ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರಪತಿ ಇದ್ದರೂ ಆಂಬ್ಯುಲೆನ್ಸ್‌ಗೆ ದಾರಿಮಾಡಿಕೊಟ್ಟ ಪಿಎಸ್ಐ

By Prasad
|
Google Oneindia Kannada News

ಬೆಂಗಳೂರು, ಜೂನ್ 18 : ನಮ್ಮ ಮೆಟ್ರೋ ಉದ್ಘಾಟನೆಗೆಂದು ಬೆಂಗಳೂರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಂದಿದ್ದಾಗ, ಅವರ ವಾಹನಕ್ಕಿಂತ ರೋಗಿಯನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್‌ಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಸಬ್ ಇನ್‌ಸ್ಪೆಕ್ಟರ್ ನಿಜಲಿಂಗಪ್ಪ ಅವರ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ವಿಐಪಿಗಳು, ವಿವಿಐಪಿಗಳು ಬಂದಾಗ, ರಸ್ತೆಯ ಮೇಲೆ ಆಂಬ್ಯುಲೆನ್ಸ್ ಸೈರನ್ ಹೊಡೆದುಕೊಳ್ಳುತ್ತಿದ್ದರೂ ಮೊದಲು ಪ್ರಾಶಸ್ತ್ಯ ಸಿಗುವುದೇ ವಿವಿಐಪಿಗಳಿಗೆ. ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಸತ್ತರೂ ಅಡ್ಡಿಯಿಲ್ಲ, ರಸ್ತೆಯನ್ನು ಬ್ಲಾಕ್ ಮಾಡಿ ವಿವಿಐಪಿಗಳಿಗೆ ದಾರಿಮಾಡಿ ಕೊಡಲಾಗುತ್ತದೆ.

Read also : ಆಂಬುಲೆನ್ಸ್ ತಡೆದ ಪೊಲೀಸರು, ನಿಜಕ್ಕೂ ಆಗಿದ್ದೇನು?Read also : ಆಂಬುಲೆನ್ಸ್ ತಡೆದ ಪೊಲೀಸರು, ನಿಜಕ್ಕೂ ಆಗಿದ್ದೇನು?

ಅಂಥದ್ದರಲ್ಲಿ ಟ್ರಿನಿಟಿ ಜಂಕ್ಷನ್ ನಲ್ಲಿ ಪ್ರಣಬ್ ಮುಖರ್ಜಿಯವರು ವಾಹನ ಸಾಗುತ್ತಿದ್ದರೂ, ಅದನ್ನು ತಡೆದು ನಿಲ್ಲಿಸಿ ಆಂಬ್ಯುಲೆನ್ಸ್ ಸಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಹಲಸೂರು ಟ್ರಾಫಿಕ್ ಪೊಲೀಸ್ ಎಸ್ ಎಚ್ ನಿಜಲಿಂಗಪ್ಪ ಅವರು. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

PSI allows Ambulance before Pranab Mukherjee

ಒಂದೆಡೆ ಆಂಬ್ಯುಲೆನ್ಸ್ ಗೆ ದಾರಿಮಾಡಿಕೊಟ್ಟಿದ್ದಕ್ಕಾಗಿ ನಿಜಲಿಂಗಪ್ಪನವರಿಗೆ ಅಭಿನಂದನೆಗಳ ಸುರಿಮಳೆ ಸುರಿಯುತ್ತಿದ್ದರೆ, ಇದರಲ್ಲೇನಿದೆ ವಿಶೇಷ, ಅದು ಯಾವುದೇ ಟ್ರಾಫಿಕ್ ಪೊಲೀಸನ ಕರ್ತವ್ಯ ಎಂದು ವ್ಯಕ್ತಿಯೊಬ್ಬರು ಟ್ವೀಟಿಸಿದ್ದಾರೆ.

Read also : ಆ್ಯಂಬುಲೆನ್ಸ್ ಗಾಗಿ ದಾರಿ ಮಾಡಿಕೊಟ್ಟ ಸಿಎಂ ಭದ್ರತಾ ವಾಹನRead also : ಆ್ಯಂಬುಲೆನ್ಸ್ ಗಾಗಿ ದಾರಿ ಮಾಡಿಕೊಟ್ಟ ಸಿಎಂ ಭದ್ರತಾ ವಾಹನ

ವಸ್ತುಸ್ಥಿತಿಯೇನಿದೆಯೆಂದರೆ, ಈಗಿನ ಕಾಲದಲ್ಲಿ ಆಂಬ್ಯುಲೆನ್ಸ್ ಗೆ ಕೂಡ ದಾರಿಮಾಡಿ ಕೊಡುವುದು ಒಂದು ಹೆಗ್ಗಳಿಕೆಯಾಗಿಯೇ ಪರಿಗಣಿಸಲಾಗುತ್ತದೆ. ಆದರೂ, ಅಂಥ ಪರಿಸ್ಥಿತಿಯಲ್ಲಿ ರಾಷ್ಟ್ರಪತಿಯವರಿದ್ದರೂ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದು ಹೆಗ್ಗಳಿಕೆಯೇ.

ಇದಕ್ಕೆ ಬೆಂಗಳೂರು ನಗರ ಆಯುಕ್ತ ಪ್ರವೀಣ್ ಸೂದ್ ಅವರು ಪ್ರತಿಕ್ರಿಯಿಸಿದ್ದು, ನೀವು ಹೇಳುವುದು ಸರಿ. ಆದರೆ, ಟ್ರಾಫಿಕ್ ಪೊಲೀಸರ ಕೆಲಸ ತಿಳಿದಷ್ಟು ಸುಲಭವಲ್ಲ. ರಸ್ತೆಯಲ್ಲಿ ಅಂದುಕೊಂಡಿದ್ದಕ್ಕಿಂತ ಪರಿಸ್ಥಿತಿ ಗೋಜಲಾಗಿರುತ್ತದೆ. ಆದರೂ, ನಮ್ಮನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.

English summary
PSI SH Nijlingappa, Ulsoor traffic police, is rewarded for deftly allowing the ambulance before the 1st citizen of India when he was in Bengaluru to inaugurate Namma Metro green line.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X