ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ ಐ ರೂಪಾ ಹೇಳಿಕೆ ಇಲ್ಲದ ವರದಿ ಮೇಘರಿಕ್ ಕೈಗೆ!

By Mahesh
|
Google Oneindia Kannada News

ಬೆಂಗಳೂರು, ಜುಲೈ 21: ಹಿರಿಯ ಅಧಿಕಾರಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಮೆಗೆ ಯತ್ನಿಸಿದ ವಿಜಯನಗರ ಠಾಣೆ ಪಿಎಸ್ ಐ ರೂಪಾ ತೆಂಬದ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ನಡುವೆ ಆಸ್ಪತ್ರೆಯಲ್ಲಿರುವ ರೂಪಾ ಅವರ ಹೇಳಿಕೆ ಪಡೆಯದೆ ತನಿಖಾಧಿಕಾರಿಗಳು ವರದಿ ತಯಾರಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಅವರಿಗೆ ಸಲ್ಲಿಸಿದ್ದಾರೆ.

ರೂಪಾ ಅವರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಡಿಸಿಪಿ ಸಂದೀಪ್ ಪಾಟೀಲ್ ಅವರು ಪ್ರಥಮ ಮಾಹಿತಿ ವರದಿ ಸಿದ್ಧಪಡಿಸಿದ್ದು, 'ಘಟನೆ ಸಂಬಂಧ ಪಿಐ ಮತ್ತು ಪಿಎಸ್​ಐ ಅವರು 'ದಿನಚರಿ'ಯಲ್ಲಿ ಬರೆದಿರುವ ಅಂಶಗಳನ್ನು ಆಧರಿಸಿ ಸಿದ್ಧಪಡಿಸಲಾಗಿರುವ ಎಫ್​ಐಆರ್ ಇದಾಗಿದೆ.[ರೂಪಾ ಆತ್ಮಹತ್ಯೆ ಯತ್ನ, ವರದಿ ಕೇಳಿದ ಪರಮೇಶ್ವರ]

PSI Roopa Suicide Attempt Case: Police Commissioner Megharikh gets Incomplete Report

ಚಿಕಿತ್ಸೆ ಪಡೆಯುತ್ತಿರುವ ಪಿಎಸ್​ಐ ರೂಪಾ ಅವರ ಹೇಳಿಕೆ ಪಡೆದ ಬಳಿಕ ಇನ್ಸ್ ಪೆಕ್ಟರ್ ಸಂಜೀವ್ ಗೌಡ ಅವರ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಇಲಾಖೆ ನಿರ್ಧರಿಸುವ ಸಾಧ್ಯತೆಯಿದೆ.[ಆತ್ಮಹತ್ಯೆಗೆ ಯತ್ನಿಸಿದ ಪಿಎಸ್ ಐ ರೂಪಾ]

ಮನುವನ ಸಿಸಿಡಿ ಕೊಲೆ ಕೇಸಿನಲ್ಲಿ ಅಮಾನತುಗೊಂಡಿದ್ದ ಇನ್ಸ್ ಪೆಕ್ಟರ್ ಸಂಜೀವ್ ಗೌಡ ಅವರು ಮತ್ತೆ ಅದೇ ಠಾಣೆಗೆ ನಿಯುಕ್ತಿಗೊಂಡಿದ್ದರು. ಈಗ ರೂಪ ಪ್ರಕರಣದಿಂದ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ.[ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]

ಈ ನಡುವೆ ರೂಪಾ ಆತ್ಮಹತ್ಯೆ ಯತ್ನ ಸಂಬಂಧ ಸುದ್ದಿವಾಹಿನಿ ಮತ್ತು ಪತ್ರಿಕೆಗಳಲ್ಲಿ ಪ್ರಸಾರವಾಗಿರುವ ವರದಿ ಆಧರಿಸಿ ಸ್ವಯಂ ದೂರು ದಾಖಲಿಸಿಕೊಂಡಿರುವುದಾಗಿ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದ್ದಾರೆ.[ಪೊಲೀಸರ ಆತ್ಮಹತ್ಯೆಗೆ ಪ್ರಮುಖ ಕಾರಣಗಳೇನು?]

ರೂಪಾ ಅವರು ಡಾರ್ಟ್ ಮತ್ತು ಪ್ಯಾರಸಿಟಮಾಲ್ ಮಾತ್ರೆಗಳನ್ನು ಅಧಿಕವಾಗಿ ಸೇವನೆಯಿಂದ ಲಿವರ್​ಗೆ ಹೆಚ್ಚಿನ ಪರಿಣಾಮವಾಗುವ ಸಾಧ್ಯತೆಯಿಂದ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈಗೆ ರವಾನಿಸಿರುವ ರಕ್ತದ ಮಾದರಿ ಪರೀಕ್ಷೆ ವರದಿ ಬರಬೇಕಾಗಿದೆ ಎಂದು ಸುಗುಣ ಆಸ್ಪತ್ರೆಯ ಡಾ ಶಶಿಕುಮಾರ್ ಹಾಗೂ ರವೀಂದ್ರ ಹೇಳಿದ್ದಾರೆ.

English summary
Commissioner Megharik gets Incomplete Report. Roopa who was the PSI in the Vijayanagar police station attempted suicide by consuming 23 paracetamol and dot tablets. no out of danger and getting treatment in Suguna hospital, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X