ಪ್ರತಿಭಟನೆ, ಏ.22ರ ತನಕ ಬೆಂಗಳೂರಲ್ಲಿ ನಿಷೇಧಾಜ್ಞೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 20 : ಮಂಗಳವಾರ ಪಿಎಫ್‌ ನೀತಿ ವಿರೋಧಿಸಿ ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ನಡೆಸುವ ವೇಳೆ ನಡೆದ ಹಿಂಸಾಚಾರದ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಏಪ್ರಿಲ್ 20 ರಿಂದ 22ರ ಮಧ್ಯರಾತ್ರಿ 12 ಗಂಟೆಯ ತನಕ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರು ಈ ಕುರಿತು ಮಂಗಳವಾರ ರಾತ್ರಿ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. [ಮಂಗಳವಾರ ಬೆಂಗಳೂರ ಶಾಂತಿ ಕದಡಿದವರು ಯಾರು?]

ns megharikh

ಕೇಂದ್ರ ಸರ್ಕಾರ ರೂಪಿಸಿರುವ ನೂತನ ಪಿಎಫ್‌ (ಭವಿಷ್ಯ ನಿಧಿ) ನೀತಿ ವಿರೋಧಿಸಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿತ್ತು. ಸಂಚಾರ ವ್ಯವಸ್ಥೆಗೆ ತೊಂದರೆಯಾಗಿ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿತ್ತು. [ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಯ ಸಚಿತ್ರ ವಿವರ]

ಖುದ್ದಾಗಿ ಮಾಡಿದ ವಿಚಾರಣೆ ಬಳಿಕ ಮತ್ತು ಗುಪ್ತವಾರ್ತಾ ವಿಭಾಗದಿಂದ ಸಾಕಷ್ಟು ಮಾಹಿತಿ ಸಂಗ್ರಹಣೆ ಮಾಡಿರುವ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. [ಭವಿಷ್ಯ ನಿಧಿ ನೀತಿ ಬದಲು, ಸರ್ಕಾರ ಕೈ ಸುಟ್ಟಿಕೊಂಡಿದ್ದು ಹೇಗೆ?]

ನಿಷೇಧಾಜ್ಞೆಯಲ್ಲೇನಿದೆ?

* ಕಾನೂನುಭಂಗ ಉಂಟುಮಾಡುವ ಉದ್ದೇಶದಿಂದ 5 ಅಥವ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ
* ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ
* ದೊಣ್ಣೆ, ಕತ್ತಿ, ಕಲ್ಲು, ಇಟ್ಟಿಗೆ, ಚಾಕು ಇನ್ನೂ ಮುಂತಾದ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ
* ಯಾವುದೇ ಸ್ಫೋಟಕ ವಸ್ತು ಸಿಡಿಸುವುದು, ಒಯ್ಯವುದು, ಶೇಖರಿಸುವುದನ್ನು ನಿಷೇಧಿಸಲಾಗಿದೆ
* ವ್ಯಕ್ತಿಗಳ ಅಥವ ಶವಗಳ ಪ್ರತಿಕೃತಿ ದಹನ ಮಾಡುವಂತಿಲ್ಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru city police have imposed prohibitory orders under Section 144 CrPC in the entire city till April 22 in the wake of violent protests by garment workers against the new policy of the Union government on provident fund withdrawals.
Please Wait while comments are loading...