ಮಹಾರಾಣಿ ಕಾಲೇಜು ಹಾಸ್ಟೆಲ್ ನಲ್ಲಿ ಅಡುಗೆ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಇದ್ದರೂ ಅವರ ಕಣ್ತಪ್ಪಿಸಿ ಈತ ಹೇಗೆ ಒಳನುಸುಳುತ್ತಾನೆ ಎಂಬುದು ಗೊತ್ತಿಲ್ಲ.

ಮಹಾರಾಣಿ ಕಾಲೇಜಿನ ಆಡಳಿತವರ್ಗವು ಈಗಾಗಲೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು ಪೊಲೀಸರು ತನಿಖೆಯನ್ನೂ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The psycho person Entered mid night in Maharani Collage womens hostel Bengaluru. The psycho video Caught CCTV Footage.
Please Wait while comments are loading...